Advertisement
ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರು ಹೆರಿಗೆ, ಅನಾರೋಗ್ಯ ಮತ್ತಿತರ ಕಾರಣಗಳಿಂದ ದೀರ್ಘ ರಜೆಯಲ್ಲಿ ತೆರಳಿದರೆ ಪಾಠಕ್ಕೆ ತೊಂದರೆಯಾಗದಿರಲೆಂದು ನಿವೃತ್ತ ಶಿಕ್ಷಕರನ್ನು ನೇಮಿಸಲು ಸರಕಾರ ಅವಕಾಶ ಕಲ್ಪಿಸಿದೆ. ಆದರೆ ಸಂಭಾವನೆ ತೀರಾ ಕಡಿಮೆ ಎಂಬ ಕಾರಣಕ್ಕೆ ನಿವೃತ್ತರು ಮನಸ್ಸು ಮಾಡುತ್ತಿಲ್ಲ. ಇದರಿಂದಾಗಿ ಬಿಡುಗಡೆಯಾದ ಅನುದಾನವೂ ಖರ್ಚಾಗದೆ ಬೊಕ್ಕಸಕ್ಕೆ ಮರಳುತ್ತಿದೆ.
ಯೋಜನೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಮುಖಾಂತರ ಸರಕಾರ ವಾರ್ಷಿಕ ಗರಿಷ್ಠ 3 ಲಕ್ಷ ರೂ. ಬಿಡುಗಡೆ ಮಾಡುತ್ತದೆ. ಸರಕಾರದ 100 ರೂ.ನೊಂದಿಗೆ ಎಸ್‌ಡಿಎಂಸಿ ಮತ್ತು ಮೇಲುಸ್ತುವಾರಿ ಸಮಿತಿಯವರು, ಊರ ದಾನಿಗಳು ಸೇರಿ ಹಣ ಒಟ್ಟು ಮಾಡಿ ದಿನಕ್ಕೆ 500 ರೂ. ವೇತನ ನೀಡಿರುವ ಉದಾಹರಣೆ ಕೆಲವೆಡೆ ಇದೆ. ಆದರೆ ಬಹುತೇಕ ಶಾಲೆಗಳಲ್ಲಿ ಹೀಗಿಲ್ಲ. ಹೀಗಾಗಿ ಕೆಲವು ಜಿಲ್ಲೆಗಳಲ್ಲಿ ಸರಕಾರದ ಅನುದಾನ ಅರ್ಧದಷ್ಟು ಖರ್ಚಾದರೆ, ಇನ್ನುಳಿದ ಕಡೆ ಸರಕಾರಕ್ಕೆ ವಾಪಸಾಗುತ್ತಿದೆ.
ದ.ಕ., ಉಡುಪಿಗೆ 5.45 ಲಕ್ಷ ರೂ. 2019-20ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಸುಮಾರು 5.45 ಲಕ್ಷ ರೂ. ಬಿಡುಗಡೆಯಾಗಿದೆ. ಇದರಲಿಲ್ಲ ದ.ಕ. ಜಿಲ್ಲೆಗೆ 2.45 ಲಕ್ಷ ರೂ., ಉಡುಪಿಗೆ ಸುಮಾರು 3 ಲಕ್ಷ ರೂ. ಇದರಲ್ಲಿ ಬಹುತೇಕ ಮೊತ್ತ ಬಳಕೆಯಾಗಿಲ್ಲವಾದ್ದರಿಂದ ಹಿಂದಿರುಗಿಸಲಾಗಿದೆ ಎಂದು ಉಭಯ ಜಿಲ್ಲೆಗಳ ಶಿಕ್ಷಣ ಇಲಾಖಾಧಿಕಾರಿಗಳು ಹೇಳಿದ್ದಾರೆ. ನಿವೃತ್ತ ಶಿಕ್ಷಕರನ್ನು ನೇಮಿಸುವುದಕ್ಕೆ ಉಡುಪಿ ಜಿಲ್ಲೆಗೆ 3 ಲಕ್ಷ ರೂ. ಬಿಡುಗಡೆಯಾಗಿದೆ. ಕೆಲವು ಶಾಲೆಗಳಲ್ಲಿ ಎಸ್‌ಡಿಎಂಸಿ, ಊರವರು ಸೇರಿ ಹಣ ಹೊಂದಿಸಿ ನಿವೃತ್ತರನ್ನು ನೇಮಕ ಮಾಡಿಕೊಂಡಿದ್ದಾರೆ. ಈ ವರ್ಷ ಇಲ್ಲಿಯ ವರೆಗೆ 1.5 ಲಕ್ಷ ರೂ. ಖರ್ಚಾಗಿದೆ.
-ಶೇಷಶಯನ ಕಾರಿಂಜ, ಉಡುಪಿ ಡಿಡಿಪಿಐ
Related Articles
-ಮಲ್ಲೇಸ್ವಾಮಿ, ದ.ಕ. ಡಿಡಿಪಿಐ
Advertisement
ಧನ್ಯಾ ಬಾಳೆಕಜೆ