Advertisement

ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವುದು ಉದ್ದೇಶ: ರಾಧಾ

08:02 PM Nov 06, 2019 | mahesh |

ಮಡಿಕೇರಿ: ಜಿಲ್ಲಾ ಬಾಲಭವನ ಸಮಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕಲಾಶ್ರೀ ಆಯ್ಕೆ ಶಿಬಿರವು ಮಂಗಳವಾರ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನಡೆಯಿತು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ರಾಧ ಅವರು ಮಾತನಾಡಿ ಪ್ರತಿಭೆ ಹೊರ ಸೂಸುವಂತಹ ಕಾರ್ಯಕ್ರಮ. ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಬಾಲ ಭವನ ಸೊಸೈಟಿಯು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿದೆ ಎಂದರು.

ಅಂಕಗಳನ್ನು ಮಾತ್ರ ಪರಿಗಣಿಸದೆ ಅವರ ಪ್ರತಿಭೆಯನ್ನು ಪೋಷಿಸಿ ಬೆಳೆಸಬೇಕು. ಬಾಲಕಾರ್ಮಿಕ ಮಕ್ಕಳು, ಅನಾಥ ಮಕ್ಕಳು, ಏಕ ಪೋಷಕ ಮಕ್ಕಳು, ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಶೋಷಣೆಗೆ ಒಳಗಾದಂತಹ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಅವರು ಹೇಳಿದರು.ಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಮಂಜುಳಾ ಮತ್ತು ೋಮಲ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ, ಶಿದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್‌, ಜಿಲ್ಲಾ ಸಂಯೋಜಕಿ ಪ್ರಭಾವತಿ, ತೀರ್ಪುಗಾರರಾದ ಪ್ರಸನ್ನ, ಭರತ್‌ ಕೋಡಿ, ದಿಲೀಪ್‌ ಕುಮಾರ್‌, ಭಾರತಿ ರಮೇಶ್‌, ಗೌರಮ್ಮ ಪಾಲ್ಗೊಂಡಿದ್ದರು.

ರಾಜ್ಯ ಮಟ್ಟದ ಕಲಾಶ್ರೀ ಪ್ರಶಸ್ತಿ ಶಿಬಿರಕ್ಕೆ ಆಯ್ಕೆಯಾದ ಮಕ್ಕಳ ವಿವರ ಇಂತಿದೆ. ಸೃಜನಾತ್ಮಕ ಕಲೆಯಲ್ಲಿ ಮಡಿಕೇರಿ ಸಂತ ಜೋಸೆಫ‌ರ ಶಾಲೆಯ ಮಿಥಿಲ ಟಿ.ಎಂ., ಹಾಗೂ ಕೊಡಗು ವಿದ್ಯಾಲಯ, ಭಾರತೀಯ ವಿದ್ಯಾಭವನದ ಲಕ್ಷ್ಯ ಪಿ. ಎನ್‌. ಸೃಜನಾತ್ಮಕ ಬರವಣಿಗೆಯಲ್ಲಿ ಮಡಿಕೇರಿ ಸಂತ ಜೋಸೆಫ‌ರ ಪ್ರೌಢಶಾಲೆಯ ಅನನ್ಯ ಎಂ.ಹೆಚ್‌. ಹಾಗೂ ಸೋಮವಾರಪೇಟೆ ಸಂತ ಜೋಸೆಫ‌ರ ಪ್ರೌಢಶಾಲೆಯ ದರ್ಶನ್‌ ಬಿ. ಎಂ.

ವಿಜ್ಞಾನದಲ್ಲಿ ನೂತನ ಆವಿಷ್ಕಾರ
ಜನರಲ್‌ ತಿಮ್ಮಯ್ಯ ಶಾಲೆಯ ಶ್ರೀದೇವಿ, ಪೊನ್ನಂಪೇಟೆ ಸಂತ ಅಂತೋಣಿ ಶಾಲೆಯ ಲಿಖೀತ್‌. ಸೃಜನಾತ್ಮಕ ಕಲೆ ಮತ್ತು ಪ್ರದರ್ಶನ: ಗೋಣಿಕೊಪ್ಪ, ಕೂರ್ಗ್‌ ಪಬ್ಲಿಕ್‌ ಶಾಲೆಯ ಆಯುಷ್‌ ಎಂ. ಡಿ., ಮಡಿಕೇರಿ ಸಂತ ಜೋಸೆಫ‌ರ್‌ ಶಾಲೆಯ ಮೇನಿತಾ ನಾಗೇಶ್‌ ಆಯ್ಕೆಯಾಗಿದ್ದಾರೆ

Advertisement

ಸೃಜನಾತ್ಮಕ ಕಲೆ
ಚಿತ್ರಕಲೆ, ಕರಕುಶಲ ಕಲೆ, ಜೇಡಿ ಮಣ್ಣಿನ ಕಲೆ, ಶೃಜನತ್ಮಾಕ ಬರವಣಿಗೆ, ಕಥೆ- ಕೊಡಗಿನಲ್ಲಾದ ಪ್ರಕೃತಿ ವಿಕೋಪ ನಂತರದ ಚಿತ್ರಣ ಅಥವಾ ಕೊಡಗಿನಲ್ಲಾದ ಪ್ರಕೃತಿ ವಿಕೋಪದ ಚಿತ್ರಣ, ಕವನ, ಕೊಡಗಿನ ವೀರ ಯೋಧ, ಪ್ರಬಂಧ – ಸೃಜನಾತ್ಮಕ ಕಲೆ ಬೆಳೆಸುವುದರಲ್ಲಿ ವಿದ್ಯಾರ್ಥಿಗಳ ಪಾತ್ರ, ಸೃಜನತ್ಮಾಕ ಪ್ರದರ್ಶನ ಕಲೆ, ಶಾಸ್ತ್ರಿಯ ನೃತ್ಯ, ಜಾನಪದ ನೃತ್ಯ, ಶಾಸ್ತ್ರಿಯ ಗಾಯನ, ವಾದ್ಯ ಸಂಗೀತ, ಯಕ್ಷಗಾನ, ಯಕ್ಷ ಪ್ರದರ್ಶನ, ಸುಗಮ ಸಂಗೀತ, ಯೋಗ, ನೃತ್ಯ, ಏಕ ಪಾತ್ರಾಭಿನಯ, ವಿಜ್ಞಾನದಲ್ಲಿ ನೂತನ ಆವಿಷ್ಕಾರಗಳನ್ನು ಕಾರ್ಯಕ್ರಮ ಒಳಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಶು ಭಾಗವಹಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next