Advertisement
ಚಿತ್ರಮಂದಿರದ ಸಮಸ್ಯೆ, ಒಂದೇ ವಾರ ಹಲವು ಚಿತ್ರಗಳ ಬಿಡುಗಡೆ, ಅದರಲ್ಲಿ ಯಾವ್ದುನ್ನು ನೋಡಬೇಕೆಂಬ ಪ್ರೇಕ್ಷಕನ ಗೊಂದಲ … ಇವೆಲ್ಲಾ ಬರೀ ಕನ್ನಡ ಚಿತ್ರರಂಗದ ಸಮಸ್ಯೆ ಅಲ್ಲ. ಈಗ ಈ ಸಮಸ್ಯೆ ತುಳು ಚಿತ್ರರಂಗಕ್ಕೂ ಶಿಫ್ಟ್ ಆಗಿದೆ. ತುಳು ಚಿತ್ರರಂಗದಲ್ಲಿ ಕೆಲವು ವರ್ಷಗಳಿಂದ ಚಟುವಟಿಕೆಗಳು ಗರಿಗೆದರಿವೆ, ಹಲವು ಚಿತ್ರಗಳು ಬಿಡುಗಡೆಯಾಗುತ್ತಿವೆ. ಹೀಗೆ ಚಿತ್ರರಂಗ ಕ್ರಮೇಣ ಬೆಳೆಯುತ್ತಿದ್ದಂತೆಲ್ಲಾ, ಸಮಸ್ಯೆಗಳು ಆವರಿಸಿಕೊಳ್ಳುತ್ತಿವೆ. ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಚಿತ್ರಮಂದಿರಕ್ಕಾಗಿ,ಬಿಡುಗಡೆಯ ದಿನಾಂಕಕ್ಕಾಗಿ ಸ್ಪರ್ಧೆ ಏರ್ಪಟ್ಟಿದೆ. ಅದಕ್ಕೆ ಸರಿಯಾಗಿ ಕರಾವಳಿ ಪ್ರದೇಶದಲ್ಲಿ ಕಳೆದ ವಾರ ಮೊದಲ ಬಾರಿಗೆ ಎರಡು ತುಳು ಚಿತ್ರಗಳು ಬಿಡುಗಡೆಯಾಗಿವೆ. ಸ್ಪರ್ಧೆ ಇರಬೇಕು ನಿಜ. ಯಾರಿಗಾದರೂ ಲಾಭವಾಗುವಂತಹ ಅಥವಾ ಚಿತ್ರರಂಗದ ಏಳಿಗೆಗೆ ಪೂರಕವಾಗುವ ಸ್ಪರ್ಧೆಯಾದರೆ ಅದು ಒಳ್ಳೆಯದೇ. ಆದರೆ, ಈ ಸ್ಪರ್ಧೆಯಿಂದ ನಿರ್ಮಾಪಕರಿಗೆ ನಷ್ಟವಾಗುತ್ತಿದೆಯೇ ಹೊರತು ಲಾಭವಂತೂ ಅಲ್ಲ. ಮೊದಲೇ ಹೇಳಿ ದಂತೆ ತುಳು ಚಿತ್ರರಂಗ ಈಗಷ್ಟೇ ಬೆಳೆಯುತ್ತಿರುವ ಚಿತ್ರರಂಗ. ಅದರ ವ್ಯಾಪ್ತಿ ಚಿಕ್ಕದು.
“ಅಪ್ಪೆ ಟೀಚರ್’ ಹಾಗೂ “ತೊಟ್ಟಿಲ್’ ಚಿತ್ರಗಳ ಪೈಕಿ ಎರಡೂ ಚಿತ್ರಗಳಿಗೆ ಹೇಳಿಕೊಳ್ಳು ವಂತಹ ಲಾಭವೇನು ಆಗಿಲ್ಲ. ಒಂದೇ ದಿನ
ಎರಡು ಸಿನಿಮಾ ಬಿಡುಗಡೆ ಮಾಡೋದು ತಪ್ಪಾ ಎಂದು ನೀವು ಕೇಳಬಹುದು. ಖಂಡಿತಾ ತಪ್ಪಲ್ಲ ಆದರೆ, ತುಳು ಚಿತ್ರರಂಗದ ವ್ಯಾಪ್ತಿ, ವಿಸ್ತೀರ್ಣವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಮಂಗಳೂರು, ಉಡುಪಿ, ಬೆಳ್ತಂಗಡಿ, ಮೂಡಬಿದಿರೆ, ಕಾರ್ಕಳ, ಮಣಿಪಾಲ… ಹೀಗೆ ಕೆಲವೇ ಕೆಲವು ಕಡೆ ತುಳು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಒಂದು
ಸುತ್ತು ತಿರುಗಿ ಬಂದರೂ ನಿಮಗೆ 10 ರಿಂದ 13 ಚಿತ್ರಮಂದಿರಗಳಷ್ಟೇ ಸಿಗುತ್ತವೆ. ಈ 13 ಚಿತ್ರಮಂದಿರಗಳು ಕೇವಲ ತುಳು ಸಿನಿಮಾಗಳನ್ನೇ ಹಾಕುತ್ತವೇ ಎಂದಲ್ಲ. ಕನ್ನಡ ಸೇರಿದಂತೆ ಇತರ ಭಾಷೆಯ ಚಿತ್ರಗಳು ಇಲ್ಲಿ ಪ್ರದರ್ಶನ ಕಾಣುತ್ತವೆ. ಅದರ ಮಧ್ಯೆ ತುಳು ಸಿನಿಮಾ. ಹೀಗಿರುವಾಗ ರಕ್ಕೆರಡು
ಚಿತ್ರಗಳು ಸ್ಪರ್ಧೆ ಯಲ್ಲಿ ಬಂದರೆ ಸರಿಯಾಗಿ ಚಿತ್ರಮಂದಿರಗಳು ಯಾವ ಸಿನಿ ಮಾಕ್ಕೆ ಸಿಗುತ್ತವೆ ಹೇಳಿ. ಜೊತೆಗೆ ತುಳು ಸಿನಿಮಾ
ನೋಡುವ ಪ್ರೇಕ್ಷಕರು ಕೂಡಾ ಈಗಷ್ಟೇ ತುಳು ಸಿನಿಮಾಗಳಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಏಕಾಏಕಿ ಎರಡು ಸಿನಿಮಾಗಳು ಬಂದರೆ ಯಾವುದನ್ನು ನೋಡೋದು, ಯಾವುದನ್ನು ಬಿಡೋದು ಎಂಬ ಗೊಂದಲ ಸಹಜವಾಗಿ ಪ್ರೇಕ್ಷಕನಿಗೆ ಎದುರಾಗೋದು ಸಹಜ.
Related Articles
ಅದರಂತೆ ನಡೆದುಕೊಂಡು ಬಂತು ಕೂಡಾ. ಆದರೆ, ಈ ನಿಯಮ ಕೇವಲ ಸಂಘದಲ್ಲಿ ಸದಸ್ಯರಾದವರಿಗೆ ಮಾತ್ರ ಅನ್ವಯವಾಗುತ್ತಿತ್ತು. ಸದಸ್ಯರಲ್ಲದವರು ಈ ನಿಯಮಕ್ಕೆ ತಲೆ¸ ಬಾಗಬೇಕಾಗಿರಲಿಲ್ಲ. ಇದೇ ಕಾರಣದಿಂದ ಈ ವಾರ ಎರಡು ಸಿನಿಮಾ
ಬಿಡುಗಡೆಯಾಗಿದೆ. ಜೊತೆಗೆ ಸಣ್ಣ ಮುನಿಸು, “ಇದು ಬೇಕಿತ್ತಾ’ ಎಂಬ ಮಾತುಗಳು ಕೇಳಿಬಂದಿವೆ. ಅದೇ ಕಾರಣದಿಂದ ತುಳು
ಚಿತ್ರ ನಿರ್ಮಿಸುವ ಎಲ್ಲರನ್ನು ಸಂಘ ದ ಸದಸ್ಯರನ್ನಾಗಿಸಲು ಸಂಘ ತೀರ್ಮಾನಿಸಿದೆ.
Advertisement
ಈ ಬಗ್ಗೆ ಮಾತನಾಡುವ ತುಳು ಸಿನಿ ಮಾ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್, “ಒಂದು ಸಿನಿಮಾ ಬಿಡುಗಡೆಯಾಗಿ ಮೂರು ವಾರ ಯಾವುದೇ ಸಿನಿಮಾ ಬಿಡುಗಡೆಯಾಗಬಾರದು ಎಂಬ ನಿಯಮ ಮಾಡಿದ್ದೇವೆ. ಆದರೆ, ಸಂಘದ ಸದಸ್ಯರಲ್ಲದವರಿಗೆ ಈ ನಿಯಮ ಅನ್ವಯವಾಗದ ಕಾರಣ, ಕಳೆದ ವಾರ ಎರಡು ಸಿನಿಮಾಗಳು ಒಟ್ಟೊಟ್ಟಿಗೆ ಬಿಡುಗಡೆಯಾಗಿವೆ ಮತ್ತು ಇಬ್ಬರಿಗೂ ಅದರಿಂದ ತೊಂದರೆಯಾಗಿದೆ. ಮುಂದೆ ಎಲ್ಲರನ್ನೂ ಒಟ್ಟು ಸೇರಿಸಿ, ತುಳು ಚಿತ್ರರಂಗದ ಒಳಿತಿಗೆ ಶ್ರಮಿಸಬೇಕಿದೆ’ ಎನ್ನುತ್ತಾರೆ ರಾಜೇಶ್. ಇದೇ ವೇಳೆ ತುಳು ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ಇರುವುದನ್ನು ಅವರು ಒಪ್ಪಿಕೊಳ್ಳುತ್ತಾರೆ. “ಮುಖ್ಯವಾಗಿ ತುಳು ಸಿನಿಮಾಗಳಿಗೆ ಚಿತ್ರಮಂದಿರದ ಸಮಸ್ಯೆ ಇದೆ. ಈಗ ಸಿಗೋದು 10 ರಿಂದ 13 ಚಿತ್ರಮಂದಿರಗಳು. ಸುಬ್ರಮಣ್ಯ, ಮೂಲ್ಕಿ, ಸುಳ್ಯ, ಕಟಪಾಡಿ … ಹೀಗೆ ಅನೇಕ ಕಡೆ ಚಿತ್ರಮಂದಿರಗಳಿಲ್ಲ. ಈ ಹಿಂದೆ ವಿಡಿಯೋ ಥಿಯೇಟರ್ ಇದ್ದಂತೆ ಸರ್ಕಾರ ಮಿನಿ ಚಿತ್ರಮಂದಿರ ಮಾಡಲು ಅನುಮತಿ ಕೊಟ್ಟರೆ ನಾವೇ ಚಿತ್ರಮಂದಿರ ಮಾಡಿಕೊಂಡು, ತುಳು ಸಿನಿಮಾಗಳನ್ನು ಇನ್ನೂ ಹೆಚ್ಚು ಜನಕ್ಕೆ ತಲುಪಿಸುತ್ತೇವೆ’ ಎನ್ನುವುದು ರಾಜೇಶ್ ಮಾತು. ಟ್ರೆಂಡ್ ಬದಲಾಗಬೇಕಿದೆ: ತುಳು ಚಿತ್ರರಂಗದ ಮೂಲ ಬೇರು ಇರೋದು ತುಳು ರಂಗಭೂಮಿಯಲ್ಲಿ. ಅಲ್ಲಿಂದ ಪ್ರೇರೇಪಿತಗೊಂಡೇ ಬಹುತೇಕ ಸಿನಿಮಾಗಳು ಬರುತ್ತಿವೆ. ಹಾಗಾಗಿಯೇ ತುಳು ಸಿನಿಮಾ ಎಂದರೆ ಅದೊಂದು ಕಾಮಿಡಿ ಹಿನ್ನೆಲೆಯ ಸಿನಿಮಾ
ಎಂಬಂತಾಗಿದೆ. ಅದಕ್ಕೆ ಸರಿಯಾಗಿ ಇತ್ತೀಚಿನ ಐದಾರು ವರ್ಷಗಳಲ್ಲಿ ಬಂದ ಬಹುತೇಕ ಸಿನಿಮಾಗಳು ಕಾಮಿಡಿ ಜಾನರ್‌ನಲ್ಲೇ ಗುರುತಿಸಿಕೊಂಡಿವೆ. ಆರಂಭದಲ್ಲಿ ಸಿಕ್ಕ ಯಶಸ್ಸು ಈಗ ಕಡಿಮೆಯಾಗುತ್ತಿದೆ. ಪರಿಣಾಮ ನೋಡಿದ್ದನ್ನೇ ನೋಡಿ ಪ್ರೇಕ್ಷಕನಿಗೆ ಬೋರ್
ಆಗಿರೋದು. ಅದೇ ಕಾರಣದಿಂದ ತುಳು ಸಿನಿಮಾಗಳು ತಮ್ಮ ಟ್ರೆಂಡ್ ಬದಲಿಸಬೇಕಿದೆ ಎಂಬ ಮಾತುಗಳು ಈಗ ತುಳು ಚಿತ್ರರಂಗದಲ್ಲೇ ಕೇಳಿಬರುತ್ತಿವೆ. ಹೊಸ ಹೊಸ ಜಾನರ್ ಅನ್ನು ಪ್ರಯತ್ನಿಸುವ ಮೂಲಕ ತುಳು ಪ್ರೇಕ್ಷಕರ ಮೈಂಡ್‌ಸೆಟ್ ಮಾಡುವ ಅನಿವಾರ್ಯತೆ ಕೂಡಾ ಇದೆ ಎಂಬುದು ಈಗಿನ ಕೆಲವು ಯುವ ನಿರ್ದೇಶಕರ ಮಾತು. ಹಾಗಂತ ಹೊಸ ಜಾನರ್‌ನ ಸಿನಿಮಾಗಳು ತುಳುವಿನಲ್ಲಿ ಬರಲೇ ಇಲ್ಲವೇ ಎಂದು ನೀವು ಕೇಳಬಹುದು. ಖಂಡಿತಾ ಬಂದಿದೆ. ಆದರೆ, ಅದನ್ನು ಪ್ರೇಕ್ಷಕ ಸ್ವೀಕರಿಸಿಲ್ಲ. ಕಾರಣ,
ಪ್ರೇಕ್ಷಕನ ಮೈಂಡ್‌ಸೆಟ್. “ತುಳು ಚಿತ್ರರಂಗದ ಟ್ರೆಂಡ್ ಬದಲಾಗಬೇಕಿದೆ. ಇನ್ನೊಂದೆರಡು ವರ್ಷದಲ್ಲಿ ಬದಲಾಗುತ್ತದೆ ಎಂಬ ವಿಶ್ವಾಸವೂ ಇದೆ. ಬೇರೆ ಜಾನರ್‌ಗೆ ಸೇರಿದ ಸಿನಿಮಾವೊಂದು ದೊಡ್ಡ ಮಟ್ಟದಲ್ಲಿ ಗೆಲುವು ಕಂಡರೆ ಸಹಜವಾಗಿಯೇ ಟ್ರೆಂಡ್
ಹಾಗೂ ಮೈಂಡ್‌ಸೆಟ್ ಬದಲಾಗುತ್ತದೆ. ಈ ಹಿಂದೆ ಬಂದ ಕೆಲವು ಹೊಸ ಬಗೆಯ ಸಿನಿಮಾಗಳನ್ನು ಪ್ರೇಕ್ಷಕ ಸ್ವೀಕರಿಸಿದ್ದರೆ ಇಷ್ಟೊತ್ತಿಗೆ ತುಳು ಚಿತ್ರರಂಗದ ಟ್ರೆಂಡ್ ಬದಲಾಗುತ್ತಿತ್ತು. ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ಐದಾರು ಹಿಟ್ ಸಿನಿಮಾಗಳು ಬಂದಂತೆ ಇಲ್ಲಿ ವರ್ಷಕ್ಕೆ ಎರಡು ಸಿನಿಮಾವಾದರೂ ದೊಡ್ಡ ಮಟ್ಟದಲ್ಲಿ ಗೆದ್ದರೆ ತುಳು ಚಿತ್ರರಂಗದ ಸ್ವರೂಪ ಬದಲಾಗುತ್ತದೆ. ಈಗಾಗಲೇ ಹೊಸ ಚಿಂತನೆಯೊಂದಿಗೆ ಯುವ ನಿರ್ದೇಶಕರು, ನಾಯಕ ನಟರು ಬರುತ್ತಿದ್ದಾರೆ.’ ಎನ್ನುವುದು ರಾಜೇಶ್ ಬ್ರಹ್ಮಾವರ್ ಮಾತು. ರವಿಪ್ರಕಾಶ್ ರೈ