Advertisement
ಐಎನ್‌ಎಸ್ ಸಟ್ಲೆಜ್(ಜೆ 17) ಇದೊಂದು ಹೈಡ್ರೋ ಗ್ರಾಫಿಕ್ ಸರ್ವೇ ನೌಕೆ. ತುರ್ತು ಅಗತ್ಯ ಕಾರ್ಯಾಚರಣೆಗೆ ಸಂಬಂಧಪಟ್ಟ ಎಲ್ಲ ರೀತಿಯ ಸೌಲಭ್ಯಗಳು ಇದರಲ್ಲಿವೆ. ಸಮುದ್ರಯಾನ ಹಾಗೂ ಸಾಗರದೊಳಗಿನ ವಸ್ತು ಗಳ ಸಮೀಕ್ಷೆ ನಡೆಸುವಲ್ಲಿ ಇದು ಮಹತ್ತರ ಪಾತ್ರ ವಹಿಸಿದೆ.
ಗ್ರೇವಿ ಮೀಟರ್, ಸಾಗರ ವಿಜ್ಞಾನ ಸಂವೇದಕಗಳು, ಸಾಗರ ತಳ ಸ್ಕ್ಯಾನ್ ಮಾಡುವಂತಹ ಸೋನಾರ್ ವ್ಯವಸ್ಥೆ, ಸ್ವಯಂ ಚಾಲಿತ ಡೇಟಾ ಲಾಗಿಂಗ್ ಸೌಲಭ್ಯವನ್ನು ಇದು ಹೊಂದಿದೆ. ಅನಿವಾರ್ಯ ಸಂದರ್ಭಗಳಲ್ಲಿ ಬಂದರು ಪ್ರಾಧಿಕಾರಗಳು ಮತ್ತು ನೌಕೆಗಳು ಈ ಹಡಗಿನ ಸೇವೆಯನ್ನು ಬಳಸಿಕೊಳ್ಳುತ್ತವೆ. ಮಾಹಿತಿ ಸಿಗುವುದೂ ಕಷ್ಟ
ಸುವರ್ಣ ತ್ರಿಭುಜ ದೋಣಿಯ ಬಗ್ಗೆ ಐಎನ್‌ಎಸ್ ಸಟ್ಲೆಜ್ ಕಲೆ ಹಾಕುತ್ತಿರುವ ಮಾಹಿತಿಯ ಸಂವಹನ ಸುತ್ತು ಬಳಸಿ ನಡೆಯುವುದೂ ಒಂದು ಅಡಚಣೆ. ಉಡುಪಿ ಜಿಲ್ಲೆಯ ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ಅವರು ಕಾರವಾರದ ಎಸ್‌ಪಿ ವಿನಾಯಕ್ ಪಾಟೀಲ್ ಅವರಿಂದ ಮಾಹಿತಿ ಕೇಳಬೇಕು. ಅನಂತರ ಕಾರವಾರದ ಎಸ್‌ಪಿಯವರು ಕಾರವಾರದ ನೇವಿಯವರನ್ನು ಸಂಪರ್ಕಿಸುತ್ತಾರೆ. ನೇವಿಯವರು ಮುಂಬಯಿಯ ನೇವಿ ಕಚೇರಿಯನ್ನು ಸಂಪರ್ಕಿಸುತ್ತಾರೆ. ಅಲ್ಲಿಂದ ಕಾರ್ಯಾಚರಿಸುತ್ತಿರುವ ಹಡಗನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕಾಗುತ್ತದೆ. ಅಲ್ಲಿಂದ ಸಿಗುವ ಮಾಹಿತಿಯೂ ಇದೇ ಮಾರ್ಗವಾಗಿ ಹಿಂದಕ್ಕೆ ಬರುತ್ತದೆ.
Related Articles
ಈ ಕಾರ್ಯಾಚರಣೆಯಲ್ಲಿ ಸಾಗರದಾಳದಲ್ಲಿ ಹುದುಗಿಹೋಗಿದ್ದ ಹಲವಾರು ವಸ್ತುಗಳು ಸಿಗಬಹುದು. ಅದು ಮೃತದೇಹ ಆಗಿರಬಹುದು ಅಥವಾ ಇನ್ನಿತರ ವಸ್ತು ಆಗಿರಬಹುದು. ಹಾಗಾಗಿ ಸಿಕ್ಕಿದ್ದು ಏನು ಎಂಬುದನ್ನು ಖಚಿತಪಡಿಸುವುದಕ್ಕಾಗಿ ಈ ಹಡಗಿನಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಪ್ರಯೋಗಾಲಯ ಇದೆ. ಅದರ ಮೂಲಕ ಲಭಿಸಿದ ವಸ್ತುಗಳ ಮಾಹಿತಿ ಕಲೆ ಹಾಕುವ ಕೆಲಸವೂ ನಡೆಯುತ್ತದೆ.
Advertisement
ಇದು ಸಟ್ಲೆಜ್ ಹೆಮ್ಮೆ– 2016ರಲ್ಲಿ ತಾಂಜೇನಿಯಾದ ಮೆಕೊನಿ ಬಂದರಿನಲ್ಲಿ ಹೈಡ್ರೋಗ್ರಾಫಿಕ್ ಸರ್ವೆ ನಡೆಸಿತ್ತು.
– 2004ರಲ್ಲಿ ಸಂಭವಿಸಿದ ಸುನಾಮಿಯ ಬಳಿಕ ಶ್ರೀಲಂಕಾದ ನೌಕಾಧಿಕಾರಿಗಳ ಕೋರಿಕೆಯ ಮೇರೆಗೆ ಗಾಲೆ ಮತ್ತು ಕೊಲಂಬೋ ಬಂದರಿನ ಕರಾವಳಿಯಲ್ಲಿ ಹೈಡ್ರೋಗ್ರಾಫಿಕ್ ಸಮೀಕ್ಷೆ ನಡೆಸಿತ್ತು.