Advertisement

ಆಗ ಪಡಿತರ ಚೀಟಿ ಕಷ್ಟ, ಈಗ ತ್ಯಾಜ್ಯ ವಿಲೆ ಕಷ್ಟ

06:25 AM Jul 23, 2017 | Team Udayavani |

ಉಡುಪಿ: ಅಂದು ಬಡಜನರಿಗೆ ಮನೆ, ಪಡಿತರ ಚೀಟಿ ಮಾಡಿಕೊಡುವುದು ದೊಡ್ಡ ಸಮಸ್ಯೆಯಾಗುತ್ತಿತ್ತು.  ಅದು ಈಗ ಸುಲಭವಾಗಿದೆ. ಆದರೆ ಈಗ ತ್ಯಾಜ್ಯ ವಿಲೇವಾರಿ ಮಾಡುವುದು ದೊಡ್ಡ  ಸಮಸ್ಯೆಯಾಗಿದೆ. ಹಿಂದಿನ ಕಾಲದಲ್ಲಿ ಕೆಲವೊಂದು ವಸ್ತುಗಳನ್ನು ಮರುಬಳಕೆ ಮಾಡುತ್ತಿದ್ದ ಕಾರಣ ತ್ಯಾಜ್ಯ ಅಷ್ಟು ಉತ್ಪತ್ತಿ ಆಗುತ್ತಿರಲಿಲ್ಲ. ಇಂದು ಯಾವುದೇ ವಸ್ತು ಮರುಬಳಕೆಯಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌  ಹೇಳಿದರು .

Advertisement

ಅವರು  ಶನಿವಾರ ಅಜ್ಜರಕಾಡು ಪುರಭವನದಲ್ಲಿ ಡಾ| ಜಿ.ಶಂಕರ್‌ ಮಹಿಳಾ ಪ್ರಥಮ ದರ್ಜೆ ಕಾಲೇಜು, ದೈಹಿಕ ಶಿಕ್ಚಣ ವಿಭಾಗ, ಉಜ್ವಲ್‌ ಡೆವಲಪರ್, ಲಯನ್ಸ್‌ ಕ್ಲಬ್‌ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗೆ ಸ್ವರಕ್ಷಣಾ ಕಲಾ ತರಬೇತಿ ಶಿಬಿರವನ್ನು ಉದ್ಘಾಟಿಸಿದರು.

ಪ್ರಾಂಶುಪಾಲ ಪ್ರೊ| ಜಗದೀಶ್‌ ರಾವ್‌ ಅಧ್ಯಕ್ಷತೆ ವಹಿಸಿದರು. ಲಯನ್ಸ್‌ ಪ್ರಥಮ ಉಪ ಜಿಲ್ಲಾ ಗವರ್ನರ್‌ ತಲ್ಲೂರು ಶಿವರಾಮ ಶೆಟ್ಟಿ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಹರೀಶ್‌ ಎಮ್‌.ಯು., ಆತ್ಮರಕ್ಷಣಾ ಕಲಾ ತರಬೇತುದಾರ ಕಾರ್ತಿಕ್‌ ಎಸ್‌. ಕಟೀಲ್‌ ಉಪಸ್ಥಿತರಿದ್ದರು.ಉಪನ್ಯಾಸಕ ಡಾ| ರೋಶನ್‌ ಕುಮಾರ್‌ ಶೆಟ್ಟಿ  ಸ್ವಾಗತಿಸಿ, ಪ್ರಕಾಶ್‌ ಕ್ರಮಧಾರಿ ಕಾರ್ಯಕ್ರಮ ನಿರೂಪಿಸಿದರು. ರಾಮ ರಾವ್‌ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next