Advertisement

ಸ್ಥಳೀಯರಿಗೆ ಬೃಹತ್‌ ಕಂಪೆನಿಗಳಿಂದ ಹೆಚ್ಚುತ್ತಿದೆ ಸಮಸ್ಯೆ: ಮುನೀರ್‌ 

03:26 PM Feb 09, 2018 | Team Udayavani |

ಸುರತ್ಕಲ್‌ : ಬೃಹತ್‌ ಸಂಸ್ಥೆಗಳು, ಉದ್ಯಮಗಳು ಬಂದರೆ ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ ಎಂಬ ಭರವಸೆ
ಸುಳ್ಳಾಗಿದ್ದು, ಇದೀಗ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಿ ಆರೋಗ್ಯ ಕೆಡಿಸಿ ಕೊಳ್ಳುವ ಸ್ಥಿತಿಗೆ ತಲುಪಿದ್ದೇವೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಹೇಳಿದರು.

Advertisement

ಕಾನಾ ಜೋಕಟ್ಟೆ ಕಾರಿಡಾರ್‌ನ ದುರವಸ್ಥೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ನದಿ, ಭೂ ಮಾಲಿನ್ಯದಿಂದ ಜನರು ಉಸಿರಾಟ, ಚರ್ಮ ಸಮಸ್ಯೆಯಿಂದ ಬಳಲುವಂತಾಗಿದೆ. ಜನರು ಓಡಾಡಲು ಮಾಡಿದ ಕಾರಿಡಾರ್‌ ಹದಗೆಟ್ಟಿದ್ದು ದ್ವಿಚಕ್ರ ಸವಾರರು ಅಪಘಾತಕ್ಕೀಡಾಗುವ ಸ್ಥಿತಿ ಬಂದಿದೆ.

ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದರೂ ದುರಸ್ತಿ ಕಾರ್ಯಕೈಗೊಂಡಿಲ್ಲ. ಕಂಪೆನಿಗಳು ಸಿಎಸ್‌ಆರ್‌ ನಿಧಿಯನ್ನು ಸಮಸ್ಯೆ ಅನುಭವಿಸುತ್ತಿರುವ ಜನರಿಗಾಗಿ ವಿನಿಯೋಗಿಸುವ ಬದಲು ಬೇರೆಡೆ ಉಪಯೋಗ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿ.ಕೆ. ಇಮ್ತಿಯಾಝ್, ಅಜ್ಮಲ್‌ ಅಹ್ಮದ್‌, ಚಂದ್ರಶೇಖರ್‌, ಇಕ್ಬಾಲ್‌, ಸಲೀಂ ಶ್ಯಾಡೋ, ಅಮೀ
ನಮ್ಮ, ಅಬೂಬಕ್ಕರ್‌ ಬಾವಾ, ಯಮುನಕ್ಕ ಜೋಕಟ್ಟೆ ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next