Advertisement

ದಾಖಲೆಯಲ್ಲೂ ಅಂಕಿ ಸಂಖ್ಯೆಗಳ ಚಮತ್ಕಾರ

08:25 PM Dec 29, 2019 | Lakshmi GovindaRaj |

ಅವಿಭಜಿತ ದ.ಕ. ಜಿಲ್ಲೆಯ ದಕ್ಷಿಣದ ಕೊನೆಯ ತಾಲೂಕಾದ ಕುಂದಾಪುರದ ಹೂವಿನಕೆರೆಯಲ್ಲಿ ಜನಿಸಿದ (1481) ವಾದಿರಾಜರಿಗೆ ಮತ್ತು ಇನ್ನೊಂದು ತುದಿಯ ತಾಲೂಕಾದ ಪುತ್ತೂರಿನ ರಾಮ ಕುಂಜ ಗ್ರಾಮದಲ್ಲಿ ಜನಿಸಿದ (1931) ವಿಶ್ವೇಶತೀರ್ಥರಿಗೆ ಸನ್ಯಾಸಾಶ್ರಮವಾದದ್ದು 7-8ನೆಯ ವಯಸ್ಸಿಗೆ.

Advertisement

1522ರಲ್ಲಿ ದ್ವೈವಾರ್ಷಿಕ ಪೂಜಾ ವ್ಯವಸ್ಥೆಯನ್ನು ಶ್ರೀಕೃಷ್ಣ ಮಠದಲ್ಲಿ ವಾದಿರಾಜರು ಆರಂಭಿಸಿ 1532-33 (52ನೆಯ ವರ್ಷ), 1548-49 (68 ವರ್ಷ), 1564-65 (84 ವರ್ಷ), 1580-81ರಲ್ಲಿ (100 ವರ್ಷ) ತಮ್ಮ ಸರದಿಯಲ್ಲಿ ಪರ್ಯಾಯ ಪೂಜೆ ನಡೆಸಿದರು. ಐದನೆಯ ಪರ್ಯಾಯದ 1596-97ರ ಅವಧಿಯಲ್ಲಿ (116 ವರ್ಷ) ಶಿಷ್ಯ ಶ್ರೀವೇದವೇದ್ಯತೀರ್ಥರನ್ನು ಪೀಠದಲ್ಲಿ ಕುಳ್ಳಿರಿಸಿ ಸೋಂದಾ ಕ್ಷೇತ್ರದಲ್ಲಿ ತಾವು ಪರ್ಯಾಯವನ್ನು ನಡೆಸಿದರು.

ಶ್ರೀ ವಿಶ್ವೇಶತೀರ್ಥರು 1952-53 (21 ವರ್ಷ), 1968-69 (37 ವರ್ಷ), 1984-85 (53 ವರ್ಷ), 2000-01ರ (69 ವರ್ಷ), 2016- 17 (86) ಅವಧಿಯಲ್ಲಿ ಐದು ಪರ್ಯಾಯಗಳನ್ನು ನೆರವೇರಿಸಿದರು. ಇವರಿಬ್ಬರ ಪರ್ಯಾಯದ ಇಸವಿಗಳನ್ನು ಗಮನಿಸಿದರೆ ಕೊನೆಯ ಅಂಕಿ ತಾಳೆಯಾಗುತ್ತಿದೆ. ವಾದಿರಾಜರು ಪ್ರಥಮ ಪರ್ಯಾಯಕ್ಕೆ ಕೂರುವಾಗ 52 ವರ್ಷ, ದ್ವಿತೀಯ 68, ತೃತೀಯದಲ್ಲಿ 84, ನಾಲ್ಕನೆಯದಲ್ಲಿ 100,

ಐದನೆಯದು 116 ವರ್ಷವಾಗಿದ್ದರೆ, ಪೇಜಾವರ ಶ್ರೀಗಳು ಪ್ರಥಮ ಪರ್ಯಾಯ ಕೂತದ್ದು 1952ನೆಯ ಇಸವಿ, ದ್ವಿತೀಯ 68, ತೃತೀಯ 84, ಚತುರ್ಥ 2000, ಪಂಚಮ ಪರ್ಯಾಯ 2016ನೆಯ ಇಸವಿಯಲ್ಲಿ. ಐದನೆಯ ಪರ್ಯಾಯವನ್ನು ವಾದಿರಾಜಸ್ವಾಮಿಗಳು ಸೋಂದೆ ಯಲ್ಲಿದ್ದು ಮಾಡಿದರೆ, ಪೇಜಾವರ ಶ್ರೀಗಳು ಉಡುಪಿಯಲ್ಲಿಯೇ ನೆರವೇರಿಸಿದರು. ಉಡುಪಿಯಲ್ಲಿದ್ದು ಐದನೆಯ ಪರ್ಯಾಯ ನಡೆಸಿದವರು ಇದುವರೆಗೆ ಯಾರೂ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next