Advertisement

ಮರವಂತೆ, ಉಪ್ಪುಂದ ಮಳೆ ಆರ್ಭಟ, ಕಡಲಬ್ಬರ

01:05 AM Jul 23, 2019 | Team Udayavani |

ಉಪ್ಪುಂದ: ರವಿವಾರ ಕಡಿಮೆಯಾಗಿದ್ದ ಮಳೆ ಮರವಂತೆ, ಖಂಬದಕೋಣೆ, ನಾಗೂರು, ಉಪ್ಪುಂದ ಪರಿಸರದಲ್ಲಿ ಸೋಮವಾರ ಮತ್ತೆ ಅಬ್ಬರಿಸಿದೆ.

Advertisement

ಶನಿವಾರದಿಂದ ರವಿವಾರ ರಾತ್ರಿಯವರೆಗೆ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ ಸೋಮವಾರ ಬೆಳಗ್ಗೆಯಿಂದ ಬಿರುಸುಗೊಂಡಿದೆ. ಉಪ್ಪುಂದ, ಶಾಲೆಬಾಗಿಲು, ಬಿಜೂರು ರಾ. ಹೆದ್ದಾರಿಯಲ್ಲಿ ಮಳೆ ನೀರು ನಿಂತುಕೊಂಡ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು.

ತ್ರಾಸಿ-ಮರವಂತೆ ಬೀಚ್ ವ್ಯಾಪ್ತಿಯಲ್ಲಿ ಕಡಲಿನ ಅಬ್ಬರ ಹೆಚ್ಚಾಗಿದೆ. ದೊಡ್ಡ ಗಾತ್ರದ ಅಲೆಗಳು ಬಂದು ದಡಕ್ಕೆ ಅಪ್ಪಳಿಸುತ್ತಿವೆ ಎಂದು ಮೀನುಗಾರರು ತಿಳಿಸಿದ್ದಾರೆ.

ಯಾವುದೇ ಅಪಾಯವಾಗಿಲ್ಲ

ತ್ರಾಸಿ ಬೀಚ್‌ನ ಗಾಳಿ ತೋಪಿನ ಬಳಿ ಕಡಲ್ಕೊರೆತ ಕಾಣಿಸಿಕೊಂಡಿದೆ. ತೀರದ ಮನೆಗಳಿಗೆ ಯಾವುದೇ ಅಪಾಯವಾಗಿಲ್ಲ ಎಂಬ ಮಾಹಿತಿ ಇದೆ.

Advertisement

ಖಂಬದಕೋಣೆ, ನಾಗೂರು, ನಾವುಂದ ಪ್ರದೇಶ ಗಳ ತೋಡುಗಳಲ್ಲಿ ನೀರು ತುಂಬಿ ಹರಿಯುತ್ತದೆ.

ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದ ಕಾರಣ ಬಿಜೂರು ಸುಮನಾವತಿ ನದಿ, ಖಂಬದಕೋಣೆ ಯಡಮಾವಿನ ಹೊಳೆಯಲ್ಲಿ ನೀರಿನ ಪ್ರಮಾಣ ಅಧಿಕವಾಗಿದ್ದು, ತುಂಬಿ ಹರಿಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next