Advertisement
ಕೊಲ್ಲೂರು ದೇಗುಲದಿಂದ ಬಸ್ ನಿಲ್ದಾಣದ ವರೆಗೆ ಪಾದಯಾತ್ರೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದರು, ಅಂತರಾತ್ಮ ಒಪ್ಪದ ಸುಖ, ಚಾರಿತ್ರ್ಯವಿಲ್ಲದ ಜ್ಞಾನ, ನೈತಿಕತೆ ಇಲ್ಲದ ವ್ಯಾಪಾರ, ಮನುಷ್ಯತ್ವ ಇಲ್ಲದ ಜೀವನ, ತ್ಯಾಗವಿಲ್ಲದ ಧರ್ಮ, ತಣ್ತೀಗಳಿಲ್ಲದ ರಾಜನೀತಿ ಇವುಗಳನ್ನು ಗಾಂಧಿ ಒಪ್ಪುತ್ತಿರಲಿಲ್ಲ. ಅವರ ತತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಪಾದ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಸ್ವತ್ಛತೆಗೆ ಆದ್ಯತೆ ನೀಡುವುದರೊಡನೆ ಪರಿಸರ ನೈರ್ಮಲ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡುವುದರೊಂದಿಗೆ ಬೈಂದೂರಿನ ಸಮಗ್ರ ಅಭಿವೃದ್ಧಿಗೆ ಪೂರಕ ವ್ಯವಸ್ಥೆ ಒದಗಿಸು ವಲ್ಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರ ಸಹಕಾರ ದೊಡನೆ ಪ್ರಾಮಾಣಿಕ ವಾಗಿ ಶ್ರಮಿಸುತ್ತಿದ್ದೇನೆ ಎಂದರು. ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮಾತನಾಡಿ, ಮಹಾತ್ಮಾ ಗಾಂಧಿ ಅವರ ಜೀವನ ಚರಿತ್ರೆ ಆದರ್ಶಪ್ರಾಯ ಜೀವನಕ್ಕೆ ದಾರಿದೀಪ ಎಂದರು.
Related Articles
Advertisement
ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ, ಬಾಲಚಂದ್ರ ಭಟ್, ಜಿ.ಪಂ. ಸದಸ್ಯರಾದ ಬಾಬು ಹೆಗ್ಡೆ, ಸುರೇಶ ಬಟ್ವಾಡಿ, ಶೋಭಾ ಪುತ್ರನ್, ತಾ.ಪಂ. ಸದಸ್ಯರು, ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಿಯದರ್ಶಿನಿ ದೇವಾಡಿಗ, ಡಾ| ಅತುಲ್ ಕುಮಾರ್ ಶೆಟ್ಟಿ, ಜಡ್ಕಲ್ ಗ್ರಾ.ಪಂ. ಅಧ್ಯಕ್ಷ ಅನಂತ ಮೂರ್ತಿ, ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಕುಂದರ್, ಸದಾಶಿವ ಪಡುವರಿ, ಶರತ್ ಕುಮಾರ್ ಶೆಟ್ಟಿ ಕಡೆR, ತಂಗಪ್ಪನ್, ಚಂದ್ರಯ್ಯ ಆಚಾರ್ ಕಳೀ, ಚಿತ್ತೂರು ಪಂಚಾಯತ್ ಅಧ್ಯಕ್ಷ ಸಂತೋಷ ಮಡಿವಾಳ, ಆಶೋಕ್ ಶೆಟ್ಟಿ ಹೆಮ್ಮಾಡಿ, ಇನ್ನಿತರ ಬಿಜೆಪಿ ಪ್ರಮುಖರು, ಕಾರ್ಯಕರ್ತರು, ವಿವಿಧ ಮೋರ್ಚಾ ಅಧ್ಯಕ್ಷರು ಪದಾ ಧಿಕಾರಿಗಳು ಉಪಸ್ಥಿತರಿದ್ದರು.
ಬಿಎಸ್ಸೆನ್ನೆಲ್ ಟವರ್ ಸಮಸ್ಯೆಗೆ ಶೀಘ್ರ ಪರಿಹಾರಜಡ್ಕಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದ ಸಂಕಲ್ಪ ಯಾತ್ರೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಭಾಗವಹಿಸಿದರು. ಬಳಿಕ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಬಿಎಸ್ಸೆನ್ನೆಲ್ ಟವರ್ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು. ರಾಜ್ಯ ಸರಕಾರವು ಈ ಭಾಗದ ಜನರ ಬೇಡಿಕೆ ಈಡೇರಿಸುವುದರಲ್ಲಿ ಬದ್ಧವಾಗಿದೆ ಎಂದರು.