Advertisement

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಸಾಮಾಜಿಕ ಸಂಘರ್ಷ ಸಮಿತಿ ಪ್ರತಿಭಟನೆ

08:36 AM Feb 28, 2019 | Team Udayavani |

ದಾವಣಗೆರೆ: ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿ ಬುಧವಾರ ಸಾಮಾಜಿಕ ಸಂಘರ್ಷ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಾವೆಲ್ಲರೂ ಒಂದು ಎಂಬ ಮಾತು ಹೇಳುತ್ತಿರುವ ನಡುವೆಯೂ ದಲಿತರನ್ನು ಅತ್ಯಂತ ಕೀಳಾಗಿ ನೋಡುವಂತಹ ಘಟನೆಗಳು ನಡೆಯುತ್ತಲೇ ಇವೆ. ಗದಗ ಜಿಲ್ಲೆಯ ಅಸೂಟಿ, ಯಲಬುರ್ಗಿಯಲ್ಲಿ ದಲಿತರ ಮೇಲೆ ನಡೆದಿರುವಂತಹ ದೌರ್ಜನ್ಯಗಳು ಜಾತಿ ವ್ಯವಸ್ಥೆಯನ್ನು ಎತ್ತಿ ತೋರಿಸುತ್ತಿವೆ. ದಲಿತರ ಮೇಲಿನ ದೌರ್ಜನ್ಯಗಳನ್ನ ಸರ್ಕಾರ ಕೂಡಲೇ ತಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Advertisement

ಬಸವಾದಿಗಳ ನಾಡಾದ ಕರ್ನಾಟಕದಲ್ಲೂ ಅಸ್ಪೃಶ್ಯತೆ ಆಚರಣೆಗಳು ನಡೆಯುತ್ತಿವೆ. ಈಚೆಗೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾದ ಉತ್ತರ ಪ್ರದೇಶದದ ಯೋಧರೊಬ್ಬರ ಶವ ಸಂಸ್ಕಾರಕ್ಕೆ ದಲಿತರು ಎಂಬ ಕಾರಣಕ್ಕೆ ಅಲ್ಲಿನ ಮೇಲ್ಜಾತಿಯವರು ಸರ್ಕಾರಕ್ಕೆ ಸಂಬಂಧಿಸಿದ 10+10 ಅಡಿ ಜಾಗ ನೀಡಲು ರಂಪಾಟವನ್ನೇ ನಡೆಸಿದರು. ಅಂತಹ ದೇಶದ್ರೋಹ ಘಟನೆ ನಡೆದಿರುವುದು ರಾಷ್ಟ್ರೀಯತೆ ಹೇಳುವ ಪಕ್ಷದ ಸರ್ಕಾರ ಇರುವ ರಾಜ್ಯದಲ್ಲಿ ಎಂಬುದು ಖಂಡನೀಯ ಎಂದು ದೂರಿದರು.

ಸಮಿತಿ ರಾಜ್ಯ ಅಧ್ಯಕ್ಷ ಪ್ರೊ| ಸಿ.ಕೆ.ಮಹೇಶ್‌, ಜಿಲ್ಲಾ ಅಧ್ಯಕ್ಷ ಪಿ. ತಿಪ್ಪೇರುದ್ರಪ್ಪ, ಬಿ.ಎನ್‌. ನಾಗೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next