Advertisement

ಕರು ಸತ್ತಿದ್ದಕ್ಕೆ ಒಡತಿಗೆ ವಾರ ಕಾಲ ಭಿಕ್ಷೆಯೆತ್ತುವ ಶಿಕ್ಷೆ!

10:41 AM Sep 03, 2017 | Harsha Rao |

ಭೋಪಾಲ:  ಕರುವಿನ ಕೊರಳ ಹಗ್ಗ ಬಿಚ್ಚುವ ಸಮಯದಲ್ಲಿ ಅದು ಬಿಗಿದುಕೊಂಡು ಕರು ಮೃತಪಟ್ಟದ್ದಕ್ಕೆ ಅದರ ಒಡತಿಗೆ ಭಿಕ್ಷೆ ಬೇಡುವ ಶಿಕ್ಷೆ. ಇಂಥ ಅಮಾನವೀಯ ನಿರ್ಧಾರ ಪ್ರಕಟಿಸಿದ್ದು ಮಧ್ಯಪ್ರದೇಶದ ಭಿಂಡ್‌ ಪಟ್ಟಣದಲ್ಲಿ. ಅದೂ ಎಷ್ಟು ದಿನ ಗೊತ್ತೇ? ವಾರ ಕಾಲ. ಕೆಲ ದಿನಗಳ ಹಿಂದೆ ಮಹಿಳೆ ಕರುವಿನ ಕೊರಳ ಹಗ್ಗ ಬಿಚ್ಚುವ ಸಂದರ್ಭದಲ್ಲಿ  ಅದು ಬಿಗಿದುಕೊಂಡು ಸಾವಿಗೀಡಾಗಿತ್ತು. ಅಚಾನಕ್‌ ಆಗಿ ನಡೆದು ಹೋದ ತಪ್ಪಿಗೆ ಗಂಗಾ ಸ್ನಾನಕ್ಕಾಗಿ ಬೇಕಾಗಿರುವ ಪುಣ್ಯದ ಹಣ ಸಂಗ್ರಹಿಸಲು ಸ್ಥಳೀಯ ಜಾತಿ ಪಂಚಾಯಿತಿ ಭಿಕ್ಷೆಯೆತ್ತುವ ಶಿಕ್ಷೆ ನೀಡಿ, ಬೀದಿ ಬೀದಿ ಅಲೆಸಿದೆ.

Advertisement

ಸುಮಾರು 50 ವರ್ಷ ವಯಸ್ಸಿನ ಈ ಮಹಿಳೆ ಉದ್ದೇಶ ಪೂರ್ವಕವಾಗಿ ಈ ಕೃತ್ಯವೆಸಗಿಲ್ಲ. ವಿನಾಯಿತಿ ಕೊಡಿ ಎಂದು ಮನವಿ ಮಾಡಿಕೊಂಡರೂ ಯಾರೊಬ್ಬರು ಕಿವಿಗೆ ಹಾಕಿಕೊಳ್ಳದೆ ಶಿಕ್ಷೆ ವಿಧಿಸಲಾಯಿತು. ಈ ಬಗ್ಗೆ ಆಂಗ್ಲ ದಿನಪತ್ರಿಕೆಯೊಂದರ ಪತ್ರಕರ್ತರೊಬ್ಬರಿಗೆ ಫೋನ್‌ ಮಾಡಿ ಈ ವಿಚಾರ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಸ್ಥಳೀಯ ನಾಯಕರೊಬ್ಬರು ಕೂಡ ಶಿಕ್ಷೆಗೆ ಪ್ರತಿರೋಧ ಒಡ್ಡಿದ್ದರೂ ಪ್ರಯೋಜನವಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next