Advertisement

ಅರಣ್ಯವಾಸಿಗಳ ಒಕಲೆಬ್ಬಿಸುವ ಪ್ರಕ್ರಿಯೆ: ಅರಣ್ಯ ಸಂರಕ್ಷಣಾಧಿಕಾರಿ ಆದೇಶಕ್ಕೆ ಖಂಡನೆ

02:40 PM Jan 18, 2022 | Team Udayavani |

ಶಿರಸಿ: ಅರಣ್ಯ ಭೂಮಿಯ ಮೇಲೆ ಅವಲಂಭಿತವಾಗಿರುವ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ನಿಟ್ಟಿನಲ್ಲಿ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ತಕ್ಷಣ ಅರಣ್ಯ ಸಾಗುವಳಿದಾರರನ್ನ ಒಕ್ಕಲೆಬ್ಬಿಸುವ ಪ್ರಕರಣ ಇತ್ಯರ್ಥಕ್ಕೆ ಕ್ರಮ ಜರುಗಿಸಬೇಕೆಂಬ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬೇಂಗಳೂವರ ಆದೇಶವು ಕಾನೂನು ಬಾಹಿರವಾಗಿದೆ. ಅಧಿಕಾರಿ ವರ್ಗಗಳ ಸರ್ವಾಧಿಕಾರ ಧೋರಣೆಯು ಖಂಡನಾರ್ಹ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

Advertisement

ಅವರು ಇಂದು ಒಕ್ಕಲೆಬ್ಬಿಸುವ ಪ್ರಕ್ರೀಯೆ ಸಂಬಂಧಿಸಿ ಪ್ರಾಧಿಕಾರದಿಂದ ಅತಿಕ್ರಮಣದಾರರಿಗೆ ಬಂದಿರುವ ನೋಟಿಸ್‌ದಾರರೊಂದಿಗೆ ಸಮಾಲೋಚಿಸಿ ಮಾತನಾಡಿದರು.

ಅರಣ್ಯ ಹಕ್ಕು ಕಾಯಿದೆಯಲ್ಲಿನ ಅರ್ಜಿಗಳು ವಿಚಾರಣೆ ಹಂತದಲ್ಲಿ ಒಕ್ಕಲೆಬ್ಬಿಸಬಾರದೆಂಬ ಕಾನೂನು ಮತ್ತು ಸರ್ವೋಚ್ಛ ನ್ಯಾಯಾಲಯ ಸುಫ್ರೀಂ ಕೋರ್ಟಿನ ಸ್ಪಷ್ಟ ನಿರ್ದೇಶನ ಇದ್ದಾಗಿಯೂ ಅರಣ್ಯ ಇಲಾಖೆಯು ಪ್ರತಿ ಸೋಮವಾರ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸುತ್ತಿದೆ. ಈ ಬಗ್ಗೆ ಪ್ರತಿ ತಿಂಗಳು ವರದಿ ನೀಡಬೇಕೆಂಬ ನಿರ್ದೇಶನವನ್ನು ನೀಡಿ, ನಿರ್ಧೇಶನವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂಬ ಕೆಳಹಂತದ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದು ಖೇದಕರ ಎಂದು ರವೀಂದ್ರ ನಾಯ್ಕ ಹೇಳಿದ್ದಾರೆ.

ಹಿಂದಿನ ಸರಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಹೊಸ ಆದೇಶದಂತೆ ಮೂರು ಎಕರೆಗಿಂತ ಕಡಿಮೆ ಇರುವ ಅತಿಕ್ರಮಣದಾರರನ್ನು ಯಾವುದೇ ಅಡ್ಡಿ ಆತಂಕವಿಲ್ಲದೇ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸಬಹುದು ಎಂಬ ಅಂಶ ಸದ್ರಿ ಆದೇಶದಲ್ಲಿ ಅಡಕವಾಗಿರುವುದು ಗಮನಾರ್ಹ ಅಂಶವಾಗಿದೆ ಎಂದೂ ರವೀಂದ್ರ ನಾಯ್ಕ ತಿಳಿಸಿದರು.

ವೇದಿಕೆಯಲ್ಲಿ ಸುಶೀಲಾ ಅಣ್ಣಪ್ಪ ನಾಯ್ಕ, ಸವಿತಾ ಪೂಜಾರಿ, ಶಾಯಿದಾ ಮೈನುದ್ದೀನ್ ಸೈಯದ್, ನಾಗರತ್ನ ವೆರ್ಣೆಕರ್, ಕಮಲಾ ರಘುಪತಿ ನಾಯ್ಕ, ಸಾವಿತ್ರಿ ಗೋವಿಂದ ನಾಯ್ಕ, ಗಣಪತಿ ಗೋವಿಂದ ನಾಯ್ಕ, ಶ್ರೀಧರ ನಾರಾಯಣ ನಾಯ್ಕ, ರಜಿನಿ ಕುಮಾರ ಆಚಾರಿ ಮುಂತಾದವರು ಉಪಸ್ಥಿತರಿದ್ದರು.

Advertisement

6 ಸಾವಿರ ಅರಣ್ಯವಾಸಿಗೆ ನೋಟಿಸ್

ಜಿಲ್ಲಾದ್ಯಂತ ಅರಣ್ಯವಾಸಿಗಳನ್ನು ಒಕಲೆಬ್ಬಿಸುವ ಪ್ರಕ್ರಿಯೆ ಪ್ರತಿವಾರ ಜರುಗಿಸಬೇಕೆಂಬ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬೇಂಗಳೂರವರ ಆದೇಶದಂತೆ ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸುವ ದಿಶೆಯಲ್ಲಿ ಸಂಬಂಧಿಸಿದ ಪ್ರಾಧಿಕಾರಗಳಿಂದ ಈಗಾಗಲೇ ಜಿಲ್ಲಾದ್ಯಂತ ಸುಮಾರು ಆರು ಸಾವಿರ ಅತಿಕ್ರಮಣದಾರರಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಯಿಂದ ಅಧಿಕೃತ ನೋಟಿಸ್ ಜಾರಿಯಾಗುತ್ತಿದೆ. –ರವೀಂದ್ರ ನಾಯ್ಕ, ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next