Advertisement

ಅನ್ವೇಷಣೆ ಕಲಾ ಪ್ರದರ್ಶನ ಉದ್ಘಾಟನೆ

03:59 PM Mar 17, 2017 | Team Udayavani |

ಉಡುಪಿ: ಮಂಗಳೂರಿನ ಮಹಾಲಸ ಸ್ಕೂಲ್‌ ಆಫ್ ಆರ್ಟ್‌ನ ವಿದ್ಯಾರ್ಥಿಗಳ ಮೂರು ದಿನಗಳ ಚಿತ್ರಕಲಾ ಪ್ರದರ್ಶನ  ಅನ್ವೇಷಣೆ-2017 ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ವಿಭೂತಿ ಆರ್ಟ್‌ ಗ್ಯಾಲರಿಯಲ್ಲಿ ಆರಂಭವಾಯಿತು.

Advertisement

ಮಣಿಪಾಲ ವಿ.ವಿ. ಹಿರಿಯ ಕಲಾವಿದ ಹಾಗೂ ಸಹ ಪ್ರಾಧ್ಯಾಪಕ ಡಾ| ಉನ್ನಿಕೃಷ್ಣನ್‌ ಕೆ. ಅವರು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಸ್ಥಳೀಯ ಜನಪದ ಶೈಲಿಯನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿ, ನವ ನವೀನ ಕಲಾಪ್ರಕಾರದಲ್ಲಿ ಹೊರ ಹೊಮ್ಮಿದ ಕಲಾಕೃತಿಗಳು ಅದ್ಭುತವಾಗಿ ಮೂಡಿಬಂದಿವೆ. 

ದಿ| ಅನಂತಮೂರ್ತಿ ಅವರು ಹೇಳಿದಂತೆ ಹೆಚ್ಚು ಸ್ಥಳೀಯವಾದಂತೆ ಹೆಚ್ಚು ವಿಶ್ವಮಾನ್ಯತೆಯನ್ನು ಪಡೆಯುತ್ತವೆ. ಅದರಂತೆ ಕಲಾ ವಿದ್ಯಾರ್ಥಿಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದರು.

ಮಹಾಲಸ ಸ್ಕೂಲ್‌ ಆಫ್ ಆರ್ಟ್‌ನ ಪ್ರಾಂಶುಪಾಲರಾದ ಕೆ. ಪುರುಷೋತ್ತಮ ನಾಯಕ್‌ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ಕಾರ್ಯದರ್ಶಿ ಡಾ| ಯು.ಸಿ. ನಿರಂಜನ್‌, ಪ್ರಾಚಾರ್ಯ ರಾಜೇಂದ್ರ ತ್ರಾಸಿ ಉಪಸ್ಥಿತರಿದ್ದರು.ಮಹಾಲಸ ಸ್ಕೂಲ್‌ ಆಫ್ ಆರ್ಟ್‌ನ ಮುಖ್ಯಸ್ಥ ಎನ್‌.ಎಸ್‌. ಪತ್ತಾರ್‌ ಅವರು ಮಾತನಾಡಿ, ಶಾಲೆಯ ಚಿತ್ರಕಲಾ ವಿದ್ಯಾರ್ಥಿಗಳ ಕಲಾಕೃತಿಗಳ ಬಗ್ಗೆ ಮಾಹಿತಿ ನೀಡಿದರು.ವಿದ್ಯಾರ್ಥಿ ಪ್ರಮೋದ್‌ ಕಾರ್ಯ ಕ್ರಮ ನಿರೂಪಿಸಿದರು. ಕಲಾ ಪ್ರದರ್ಶನವು ಮಾ. 19ರವರರೆಗೆ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವೀಕ್ಷಣೆಗೆ ಲಭ್ಯವೆಂದು ಆಯೋಜಕರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next