Advertisement
ಮಹಾನಗರ: ಮಳೆಗಾಲ ಪ್ರಾರಂಭಕ್ಕೆ ಇನ್ನೂ ಎರಡು ತಿಂಗಳಷ್ಟೇ ಬಾಕಿಯಿದ್ದು, ಅದಕ್ಕೆ ಮೊದಲಾಗಿ ವಾರ್ಡ್ ಮಟ್ಟದಲ್ಲಿ ಆಗಬೇಕಾಗಿರುವ ಕೆಲಸ ಕಾರ್ಯಗಳ ಕುರಿತು ಈಗಲೇ ಕಾರ್ಯತತ್ಪರರಾಗುವುದು ಅಗತ್ಯವಾಗಿದೆ.
Related Articles
ಮಳೆ ನೀರು ಸರಾಗವಾಗಿ ಹರಿದು ಹೋಗಲು ಇರುವ ಅಡಚಣೆಗಳು, ತೋಡುಗಳ ಒತ್ತುವರಿ, ರಸ್ತೆಗಳಲ್ಲಿ ತೆರವು ಗೊಳಿಸದಿರುವ ಮಣ್ಣಿನ ತ್ಯಾಜ್ಯಗಳ ರಾಶಿ, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಪರಿಸ್ಥಿತಿ ಮುಂತಾದವುಗಳನ್ನು ಈಗಿಂದಲೇ ಪರಿಶೀಲಿಸಿ ಪೂರಕ ಕ್ರಮಗಳನ್ನು ಕೈಗೊಳ್ಳುವು ದರಿಂದ ಸಮಸ್ಯೆಗಳನ್ನು ನಿಭಾಯಿಸಲು ಸುಲಭ. ಇದಕ್ಕಾಗಿ ಪಾಲಿಕೆಯ ಅಧಿಕಾರಿ, ಸ್ಥಳೀಯ ಕಾರ್ಪೊರೇಟರ್‌ಗಳು ಪ್ರತಿ ವಾರ್ಡ್‌ನಲ್ಲಿ ಇರುವ ತೋಡು, ಚರಂಡಿಗಳು ಸ್ಥಿತಿ, ಮಳೆ ನೀರು ಸರಾಗವಾಗಿ ಹರಿಯಲು ಇರುವ ಅಡಚಣೆಗಳ ವಸ್ತುಸ್ಥಿತಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದು ಅಗತ್ಯ.
Advertisement
ಪೂರ್ವ ಸಿದ್ಧತೆಗಳ ಪರಿಶೀಲನೆನಗರದ ಅತ್ತಾವರ, ಕಂಕನಾಡಿ, ಕುದ್ರೋಳಿ, ಬಲ್ಲಾಳ್‌ಬಾಗ್, ಜಪ್ಪಿನ ಮೊಗರು, ಪಂಪ್‌ವೆಲ್, ಕೊಟ್ಟಾರಚೌಕಿ, ಕೋಡಿಕಲ್, ಮಾಲೆಮಾರ್, ಉಜ್ಯೋಡಿ, ಜೆಪ್ಪು ಮಹಾಕಾಳಿಪಡು³, ಕೊಂಚಾ ಡಿ, ಪಾಂಡೇಶ್ವರ ಸಹಿತ ಅನೇಕ ರಾಜ ಹೀಗಾಗಿ ಸಮಸ್ಯೆಯ ಮೂಲವನ್ನು ಹುಡುಕಿ ತುರ್ತುನೆಲೆಯಲ್ಲಿ ಪರಿಹಾರ ಕಾರ್ಯ ನಡೆಯಬೇಕಾಗಿದೆ. ಮಳೆ ನೀರು ಹರಿದು ಹೋಗುತ್ತಿದ್ದ ಅನೇಕ ಕಾಲುವೆಗಳು ಮುಚ್ಚಿವೆ, ಇಲ್ಲವೆ ಒತ್ತುವರಿಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ತೋಡುಗಳು ಎಲ್ಲೆಲ್ಲಿ ಮುಚ್ಚಿವೆ, ರಾಜ ಕಾಲುವೆಗಳು ಯಾವ ಕಡೆಗಳಲ್ಲಿ ಒತ್ತುವರಿ ಆಗಿವೆ, ಹೂಳೆತ್ತುವ ಕಾರ್ಯ ಸಮರ್ಪಕವಾಗಿ ನಡೆದಿದೆಯೇ ಎಂಬ ಪರಿಶೀಲಿಸಿ ಪೂರಕ ಕ್ರಮ ನಡೆಯಬೇಕಾಗಿದೆ. ಚರಂಡಿಗಳ ಸಮೀಕ್ಷೆ
ನಗರದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಕಾಂಕ್ರೀಟ್ ಕಾಮಗಾರಿಗಳು ಬಹುತೇಕ ಮುಗಿದಿವೆ. ಕೆಲವು ಕಡೆ ಚರಂಡಿ, ಫುಟ್‌ಪಾತ್‌ಗಳು ನಿರ್ಮಾಣವಾಗಿವೆ. ಇನ್ನೂ ಕೆಲವು ಕಡೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಚರಂಡಿ ನಿರ್ಮಾಣವಾಗಿರುವ ಕಡೆಗಳಲ್ಲೂ ನೀರು ಚರಂಡಿಯಲ್ಲಿ ಹೋಗದೆ ರಸ್ತೆಯಲ್ಲೇ ಹರಿಯುತ್ತಿದೆ. ಜ್ಯೋತಿವೃತ್ತ, ಬಂಟ್‌ಹಾಸ್ಟೇಲ್, ಕದ್ರಿ ಕಂಬಳ, ಬಿಜೈ, ಕೆ.ಎಸ್.ಆರ್. ರಾವ್ ರಸ್ತೆ, ಎಂ.ಜಿ.ರಸ್ತೆ ಮುಂತಾದೆಡೆಗಳಲ್ಲಿ ಮಳೆಗಾಲದಲ್ಲಿ ರಸ್ತೆಯೇ ತೋಡು ಆಗಿ ಪರಿವರ್ತನೆಗೊಳ್ಳುತ್ತಿದೆ. ಸಂಚಾ ರವೂ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾ ಣವಾಗುತ್ತಿದೆ. ಈ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿ ಪೂರಕ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ. ಮಳೆಗಾಲದ ಮೊದಲು ಸ್ವತ್ಛತೆ
ನಗರದಲ್ಲಿ ಮೇ ಅಂತ್ಯ ಅಥವಾ ಜೂನ್ ತಿಂಗಳಿನಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತದೆ. ಚರಂಡಿ, ತೋಡುಗಳಲ್ಲಿ ಬೇಸಗೆಯಲ್ಲಿ ತ್ಯಾಜ್ಯ, ಹೂಳು ತುಂಬಿರುತ್ತವೆ. ತ್ಯಾಜ್ಯಗಳನ್ನು ಸ್ವತ್ಛಗೊಳಿಸುವ, ಹೂಳೆತ್ತುವ ಕಾರ್ಯ ಮಳೆಗಾಲ ಆರಂಭವಾಗುವ ಮುಂಚಿತವಾಗಿಯೇ ಮುಗಿಯಬೇಕು. ಈ ಕೆಲಸವನ್ನು ಟೆಂಡರ್ ಕರೆದು ಗುತ್ತಿಗೆ ನೀಡಿ ನಿರ್ವಹಿಸಲಾಗುತ್ತದೆ. ಸಾಮಾನ್ಯವಾಗಿ ಈ ಕಾರ್ಯ ಮಳೆಗಾಲ ಆರಂಭವಾಗುವುದಕ್ಕೆ ಸಾಕಷ್ಟು ಮುಂಚಿತವಾಗಿಯೇ ಮಾಡಲಾಗುತ್ತದೆ. ಮಾಡದಿದ್ದರೆ ಸಮಸ್ಯೆಯಾಗುತ್ತದೆ. ರಸ್ತೆಬದಿಯಲ್ಲಿ ಮಣ್ಣಿನ ರಾಶಿ ಇದ್ದರೆ ಅದನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಮಳೆನೀರಿನೊಂದಿಗೆ ಹರಿದು ಚರಂಡಿಯಲ್ಲಿ ಶೇಖರವಾಗುತ್ತದೆ.
– ರಾಜಶೇಖರ್, ಮನಪಾ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಕಂಟ್ರೋಲ್‌ನಲ್ಲಿಲ್ಲದ ಕಂಟ್ರೋಲ್ ರೂಂ
ಮಳೆಗಾಲದಲ್ಲಿ ತುರ್ತು ಸಂದರ್ಭಗಳಲ್ಲಿ ಮಹಾನಗರ ಪಾಲಿಕೆಯನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಕಂಟ್ರೋಲ್ ರೂಂ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಆದರೆ ಈ ಕಂಟ್ರೋಲ್ ರೂಂಗಳು ಸಮರ್ಪವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಮಳೆಗಾಲದಲ್ಲಿ ಕೇಳಿಬರುತ್ತವೆ. ಆದುದರಿಂದ ಮಳೆಗಾಲದ ನಾಲ್ಕು ತಿಂಗಳು ಕಂಟ್ರೋಲ್ ರೂಂನಲ್ಲಿ ಹೆಚ್ಚಿನ ಸಿಬಂದಿ ಹಾಗೂ ದೂರವಾಣಿಗಳನ್ನು ಅಳವಡಿಸಿ ಸುವ್ಯವಸ್ಥಿತಗೊಳಿಸಬೇಕು ಮತ್ತು ಹೆಚ್ಚು ಸಕ್ರಿಯವಾಗಿಸಲು ಈಗಲೇ ಕಾರ್ಯಯೋಜನೆಗಳನ್ನು ರೂಪಿಸುವುದು ಅಗತ್ಯ. ಗ್ಯಾಂಗ್‌ಗಳ ರಚನೆ
ಪಾಲಿಕೆಯ 60 ವಾರ್ಡ್ ಗಳಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಗಳಲ್ಲಿ ತುಂಬಿರುವ ಹೂಳು ಹಾಗೂ ಮಣ್ಣು ತೆಗೆದು ಸ್ವತ್ಛಗೊಳಿಸುವ ಕಾರ್ಯಕ್ಕೆ ಪ್ರತಿವರ್ಷ ಗ್ಯಾಂಗ್‌ಗಳನ್ನು ರಚಿಸಲಾಗುತ್ತದೆ. ಈ ಗ್ಯಾಂಗ್‌ಗಳನ್ನು ಸಾಕಷ್ಟು ಮುಂಚಿತವಾಗಿ ರಚಿಸಿ ವಾರ್ಡ್ ಮಟ್ಟದಲ್ಲಿ ಕಾರ್ಯಯೋಜನೆ ರೂಪಿಸಿ ಕೆಲಸಗಳನ್ನು ವಹಿಸಿಕೊಡುವುದು ಉತ್ತಮ. ಇದರಿಂದ ಈ ಗ್ಯಾಂಗ್‌ಗಳು ವಾರ್ಡ್ ಮಟ್ಟದಲ್ಲಿ ಯಾವ ರೀತಿ ಕಾರ್ಯನಿರ್ವಹಿಸುತ್ತವೆ ಎಂಬ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಕೂಡ ಸಾಕಷ್ಟು ಕಾಲಾವಕಾಶ ದೊರೆಯುತ್ತದೆ. -ಕೇಶವ ಕುಂದರ್