ಬೆಂಗಳೂರು: ನಿರೀಕ್ಷೆಯಂತೆ ಕರ್ನಾಟಕ-ಬಂಗಾಲ ನಡುವಿನ ರಣಜಿ ಪಂದ್ಯ ಡ್ರಾಗೊಂಡಿದೆ. ಇಲ್ಲಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆದ ಎಲೈಟ್ ಸಿ ವಿಭಾಗದ ಮುಖಾಮುಖೀಯಲ್ಲಿ ಗೆಲುವಿಗೆ 364 ರನ್ ಗುರಿ ಪಡೆದ ಕರ್ನಾಟಕ, ಪಂದ್ಯ ಮುಗಿಯುವ ವೇಳೆ 3 ವಿಕೆಟಿಗೆ 110 ರನ್ ಗಳಿಸಿತ್ತು.
80 ರನ್ ಇನ್ನಿಂಗ್ಸ್ ಮುನ್ನಡೆ ಗಳಿಸಿದ ಬಂಗಾಲ, ದ್ವಿತೀಯ ಸರದಿಯಲ್ಲಿ 5ಕ್ಕೆ 283 ರನ್ ಗಳಿಸಿ ಡಿಕ್ಲೇರ್ ಮಾಡಿತು. ವನ್‌ಡೌನ್ ಬ್ಯಾಟರ್ ಸುದೀಪ್ ಘರಾಮಿ ಅವರ ಶತಕ ಬಂಗಾಲ ಸರದಿಯ ಆಕರ್ಷಣೆ ಆಗಿತ್ತು. ಸುದೀಪ್ ಗಳಿಕೆ ಅಜೇಯ 101 ರನ್ (193 ಎಸೆತ, 12 ಬೌಂಡರಿ, 2 ಸಿಕ್ಸರ್). ಇವರ ಸೆಂಚುರಿ ಪೂರ್ತಿಯಾದೊಡನೆ ಬಂಗಾಲದ ನಾಯಕ ಅನುಸ್ತೂಪ್ ಮಜುಮಾªರ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು. ಆಗ ಕೀಪರ್ ವೃದ್ಧಿಮಾನ್ ಸಹಾ 63 ರನ್ ಗಳಿಸಿ ಅಜೇಯರಾಗಿದ್ದರು. ಈ ಜೋಡಿ ಮುರಿಯದ 6ನೇ ವಿಕೆಟಿಗೆ 123 ರನ್ ಪೇರಿಸಿತು. ವಿದ್ಯಾಧರ್ ಪಾಟೀಲ್ 3, ಅಭಿಲಾಷ್ ಶೆಟ್ಟಿ ಮತ್ತು ವಿ. ಕೌಶಿಕ್ ಒಂದೊಂದು ವಿಕೆಟ್ ಉರುಳಿಸಿದರು.
ಚೇಸಿಂಗ್ ವೇಳೆ ಮಾಯಾಂಕ್ ಅಗರ್ವಾಲ್ (5) ಮತ್ತು ಕಿಶನ್ ಬೆಡಾರೆ (5) ಅವರನ್ನು ಕರ್ನಾಟಕ ಬೇಗನೇ ಕಳೆದುಕೊಂಡಿತು. ಸ್ಮರಣ್ ಆರ್. ಅಜೇಯ 35, ಶ್ರೇಯಸ್ ಗೋಪಾಲ್ 32 ಮತ್ತು ಮನೀಷ್ ಪಾಂಡೆ ಅಜೇಯ 30 ರನ್ ಮಾಡಿದರು.
ಕರ್ನಾಟಕದ ಮುಂದಿನ ಎದುರಾಳಿ ಉತ್ತರಪ್ರದೇಶ. ಈ ಪಂದ್ಯ ನ. 13ರಂದು ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ಬಂಗಾಲ-301 ಮತ್ತು 5 ವಿಕೆಟಿಗೆ 283 ಡಿಕ್ಲೇರ್ (ಸುದೀಪ್ ಘರಾಮಿ ಔಟಾಗದೆ 101, ಸಹಾ ಔಟಾಗದೆ 63, ಸುದೀಪ್ ಚಟರ್ಜಿ 48, ಪಾಟೀಲ್ 53ಕ್ಕೆ 3). ಕರ್ನಾಟಕ-221 ಮತ್ತು 3 ವಿಕೆಟಿಗೆ 110 (ಸ್ಮರಣ್ ಔಟಾಗದೆ 35, ಶ್ರೇಯಸ್ 32 ಮತ್ತು ಪಾಂಡೆ ಔಟಾಗದೆ 30, ಸೂರಜ್ ಜೈಸ್ವಾಲ್ 27ಕ್ಕೆ 3). ಪಂದ್ಯಶ್ರೇಷ್ಠ: ಅನುಸ್ತೂಪ್ ಮಜುಮಾªರ್.