Advertisement

ಶೀಘ್ರ ವಿಮಾನ ಹಾರಾಟ ಶುರು

02:31 PM Jun 20, 2018 | Team Udayavani |

ಕಲಬುರಗಿ: ಹಲವು ದಶಕಗಳಿಂದ ನಿರೀಕ್ಷಿಸಲಾಗುತ್ತಿರುವ ಕಲಬುರಗಿಯಿಂದ ವಿಮಾನ ಹಾರಾಟದ ಕಾಲ ಸನ್ನಿಹಿತವಾಗುವ ಲಕ್ಷಣಗಳು ಕಂಡು ಬಂದಿದ್ದು, ಮುಂದಿನ ಒಂದುವರೆ ಇಲ್ಲವೇ ಎರಡು ತಿಂಗಳಲ್ಲಿ ಶುಭಾರಂಭಗೊಳ್ಳುವ ಸಾಧ್ಯತೆಗಳಿವೆ.

Advertisement

ಶ್ರೀನಿವಾಸ ಸರಡಗಿ ಹತ್ತಿರದ ಗುಲಬರ್ಗಾ ವಿಮಾನ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಮಂಗಳವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಮುಂದಿನ ಒಂದೂವರೆ ತಿಂಗಳುಗಳಲ್ಲಿ ವಿಮಾನ  ನಿಲ್ದಾಣ ಸಂಪೂರ್ಣ ಕಾರ್ಯನಿರ್ವಹಿಸುವಂತೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

ವಿಮಾನ ನಿಲ್ದಾಣದ 3.25 ಕಿ.ಮೀ. ರನ್‌ವೇ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದೆ. ಬಹು ಮುಖ್ಯವಾಗಿ
ಮಾರ್ಕಿಂಗ್‌ ಮಾಡಬೇಕು. ವಿಮಾನ ನಿಲ್ದಾಣದ ಜೀವಾಳವೆಂದೇ ಭಾವಿಸಲಾಗಿರುವ ಎಟಿಸಿ ಕಟ್ಟಡ, ಫೈರ್‌
ಸ್ಟೇಶನ್‌ ಹಾಗೂ ಟರ್ಮಿನಲ್‌ ಬಿಲ್ಡಿಂಗ್‌ ನಿರ್ಮಾಣ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ರನ್‌ವೇ ಕಾಮಗಾರಿ ಹಾಗೂ ಕಾಂಪೌಂಡ್‌ ಗೋಡೆ ಸಂಪೂರ್ಣವಾಗಿ ನಿರ್ಮಿಸಿದಲ್ಲಿ ರಾಜ್ಯ ಸರ್ಕಾರದ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ಯಾವುದೇ ಸಮಯದಲ್ಲಿ ಪ್ರಾಯೋಗಿಕವಾಗಿ ವಿಮಾನ ಹಾರಾಟ ನಡೆಸಲು ಸಿದ್ಧವಾಗುವುದರಿಂದ ಆದಷ್ಟು ಬೇಗ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.

ವಿಮಾನ ನಿಲ್ದಾಣ ಕಾಮಗಾರಿಯ ಮೊತ್ತವನ್ನು ಪರಿಷ್ಕೃತ 175 ಕೋಟಿ ರೂ.ಗಳಿಗೆ ಹೆಚ್ಚಿಸಿ ರಾಜ್ಯ ಸರ್ಕಾರವು
ಅನುಮೋದನೆ ನೀಡಿದೆ. ಇದಕ್ಕೆ ಅನುಗುಣವಾಗಿ ಹೈದ್ರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ
ಪಾಲನ್ನು ನೀಡಲಾಗುವುದು. ಈಗಾಗಲೇ ವಿಮಾನ ನಿಲ್ದಾಣ ಕಾಮಗಾರಿಗೆ 92 ಕೋಟಿ ರೂ.ಗಳನ್ನು ಪಾವತಿಸಲಾಗಿದ್ದು, ಹಣಕಾಸಿನ ಯಾವುದೇ ತೊಂದರೆ ಇರುವುದಿಲ್ಲ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಅಜೀಜುದ್ದೀನ್‌,
ಇಂಜನೀಯರ್‌ ಎಂ. ಜಗದೇವ ಮತ್ತಿತರ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next