Advertisement
ದಿನಕ್ಕೆ ಸರಾಸರಿ 300 ಕಿ.ಮೀ. ಸಾಗುತ್ತಿತ್ತು ರಥಯಾತ್ರೆ. ಆ ದೈನಂದಿನ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರಮುಖ ಪಟ್ಟಣಗಳಲ್ಲಿ ಆಡ್ವಾಣಿಯವರು ಬಹಿರಂಗ ಸಮಾವೇಶ ನಡೆಸುತ್ತಿದ್ದರು. ಸಮಾರಂಭಕ್ಕೆ ಆಗಮಿಸುವ ಬೃಹತ್ ಜನಸ್ತೋಮಕ್ಕೆ ಕರಪತ್ರಗಳನ್ನು ವಿತರಿಸಲಾಗುತ್ತಿತ್ತು. ಅಯೋಧ್ಯೆಯಲ್ಲಿ ಕಟ್ಟಲು ಉದ್ದೇಶಿಸಿದ್ದ ರಾಮ ಮಂದಿರದ ವಿನ್ಯಾಸದ ಚಿತ್ರಗಳನ್ನು ಸಭಿಕರಿಗೆ ಹಂಚಲಾಗುತ್ತಿತ್ತು.
Related Articles
Advertisement
ಆಡ್ವಾಣಿ, ಜೋಷಿ ಹಾಗೂ ಇತರರ ವಿರುದ್ಧ ಆರೋಪ…ಡಿಸೆಂಬರ್ 6, 1992: ಅಯೋಧ್ಯೆಯಲ್ಲಿ ಸಾಗರೋಪಾದಿಯಲ್ಲಿ ಜನ ನೆರೆದಿದ್ದರು. ಆ ವೇಳೆ ನೋಡನೋಡುತ್ತಿದ್ದಂತೆಯೇ ಉದ್ರಿಕ್ತ ಗುಂಪು ವಿವಾದಿತ ಕಟ್ಟಡ ಬಾಬರಿ ಮಸೀದಿಯನ್ನು ಧ್ವಂಸಮಾಡಿಬಿಟ್ಟಿತು. ಈ ವಿಚಾರವಾಗಿ ಎರಡು ಎಫ್ಐಆರ್ ದಾಖಲಾದವು. ಎಫ್ಐಆರ್ ನಂಬರ್ 197(ಮಸೀದಿ ಧ್ವಂಸ)- ಲಕ್ಷಾಂತರ ಕರಸೇವಕರ ವಿರುದ್ಧ ಕೇಸ್ ಎಫ್ಐಆರ್ ನಂಬರ್ 198(ಕ್ರಿಮಿನಲ್ ಸಂಚು)-ಆಡ್ವಾಣಿ, ಮುರಳಿ ಮನೋಹರ ಜೋಷಿ, ಅಶೋಕ್ ಸಿಂಘಾಲ್, ಬಾಳಾ ಠಾಕ್ರೆ, ಉಮಾ ಭಾರತಿ ಸೇರಿದಂತೆ ಇತರೆ 49 ಪ್ರಮುಖರ ವಿರುದ್ಧ ದೂರು ದಾಖಲು. ಅಕ್ಟೋಬರ್ 8, 1993: ಎರಡೂ ಪ್ರಕರಣಗಳನ್ನೂ ಒಂದಾಗಿಸಿ ವಿಚಾರಣೆ ನಡೆಸಬೇಕೆಂದು ಉತ್ತರ ಪ್ರದೇಶ ಸರಕಾರದಿಂದ ನೋಟಿಫಿಕೇಷನ್ ಜಾರಿ. ಅಕ್ಟೋಬರ್ 10, 1993: ಇವೆರಡೂ ಪ್ರಕರಣಗಳನ್ನು ಬೆಸೆದ ಸಿಬಿಐ, ಆಡ್ವಾಣಿ, ಬಿಜೆಪಿಯ ಇತರ ನಾಯಕರು ಸೇರಿದಂತೆ 13 ಜನರ ಮೇಲೆ ಪಿತೂರಿಯ ಆರೋಪ ಹೊರಿಸಿ ಚಾರ್ಜ್ ಶೀಟ್ ಸಿದ್ಧಪಡಿಸಿತು. ಲಕ್ನೋ ಕೋರ್ಟ್, ಈ ಪ್ರಕರಣಗಳಿಗೆ ಕ್ರಿಮಿನಲ್ ಸಂಚು ಎಂಬ ಆರೋಪವನ್ನು ಸೇರಿಸಿತು. ಮೇ 4, 2001: ರಾಯ್‌ಬರೇಲಿಯ ವಿಶೇಷ ನ್ಯಾಯಾಲಯವು ಎಫ್ಐಆರ್ ನಂ 197 ಹಾಗೂ 198 ಅನ್ನು ಪ್ರತ್ಯೇಕಿಸಬೇಕೆಂದು ಆದೇಶ ನೀಡಿತು. ಅಲ್ಲದೇ ಎಲ್.ಕೆ.ಆಡ್ವಾಣಿ, ಕಲ್ಯಾಣ್ ಸಿಂಗ್ ಒಳಗೊಂಡು 13 ನಾಯಕರ ವಿರುದ್ಧ ದಾಖಲಾಗಿದ್ದ ಚಾರ್ಜ್‌ಶೀಟ್ ಅನ್ನು ರದ್ದುಗೊಳಿಸಿತು. 2003: ಸಿಬಿಐ ಪೂರಕ ಚಾರ್ಜ್‌ಶೀಟ್ ಸಲ್ಲಿಸಿತು. ಆದರೆ ಆಡ್ವಾಣಿ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ರಾಯ್‌ಬರೇಲಿ ಕೋರ್ಟ್ ತೀರ್ಪು ನೀಡಿತು. ಪ್ರಕರಣದಲ್ಲಿ ಉ.ಪ್ರದೇಶ ಹೈಕೋರ್ಟ್ ಪ್ರವೇಶ. ಪಿತೂರಿ ಆರೋಪಗಳನ್ನು ಕೈಬಿಟ್ಟು, ವಿಚಾರಣೆ ಆರಂಭ. ಜೂನ್ 2009: ಬಾಬರಿ ಮಸೀದಿ ನೆಲಕ್ಕುರುಳಿದ 17 ವರ್ಷ ಗಳ ಅನಂತರ ತನಿಖಾ ವರದಿ ಸಲ್ಲಿಸಿದ ಲೆಬ್ರಹಾನ್ ಸಮಿತಿ.
ಮೇ 20, 2010: ಆಡ್ವಾಣಿಯವರನ್ನು “ಕ್ರಿಮಿನಲ್ ಸಂಚಿನ’ ಆರೋಪದಿಂದ ಮುಕ್ತಗೊಳಿಸಿ, 2001ರ ರಾಯ್‌ಬರೇಲಿ ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ ಹೈಕೋರ್ಟ್. ಪ್ರಕರಣದ ವಿಚಾರಣೆಯನ್ನು ರಾಯ್‌ಬರೇಲಿಯ ವಿಶೇಷ ನ್ಯಾಯಾಲಯದಲ್ಲೇ ಪ್ರತ್ಯೇಕವಾಗಿ ನಡೆಸಬೇಕೆಂದು ಆದೇಶ. ಫೆಬ್ರವಲಿ 2011: ಕ್ರಿಮಿನಲ್ ಪಿತೂರಿಯ ವಿಚಾರವನ್ನು ಪುನರುಜ್ಜೀವಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಬಿಐ. ಏಪ್ರಿಲ್ 19, 2017: 2010ರಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಆಡ್ವಾಣಿ, ಜೋಶಿ ಸೇರಿದಂತೆ ಇತರ 12 ಜನರ ಮೇಲೆ ಕ್ರಿಮಿನಲ್ ಪಿತೂರಿಯ ಆರೋಪಿಗಳನ್ನಾಗಿಸಿತು. ಇದಷ್ಟೇ ಅಲ್ಲದೆ,
ಎಫ್ಐಆರ್ 197 ಮತ್ತು 198ನ್ನು ಲಕ್ನೋದಲ್ಲಿನ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕೆಂದೂ ಹಾಗೂ ಎರಡು ವರ್ಷದಲ್ಲಿ ವಿಚಾರಣೆ ಪೂರ್ಣಗೊಳ್ಳಬೇಕೆಂದು ಆದೇಶ ನೀಡಿತು. ಮೇ 21, 2017: ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ವಿಚಾರಣೆ ಕೈಗೆತ್ತಿಕೊಂಡ ವಿಶೇಷ ಸಿಬಿಐ ನ್ಯಾಯಾಲಯ. ಜಾಮೀನು ಪಡೆಯಲು ಆರೋಪಿಗಳೆಲ್ಲರೂ ನ್ಯಾಯಾಲಯಕ್ಕೆ ಹಾಜರು. ಎರಡು ವರ್ಷವಾದರೂ ಮುಗಿಯದ ವಿಚಾರಣೆ. ಮೇ 8, 2020: ಹೊಸ ಡೆಡ್‌ಲೈನ್ ನಿಗದಿ ಪಡಿಸಿದ ಸುಪ್ರೀಂ ಕೋರ್ಟ್. ಆಗಸ್ಟ್ 31, 2020ರ ವೇಳೆಗೆ ವಿಚಾರಣೆ ಪೂರ್ಣಗೊಳಿಸುವಂತೆ ಆದೇಶ. ಕೋವಿಡ್-19 ಕಾರಣದಿಂದ ಮತ್ತೆ ಒಂದು ತಿಂಗಳು(ಸೆಪ್ಟrಂಬರ್ 30) ಡೆಡ್‌ಲೈನ್ ಮುಂದೂಡಿಕೆ. ಸೆಪ್ಟಂಬರ್ 1, 2020: ಪ್ರಕರಣದಲ್ಲಿ ಕೊನೆಯ ವಾದವನ್ನು ಆಲಿಸಿದ ಸಿಬಿಐ ವಿಶೇಷ ನ್ಯಾಯಾಲಯ. ಸೆಪ್ಟೆಂಬರ್ 30, 2020: ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ. ಯಾದವ್‌ರಿಂದ ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟ. ಪ್ರಮುಖ ಆರೋಪಿಗಳಾಗಿದ್ದ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ ಸೇರಿದಂತೆ ಎಲ್ಲ ಆರೋಪಿಗಳು ನಿರ್ದೋಷಿಗಳೆಂದು ತೀರ್ಪು.