Advertisement

ಉನ್ನತ ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ

04:33 PM Feb 05, 2023 | Team Udayavani |

ಚಿಕ್ಕಬಳ್ಳಾಪುರ: ದೇಶ ಪ್ರಗತಿ ಹೊಂದಲು ಉನ್ನತ ಶಿಕ್ಷಣ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರು ಶಿಕ್ಷಣಪಡೆದುಕೊಳ್ಳಬೇಕು ಎಂದು ರಾಜ್ಯ ಕಾನೂನುಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂರ್ತಿಬಿ.ವೀರಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Advertisement

ಅವರು ಶನಿವಾರ ಜಿಲ್ಲೆಯ ಚಿಂತಾಮಣಿತಾಲೂಕಿನ ಕೈವಾರ ತಾತಯ್ಯ ದೇವಾಲಯ ಆವರಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಚಿಂತಾಮಣಿ ತಾಪಂ ಆಡಳಿತ ಹಾಗೂ ತಾಪಂಹಾಗೂ ಮಸ್ತೇನಹಳ್ಳಿ ಕಾನೂನು ಸೇವೆಗಳ ಕ್ಲಿನಿಕ್‌ ರಾಮಯ್ಯ ಕಾಲೇಜ್‌ ಆಫ್‌ ಲಾ ಇವರಸಂಯುಕ್ತಾಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಶಿಕ್ಷಣದ ಜತೆಗೆ ಜೀವನದಲ್ಲಿ ಶಿಸ್ತನ್ನುಕಲಿಯಬೇಕಾಗಿದೆ. ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಂತೆ ದೇಶದ ಸೆ„ನಿಕರಾಗಬೇಕು. ದೇಶದ ರಕ್ಷಣೆಗೆಇಂದಿನ ಯುವಜನತೆ ಶ್ರಮಿಸಬೇಕು. ನ್ಯಾಯಾಂಗದಲ್ಲಿ ಸಾರ್ವಜನಿಕರ ಹಿತಾಸಕ್ತಿಗಾಗಿ ಹಲವಾರುಕಾನೂನುಗಳನ್ನು ರೂಪಿಸಲಾಗಿದೆ. ಆದರೆಸಾರ್ವಜನಿಕರಿಗೆ ತಲುಪುವಲ್ಲಿ ವಿಫಲವಾಗುತ್ತಿದೆ. ಈನಿಟ್ಟಿನಲ್ಲಿ ಪ್ರತಿ ಹಳ್ಳಿ ಹಳ್ಳಿಯಲ್ಲಿಯೂ ಸಹ ಕಾನೂನು ಅರಿವು ಮೂಡಿಸಬೇಕು ಎಂದರು.

ಆಧುನಿಕ ಕಾಲದಲ್ಲಿ ಸ್ವಾರ್ಥ ಮನೋಭಾವ ಹೆಚ್ಚುತ್ತಿದೆ. ಹಾಗಾಗಿ ಪ್ರತಿಯೊಬ್ಬರು ಶಿಕ್ಷಣವನ್ನು ಪಡೆದುಕೊಳ್ಳಬೇಕು ದೇಶ ರಕ್ಷಣೆ ನಮ್ಮೆಲ್ಲರ ಜವಬ್ದಾರಿ ಎಂಬುದನ್ನು ಅರಿತುಕೊಳ್ಳಬೇಕು. ಹೆಣ್ಣು ಮಕ್ಕಳು ಸ್ವ ಸಹಾಯಸಂಘಗಳಿಂದ ಆರ್ಥಿಕವಾಗಿ ಸದೃಡವಾ ಗಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯ ಗಳ ನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಗೋಕುಲ್‌ ಶಿಕ್ಷಣ ಪ್ರತಿಷ್ಠಾನ ಗೌರವಾಧ್ಯಕ್ಷಡಾ.ಎಂ.ಆರ್‌.ಜಯರಾಮ್‌ ಮಾತನಾಡಿ,ರಾಮಯ್ಯ ಕಾನೂನು ಮಹಾವಿದ್ಯಾಲಯದಿಂದ ಕಾನೂನು ವಿದ್ಯಾರ್ಥಿಗಳು ಕಾನೂನು ಸಲಹಾ ಕೇಂದ್ರಗಳ ಮೂಲಕ ಸಾರ್ವಜನಿಕರಿಗೆ ಮಕ್ಕಳಿಗೆ ಕಾನೂನುಅರಿವು ನೆರವು ನೀಡುತ್ತಿರುವುದು ಶ್ಲಾಘನೀಯ. ಇದರ ನೆರವು ಪಡೆಯಬೇಕು ಎಂದರು.

Advertisement

ಕಾನೂನು ಸೇವೆಗಳ ಕ್ಲಿನಿಕ್‌ ಮತ್ತು ಇ-ಸೇವೆಗಳಪೋರ್ಟಲ್‌ಗೆ ಹೈಕೋರ್ಟ್‌ ನ್ಯಾ. ಬಿ.ವೀರಪ್ಪಅವರು ಚಾಲನೆ ನೀಡಿದರು.

ಕಾರ್ಯಕ್ರಮಕ್ಕೂಮುನ್ನಾ ಚಿಂತಾಮಣಿ ತಾಪಂಕಿನ ಹುಲುಗುಮ್ಮನಹಳ್ಳಿಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಮಯ್ಯ ಕಾನೂನು ಮಹಾವಿದ್ಯಾಲಯದಿಂದ ನಡೆದ ಆಫ್‌-ಕ್ಯಾಂಪಸ್‌ ಕಾನೂನು ಸೇವೆಗಳ ಕ್ಲಿನಿಕ್‌ಮತ್ತು ಇ-ಸೇವೆಗಳ ಪೋರ್ಟಲ್‌ಗೆ ನ್ಯಾ. ಬಿ. ವೀರಪ್ಪ ಅವರು ಚಾಲನೆ ನೀಡಿದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಸಿ.ಇ.ಎಫ್‌ ನ ನಿರ್ದೇಶಕರಾದ ಎಂ.ಆರ್‌. ಆನಂದರಾಮ್‌, ಹೆ„ಕೋರ್ಟ್‌ ಮಾಜಿ ನ್ಯಾ. ಆರ್‌.ಗುರುರಾಜನ್‌, ಕೆಎಸ್‌ಎಲ್‌ಎಸ್‌ಎ ಸದಸ್ಯಕಾರ್ಯದರ್ಶಿ ಜೈಶಂಕರ್‌, ಉಪ ಕಾರ್ಯದರ್ಶಿರಾಘವೇಂದ್ರ ಶೆಟ್ಟಿಗರ್‌, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜ್ಞೆàಶ್‌ ಕುಮಾರ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್‌ ಜೆ ಮಿಸ್ಕಿನ್‌, ಜಿಲ್ಲಾಧಿಕಾರಿ ಎನ್‌. ಎಂ.ನಾಗರಾಜ್‌, ಜಿಲ್ಲಾ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ್‌, ಜಿಪಂ ಉಪಕಾರ್ಯದರ್ಶಿ ಬಿ.ಶಿವಕುಮಾರ್‌, ಚಿಂತಾಮಣಿ ತಾಪಂ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷ ಎನ್‌.ಶಂಕರ್‌, ತಹಶೀಲ್ದಾರ್‌ ರಾಜೇಂದ್ರನ್‌ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next