Advertisement
ನಗರದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ನಡೆದ ಜನಪದ ಕಲಾವಿದರ ಬಳಗದ 5ನೇ ವರ್ಷದ ವಾರ್ಷಿಕೋತ್ಸವ, ಜಿಲ್ಲಾ ಜನಪದ ಸಂಭ್ರಮ ಹಾಗೂ ಕನ್ನಡಕ್ಕಾಗಿ ನಾವು ಅಭಿಯಾನ ಅಂಗವಾಗಿ ಕನ್ನಡ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲೆ ಉಳಿಸಿ-ಬೆಳೆಸುವಲ್ಲಿ ವಿಜಯಕುಮಾರ ಸೋನಾರೆ ನೇತೃತ್ವದ ಕಲಾವಿದರ ಒಕ್ಕೂಟ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
Related Articles
Advertisement
ಇದನ್ನೂ ಓದಿ: ರೌಡಿಕೊಲೆ: 11 ಮಂದಿ ಬಂಧನ
ಏಕತಾ ಫೌಂಡೇಶನ್ ಅಧ್ಯಕ್ಷ ರವಿ ಸ್ವಾಮಿ, ಹಿರಿಯ ಕಲಾವಿದ ಎಂ.ಜಿ. ಗಂಗನಪಳ್ಳಿ ಮಾತನಾಡಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕಲಾವಿದರಾದ ರಾಜೇಂದ್ರಸಿಂಗ್ ಪವಾರ, ರಾಮಲು ಗಾದಗಿ, ಕ.ಕ ಕಲಾವಿದರ ಒಕ್ಕೂಟದ ಸದಸ್ಯೆ ಲಲಿತಾ ಲೋಕು ಪವಾರ, ಉದ್ಯಮಿ ಅಮೋಸದಾಸ, ಸುನೀಲ ಭಾವಿಕಟ್ಟಿ, ಶಂಭುಲಿಂಗ ವಾಲ್ದೊಡ್ಡಿ, ಸೂರಜ್‌ಸಿಂಗ್ ರಾಜಪೂತ, ವೀರಭದ್ರಪ್ಪ ಉಪ್ಪಿನ, ಅಂಬರೀಶ ಹಸ್ಮಕಲ್ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಪ್ರತಿಜ್ಞಾವಿಧಿ ಬೋಧಿಸಿದರು. ಸುಧಾಕರ ಎಲ್ಲಾನೋರ್, ಸುನೀಲ ಕಡ್ಡೆ ನಿರೂಪಿಸಿದರು. ಯೇಸುದಾಸ ಅಲಿಯಂಬುರೆ ವಂದಿಸಿದರು.
ಮೆರವಣಿಗೆಗೆ ಕಲಾ ತಂಡಗಳ ಮೆರಗು
ಕನ್ನಡಾಂಬೆ ವೃತ್ತದಿಂದ ರಂಗ ಮಂದಿರದ ಸಭಾಂಗಣದವರೆಗೆ ನಡೆದ ಕಲಾ ತಂಡಗಳ ಮೆರವಣಿಗೆಗೆ ಔರಾದ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ವಿಜಯಕುಮಾರ ಜಾಧವ, ಪ್ರೊ| ಎಸ್.ವಿ. ಕಲ್ಮಠ, ವೀರಭದ್ರಪ್ಪ ಉಪ್ಪಿನ್ ಚಾಲನೆ ನೀಡಿದರು. ರಾಯಚೂರಿನ ಅಂಬರೀಶ ಹಸ್ಯಕಲ್ ತಂಡದ ಹಗಲುವೇಷ, ಬೀದರಿನ ಶೇಷಪ್ಪ ಚಿಟ್ಟಾ ತಂಡದ ಚರ್ಮವಾದ್ಯ, ಯಾದಗಿರಿಯ ಹಣಮಂತರಾಯ ದೇವರ್ಕಲ್ ತಂಡದ ಡೊಳ್ಳು ಕುಣಿತ, ಬೀದರನ ಅಜಯ ಯೇಸುದಾಸ ಅಲಿಯಂಬುರೆ ತಂಡದ ಮುಖವಾಡ ಮತ್ತು ಔರಾದನ ಪೈತ್ರಿ ಕುಣಿತ ಮೆರಗು ಹೆಚ್ಚಿಸಿತು.