Advertisement

ಹೆಮ್ಮೆಯ ಸಿಂಧೂರ ತಿಲಕ

04:43 AM Jun 17, 2020 | Lakshmi GovindaRaj |

ಕೋವಿಡ್‌ 19 ಯುದ್ಧದಲ್ಲಿ  ಜೀವದ ಹಂಗು ತೊರೆದು ದುಡಿಯುತ್ತಿರುವ ವೈದ್ಯರು ಮತ್ತುವೈದ್ಯಕೀಯ ಸಿಬ್ಬಂದಿಯನ್ನು ಎಷ್ಟು ಸ್ಮರಿಸಿದರೂ ಸಾಲದು. ಅಂತೆಯೇ, ಈ ಸಮಯದಲ್ಲಿ ಅವರ ಶ್ರಮವನ್ನು ಗುರುತಿಸಿ, ಧನ್ಯವಾದ ಹೇಳಿ  ಮಾನಸಿಕವಾಗಿ ಬೆಂಬಲ ನೀಡುವುದು ಕೂಡಾ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ, ವಿಶೇಷ ವಿಡಿಯೋ ಮೂಲಕ ಕೋವಿಡ್‌ 19 ಯೋಧರಿಗೆ ಅಭಿನಂದನೆ ಸಲ್ಲಿಸಿರುವ ಡಾ. ಸಿಂಧೂರ ಶರ್ಮ ಭಟ್, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ಅಮೆರಿಕದಲ್ಲಿ ಅನಸ್ತೇಶಿಯಾ ವೈದ್ಯೆಯಾಗಿರುವ ಸಿಂಧೂರ, ತಮ್ಮ ಸಹೋದ್ಯೋಗಿಗಳ ಶ್ರಮಕ್ಕೆ ಮೆಚ್ಚುಗೆ ಸೂಚಿಸುವ ಸಲುವಾಗಿ “ಬಿಹೈನ್ಡ್ ದಿ ಮಾಸ್ಕ್‌’ ಎಂಬ ಕಿರು ವಿಡಿಯೋವನ್ನು ತಯಾರಿಸಿದ್ದಾರೆ. ಭಾರತ, ಕೆನಡ, ಚೀನಾ, ಅಮೆರಿಕ, ಯುರೋಪ್‌ನ ಅನಸ್ತೇಶಿಯಾ ತಜ್ಞೆಯರು ವಿಡಿಯೋದಲ್ಲಿರುವುದು ವಿಶೇಷ. ಈ ವಿಡಿಯೋ ವಿಶ್ವಾದ್ಯಂತ ವೈರಲ್‌ ಆಗಿದ್ದು ಲಕ್ಷಾಂತರ ಜನರ ಮೆಚ್ಚುಗೆ ಗಳಿಸಿದೆ.

ಸಿಂಧೂರ ಅವರು ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಮೂಲದ  ವಿಜಯಲಕ್ಷ್ಮಿ ಮತ್ತು ಮಟ್ಟು ಹಿರಿಯಣ್ಣ ಶರ್ಮರ ಪುತ್ರಿ. ಬೆಂಗಳೂರಿನ  ಎಂವಿಜೆ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಪದವಿ, ಮಂಗಳೂರಿನ ಕೆ.ಎಸ್‌. ಹೆಗ್ಡೆ ಮೆಡಿಕಲ್‌ ಕಾಲೇಜಿನಲ್ಲಿ ಅರಿವಳಿಕೆ ವಿಷಯದಲ್ಲಿ ಎಂಡಿ ಪದವಿ  ಪಡೆದಿರುವ ಅವರು, ಅಮೆರಿಕದ ಯುನಿವರ್ಸಿಟಿ ಆಫ್ ಮಿಯಾಮಿಯಲ್ಲಿ ಅರಿವಳಿಕೆ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪತಿ ಡಾ. ಅಭಿಷೇಕ್‌ ಭಟ್‌ ಮಾರ್ಗದರ್ಶನದಲ್ಲಿ ಈ ವಿಡಿಯೋ ತಯಾರಿಸಿದ್ದಾರೆ. ಬೆಂಗಳೂರು ಮೂಲದ ಅಭಿಷೇಕ್‌,  ಫ್ಲೋರಿಡಾದ ಯುನಿವರ್ಸಿಟಿ ಆಫ್ ಮಿಯಾಮಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಯುವ ವೈದ್ಯ ದಂಪತಿ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು, ವಿದೇಶಿ ನೆಲದಲ್ಲಿ ಕನ್ನಡದ ಹೆಸರನ್ನು ಅಚ್ಚಾಗಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next