Advertisement
ರಾಸಲೀಲೆ ವಿಡಿಯೋ ಕುರಿತು ಹುಟ್ಟಿಕೊಂಡ ಅಂತೆ-ಕಂತೆಗಳು, ವಿಡಿಯೋ ಬಿಡುಗಡೆ ಬಳಿಕ ಸ್ವಾಮೀಜಿ ನಾಪತ್ತೆ. ಬಳಿಕ ಮಾಧ್ಯಮಗಳ ಮುಂದೆ ಬ್ಲ್ಯಾಕ್ ಮೇಲ್ ಮಾಡಿ ಹಣ ಪಡೆಯಲಾಗಿದೆ ಎಂದು ಹಲವರ ವಿರುದ್ಧ ಆರೋಪ, ಈ ಎಲ್ಲಾ ಪ್ರಹಸನಗಳ ಮಧ್ಯೆಯೇ ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಪೊಲೀಸ್ ತನಿಖೆ ಆರಂಭವಾಗಿದೆ.
Related Articles
Advertisement
ಇದನ್ನು ಮಾಡಬಾರದು ಎಂದರೆ 5 ಕೋಟಿ ರೂ. ನೀಡಬೇಕು ಎಂದು ಬೆದರಿಸಿದ. ಈ ವೇಳೆ ನಾನು ಯಾವ ಹುಡುಗಿಯನ್ನೂ ಮೀಟ್ ಮಾಡಿಲ್ಲ, ನಕಲಿ ವಿಡಿಯೋ ಮಾಡಿಕೊಂಡು ಬೆದರಿಸುತ್ತಿದ್ದೀರಿ ಎಂದು ಆರೋಪ ನಿರಕಾರಿಸಿದೆ. ಆದರೆ, ಅಷ್ಟಕ್ಕೆ ಸುಮ್ಮನಾಗದ ಆತ ” ನೀನು ಮಠದ ಸ್ವಾಮೀಜಿ, ಈ ವಿಡಿಯೋ ಬಿಟ್ಟರೆ ಜನ ನಂಬೇ ನಂಬಾ¤ರೆ, ಇದರ ಬಗ್ಗೆ ಮತ್ತಷ್ಟು ಡಿಟೈಲ್ ಬೇಕಾದರೆ ಹಲಸೂರು ಪೊಲೀಸ್ ಠಾಣೆ ಹತ್ತಿರ ಬಾ ಎಂದು ಹೊರಟು ಹೋದ.
ಮಾರನೇ ದಿನ ಧರ್ಮೇಂದ್ರ ಎಂಬುವವನು ಪುನ: 5 ಕೋಟಿ.ರೂಗಳಿಗೆ ಡಿಮ್ಯಾಂಡ್ ಮಾಡಿದ. ನಾನು ಆರಂಭದಲ್ಲಿ ಮೂರರಿಂದ ನಾಲ್ಕು ಲಕ್ಷ ನೀಡಲು ಒಪ್ಪಿದರೂ ಮಠದ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ 45 ಲಕ್ಷ ರೂ. ಕೊಡಲು ಒಪ್ಪಿಕೊಂಡಿದ್ದೆ ಎಂದು ಸ್ವಾಮೀಜಿ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಬ್ಲಾಕ್ ಮೇಲ್ ಮಾಡಿ ಹಂತ ಹಂತವಾಗಿ 90 ಲಕ್ಷ ಪಡೆದುಕೊಂಡಿದ್ದಾರೆ ಎಂದಿದ್ದಾರೆ.
ವಿಷಪ್ರಾಶನ!: ಡಿಮ್ಯಾಂಡ್ ಮಾಡಿದಾಗ ಹಣ ನೀಡಲು ಸಾಧ್ಯವಾಗದೇ ಸಾಯುವ ನಿರ್ಧಾರ ಮಾಡಿದ್ದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದೆ. ಇದನ್ನು ನೋಡಿಕೊಂಡಿದ್ದ ಮಲ್ಲಿಕಾರ್ಜುನಯ್ಯ ಅವರು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೊಲೆ ಬೆದರಿಕೆ..: ಇದಾದ ಬಳಿಕ ಆರೋಪಿಗಳು ಮಠಕ್ಕೆ ಸೇರಿದ ಸರ್ವೆ ನಂಬರ್ 184ರಲ್ಲಿನ 9.5 ಎಕರೆ ಆಸ್ತಿಯನ್ನು ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಈ ವಿಚಾರ ತಿಳಿದ ಕೂಡಲೇ ನಾನು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಸಮಸ್ಯೆ ಇತ್ಯರ್ಥಪಡಿಸಿಕೊಂಡೆ.
ಇದಾದ ಬಳಿಕ ಮತ್ತೋರ್ವ ಆರೋಪಿ ಮಹೇಶ್, 2017ರ ಅ. 10ರಂದು ಮಠದ ಕಾಲೇಜಿನ ಬಳಿ ಬಂದು ನಕಲಿ ವಿಡಿಯೋ ಇದೆ ಎಂದು ಬೆದರಿಸಿ 4 ಎಕರೆ ಜಮೀನು ಸುಬ್ಬಮ್ಮ ಎಂಬುವವರ ಹೆಸರಿಗೆ ವರ್ಗಾಯಿಸು, ಇಲ್ಲವೇ 2 ಕೋಟಿ ನೀಡು ಎಂದು ಬೆದರಿಕೆ ಹಾಕಿದ. ಈ ವಿಚಾರ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ನಾಲ್ವರು ಆರೋಪಿಗಳು ಹೆದರಿಸಿದ್ದಾರೆ ಎಂದು ಸ್ವಾಮೀಜಿ ದೂರಿನಲ್ಲಿ ಆರೋಪಿಸಿದ್ದಾರೆ.
* ಮಂಜುನಾಥ್ ಲಘುಮೇನಹಳ್ಳಿ