Advertisement
ಜ. 19ರಂದು ಡೊಂಬಿವಲಿ ಕರ್ನಾಟಕ ಸಂಘದ ಕ್ರೀಡಾ ವಿಭಾಗದ ವತಿಯಿಂದ ಸ್ಥಳೀಯ ಜಿಮ್ಖಾನಾ ಮೈದಾನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟ “ದಂಗಲ್-2020′ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಈ ಅದ್ದೂರಿ ಕ್ರೀಡೋತ್ಸವದಲ್ಲಿ ನೀವು ಗೆದ್ದಿರಬಹುದು ಅಥವಾ ಸೋತಿರಬಹುದು. ಆದರೆ ನಾವು ಮಾತ್ರ ಗೆದ್ದಿದ್ದೇವೆ. ಕ್ರೀಡೋತ್ಸವದ ಯಶಸ್ಸಿನಲ್ಲಿ ಸಂಘದ ಆಡಳಿತ ಮಂಡಳಿಯ ಎರಡು ತಿಂಗಳ ಪರಿಶ್ರಮವಿದೆ. ಈ ಕ್ರೀಡೋತ್ಸವದ ಯಶಸ್ಸು ನಮಗೆ ಪ್ರೇರಣಾ ಶಕ್ತಿಯಾಗಿದೆ. ನಿಮ್ಮೆಲ್ಲರ ಸಹಾಯ, ಸಹಕಾರ ನಮಗೆ ಸದಾಯಿರಲಿ ಎಂದು ಆಶಿಸಿ ಶುಭಹಾರೈಸಿದರು.
Related Articles
Advertisement
ಕ್ರೀಡೋತ್ಸವದಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ನಿರ್ಣಾಯಕರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು. ಸ್ಥಳೀಯ ಜಗಜ್ಯೋತಿ ಕಲಾ ವೃಂದದ ಚಂದ್ರ ನಾಯಕ್, ಸಂತೋಷ್ ಶೆಟ್ಟಿ, ಬಾಬು ಮೊಗವೀರ ಹಾಗೂ ಸುರೇಂದ್ರ
ನಾಯಕ್ ಸಹಕರಿಸಿದರು. ವೇದಿಕೆಯಲ್ಲಿ ಜಗನ್ನಾಥ ಶೆಟ್ಟಿ, ಸಂಘದ ಪದಾಧಿಕಾರಿಗಳಾದ ಲೋಕನಾಥ ಶೆಟ್ಟಿ, ರಾಜೀವ ಭಂಡಾರಿ, ಡಾ| ವಿ. ಎಂ. ಶೆಟ್ಟಿ, ಡಾ| ದಿಲೀಪ್ ಕೋಪರ್ಡೆ, ದೇವದಾಸ್ ಕುಲಾಲ್, ಸುಷ್ಮಾ ಡಿ. ಶೆಟ್ಟಿ, ವಿಮಲಾ ವಿ. ಶೆಟ್ಟಿ ಉಪಸ್ಥಿತರಿದ್ದರು. ವಿಜೇತ ಕ್ರೀಡಾಪಟುಗಳನ್ನು ಹಾಗೂ ತಂಡಗಳನ್ನು ಗಣ್ಯರು ಬಹುಮಾನವಿತ್ತು ಗೌರವಿಸಿದರು. ಸಂಘದ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ ಎಂ. ಭಂಡಾರಿ ಸ್ವಾಗತಿಸಿದರು. ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಂಘದ ಮಹಿಳಾ ವಿಭಾಗದ ಆಶಾ ಎಲ್. ಶೆಟ್ಟಿ, ಯೋಗಿನಿ ಶೆಟ್ಟಿ, ವಿದ್ಯಾ ಆಲಗೂರ, ಅರುಣಾ ಮೇಸ್ತಾ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.
ಚಿತ್ರ-ವರದಿ: ಗುರುರಾಜ ಪೋತನೀಸ್