Advertisement
ಕೇರಳ ಸ್ಟೇಟ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಶನ್‌ನ ಸ್ವಾಧೀನದಲ್ಲಿರುವ ಈ ಸಂಸ್ಥೆ ಮುಚ್ಚುಗಡೆಗೊಂಡು ಹಲವು ವರ್ಷಗಳೇ ಸಂದಿದ್ದು, ಗಟ್ಟಿಮುಟ್ಟಾಗಿದ್ದ ಕಟ್ಟಡ ಮತ್ತು ಸ್ಥಳದಲ್ಲಿ ಕಾಡು ಬೆಳೆದು ನಾಶವಾಗುತ್ತಿದೆ. ನಗರದಿಂದ ಕಾಸರಗೋಡು ಸಮುದ್ರ ಕಿನಾರೆಗೆ ಹೋಗುವ ಬೀಚ್ ರೋಡ್‌ನ ನೆಲ್ಲಿಕುಂಜೆಯಲ್ಲಿರುವ ಆಸ್ಟ್ರಲ್ ವಾಚ್ ಕಂಪೆನಿಯ ಸ್ಥಳ ಮತ್ತು ಕಟ್ಟಡ ಕೋಟ್ಯಂತರ ರೂಪಾಯಿ ಮೌಲ್ಯವಿದ್ದು ದಿನದಿಂದ ದಿನಕ್ಕೆ ತುಕ್ಕು ಹಿಡಿಯುತ್ತಿದೆ. ಈ ಕಟ್ಟಡದಲ್ಲಿ ಆಸ್ಟ್ರಲ್ ವಾಚಸ್‌ನ ಎಸೆಂಬ್ಲಿಂಗ್ ಪ್ರಕ್ರಿಯೆ ನಡೆಯುತ್ತಿತ್ತು. 2006ರಲ್ಲಿ ಆಸ್ಟ್ರಲ್ ವಾಚಸ್ ಕಂಪೆನಿ ಮುಚ್ಚಲಾಗಿತ್ತು.
Related Articles
ಆಸ್ಟ್ರಲ್ ವಾಚಸ್ ಕಂಪೆನಿಯ ಕಟ್ಟಡದ ಕಿಟಿಕಿ ಬಾಗಿಲುಗಳು ಮುರಿದು ಬಿದ್ದಿವೆ. ಕಿಟಿಕಿ ಗಾಜು ಪುಡಿಯಾಗಿದೆ. ಕಟ್ಟಡಕ್ಕೆ ಬಳಸಿದ ಕಬ್ಬಿಣ ತುಕ್ಕು ಹಿಡಿದು ಕಾಂಕ್ರೀಟ್ ಹೀನಾಯ ಸ್ಥಿತಿಯಲ್ಲಿದೆ. ಕಟ್ಟಡದ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಸಾಧ್ಯತೆಯಿದೆ. ಕಂಪೆನಿಯ ಸುತ್ತ ಗೋಡೆ ಅಲ್ಲಲ್ಲಿ ಕುಸಿದು ಬಿದ್ದಿದೆ. ಇದರಿಂದಾಗಿ ಸಮಾಜ ದ್ರೋಹಿಗಳ ಕೇಂದ್ರವಾಗಿ ಮಾರ್ಪಾಡುಗೊಳ್ಳುತ್ತಿದೆ. ಆಸ್ಟ್ರಲ್ ವಾಚಸ್ ಕಂಪೆನಿಯ ಸ್ಥಳ ಅನ್ಯರ ಪಾಲಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರವೇ ಸಂಬಂಧಪಟ್ಟವರು ಇತ್ತ ಗಮನಹರಿಸಿ ಶಿಥಿಲಗೊಂಡಿರುವ ಕಟ್ಟಡವನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಬೇಕಾಗಿದ್ದು, ಉದ್ದೇಶಿತ ಐ.ಟಿ.ಪಾರ್ಕ್ ಸ್ಥಾಪಿಸಿ ಕೆಲವು ಮಂದಿ ಗಾದರೂ ಉದ್ಯೋಗ ನೀಡುವಂತಾಗಬೇಕು.
Advertisement
ಕೈಗಾರಿಕ ಸಚಿವರಾಗಿದ್ದ ಎಳಮರಂ ಕರೀಂ ಐ.ಟಿ. ಪಾರ್ಕ್ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದರು. ಇದೀಗ ಈ ಸಚಿವರು ಪ್ರತಿನಿಧಿಸಿದ್ದ ಎಡರಂಗ ಅಧಿಕಾರದಲ್ಲಿರುವುದರಿಂದ ಇಲ್ಲಿ ಯಾವುದಾ ದರೂ ಕೈಗಾರಿಕೆಯನ್ನು ಸ್ಥಾಪಿಸ ಬಹುದು. ಐ.ಟಿ.ಪಾರ್ಕ್‌ನ್ನೂ ಸ್ಥಾಪಿಸ ಬಹದು.ಆದರೆ ಈ ವರೆಗೂ ಯಾವುದೇ ಕ್ರಮ ನಡೆಯಲಿಲ್ಲ.ಐ.ಟಿ.ಪಾರ್ಕ್ ಭರವಸೆ ಕಡತದಲ್ಲೇ ಉಳಿದುಕೊಂಡಿದೆ.
ಐ.ಟಿ.ಪಾರ್ಕ್ ಮುಖಾಂತರ ನೂರಾರು ಮಂದಿಗೆ ಉದ್ಯೋಗ ನೀಡುವ ಸಂಕಲ್ಪದೊಂದಿಗೆ ಯೋಜನೆಯನ್ನು ಆರಂಭಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಕಾಸರಗೋಡು ಹಿಂದಿ ನಿಂದಲೂ ಅವಗಣನೆಗೆ ತುತ್ತಾದ ಜಿಲ್ಲೆ. ಆಸ್ಟ್ರಲ್ ವಾಚಸ್ ಕಂಪೆನಿಗೂ ಇದೇ ಅನುಭವವಾಯಿತು.ಐ.ಟಿ.ಪಾರ್ಕ್ ಎಂಬ ಮಹತ್ವಾಕಾಂಕ್ಷೆಯ ಯೋಜನೆ ಸಾಕಾರ ಗೊಳ್ಳದೆ ಇಲ್ಲಿದ್ದ ಕಟ್ಟಡ ಶಿಥಿಲಗೊಳ್ಳುತ್ತಿದೆ.
-ಪ್ರದೀಪ್ ಬೇಕಲ್