Advertisement
ಗ್ರಾಮ ಪಂಚಾಯಿತಿ ನೌಕರರ ಸಮಸ್ಯೆಗಳ ಕುರಿತು ಬುಧವಾರ ಗೃಹ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಗ್ರಾಪಂ ನೌಕಕರರ ಸಂಘದ ಪ್ರತಿನಿಧಿಗಳು, ಗ್ರಾಮೀಣಾಭಿವೃದ್ಧಿ ಸಚಿವರು, ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಯವರು ಈ ಭರವಸೆ ನೀಡಿದ್ದಾರೆ ಎಂದು ನೌಕರರ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ “ಉದಯವಾಣಿ’ಗೆ ತಿಳಿಸಿದ್ದಾರೆ.
ಜಾಡಮಾಲಿಗಳು ಸೇರಿ ಒಟ್ಟು 51 ಸಾವಿರ ನೌಕರರಿದ್ದಾರೆ. ಈ ಪೈಕಿ ಬಿಲ್ ಕಲೆಕ್ಟರ್ ಮತ್ತು ಕಂಪ್ಯೂಟರ್ ಅಪರೇ
ಟರ್‌ಗಳಿಗೆ ಮಾಸಿಕ ತಲಾ 13 ಸಾವಿರ, ಪಂಪ್ ಅಪರೇಟರ್‌ಗಳಿಗೆ 11 ಸಾವಿರ, ಜವಾನರಿಗೆ 10 ಸಾವಿರ ಹಾಗೂ ಜಾಡ ಮಾಲಿಗಳಿಗೆ 9 ಸಾವಿರ ರೂ. ಕನಿಷ್ಠ ವೇತನ ನಿಗದಿಯಾಗಿದೆ. ಆದರೆ, ಇದನ್ನು ಸಮರ್ಪಕವಾಗಿ ಜಾರಿಗೊಳಿಸಿರಲಾಗಿರಲಿಲ್ಲ. ಹಲವು ವರ್ಷಗಳಿಂದ ನೌಕರರುಈ ಬೇಡಿಕೆ ಇಟ್ಟಿದ್ದರು. ಅದರಂತೆ ಸಭೆಯಲ್ಲಿ ಬೇಡಿಕೆ ಆಲಿಸಿದ ಮುಖ್ಯಮಂತ್ರಿ,ಸೂಕ್ತ ಕ್ರಮ ಕೈಗೊಳ್ಳುವ ಖಚಿತ ಭರವಸೆನೀಡಿದ್ದಾರೆ ಎಂದು ತಿಳಿಸಿದರು. ಉಳಿದಂತೆ, ಬಿಲ್‌ಕಲೆಕ್ಟರ್‌ಗಳಿಗೆ ಗ್ರಾ.ಪಂ. ಕಾರ್ಯದರ್ಶಿ-2 ಹುದ್ದೆಗೆ ಬಡ್ತಿ ನೀಡಲು ಪಿಯುಸಿ ಬದಲು ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯ ಮಾನದಂಡ ಮುಂದುವರಿಸುವ ಬಗ್ಗೆಯೂ ಭರವಸೆ ನೀಡಿದ್ದಾರೆ.