Advertisement

ಇಟ್ಟಿಗೆ ಮನೆ ಮೊರೆ ಹೋದ ಪ್ರತಿಭಟನಾ ನಿರತ ರೈತರು

01:27 AM Mar 14, 2021 | Team Udayavani |

ಹೊಸದಿಲ್ಲಿ: ರಾಜಧಾನಿ ದಿಲ್ಲಿಯ ಗಡಿ ಭಾಗದಲ್ಲಿ, ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ತಾವು ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ದೀರ್ಘ‌ ಕಾಲದವರೆಗೆ ವಿಸ್ತರಿಸಲು ರೈತರು ನಿರ್ಧರಿಸಿದ್ದಾರೆ. ಈಗಾಗಲೇ ಬೇಸಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರೈತರು, ಪ್ರತಿಭಟನೆ ನಡೆಯುತ್ತಿರುವ ಪ್ರದೇಶಗಳಲ್ಲಿ ಇಟ್ಟಿಗೆಯ ಗುಡಿಸಲುಗಳನ್ನು ನಿರ್ಮಿಸಲಾರಂಭಿಸಿದ್ದಾರೆ.

Advertisement

ಟಿರ್ಕಿ ಗಡಿಯಲ್ಲಿ, ರೈತರು ತಾವೇ ಖುದ್ದಾಗಿ ತಮ್ಮ ಇಟ್ಟಿಗೆ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಕಟ್ಟಡ ಸಾಮಗ್ರಿಗಳಿಗಾಗಿ ಹಣ ವ್ಯಯಿಸುತ್ತಿರುವ ಅವರಿಗೆ ಕಾರ್ಮಿಕರಿಗೆ ಕೊಡಬೇಕಿದ್ದ ಕೂಲಿಯಲ್ಲಿ ಉಳಿತಾಯವಾಗುತ್ತಿದೆ. ಇಂಥ ಪ್ರತಿಯೊಂದು ಮನೆಗೆ 20,000 ರೂ.ಗಳಿಂದ 25,000 ರೂ. ಖರ್ಚಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಬಹಾದುರ್‌ಗಢ ಹೈವೇ ಬಳಿಯೂ ಇದೇ ರೀತಿ ಕನಿಷ್ಟ ಸೌಕರ್ಯಗಳಿರುವ ಮನೆಗಳು ನಿರ್ಮಾಣವಾಗುತ್ತಿವೆ.

ಈ ಪ್ರತಿಭಟನೆ ಶುರುವಾಗಿ, ಇಲ್ಲಿಗೆ ಮೂರು ತಿಂಗಳು ದಾಟಿದೆ. ಈ ಅವಧಿಯಲ್ಲಿ ಅನೇಕ ರೀತಿಯ ಸವಾಲುಗಳನ್ನು ರೈತರು ಎದುರಿಸಿದ್ದಾರೆ. ಚಳಿಗಾಲದ ಮೈಕೊರೆಯುವ ಚಳಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರು, ಈಗ ಬಿಸಿಲ ಬೇಗೆಯನ್ನೂ ಸಹಿಸಿ ಮುನ್ನಡೆಯಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next