Advertisement

ಒಗ್ಗಟ್ಟಾದಾಗ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯ: ವಿರಾರ್‌ ಶಂಕರ್‌ ಶೆಟ್ಟಿ

05:11 PM Nov 17, 2019 | Suhan S |

ಮುಂಬಯಿ, ನ. 16: ವಸಾಯಿ ತಾಲೂಕು ಸೌತ್‌ ಇಂಡಿಯನ್‌ ಫೆಡರೇಶನ್‌ ವತಿಯಿಂದ ವಾರ್ಷಿಕ ಸ್ನೇಹ ಸಮ್ಮಿಲನ ಮತ್ತು ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಫೆಡರೇಶನ್‌ ಪದಾಧಿಕಾರಿಗಳ ಪ್ರೋತ್ಸಾಹದಿಂದ ಮೂವರು ಬಹುಜನ ವಿಕಾಸ ಅಘಾಡಿಯ ಶಾಸಕರು ಚುನಾಯಿತ ರಾಗಿದ್ದು ಅವರ ಅಭಿನಂದನ ಸಮಾರಂಭವು ನ. 4ರಂದು ವಿರಾರ್‌ ಪಶ್ಚಿಮದ ಹೊಟೇಲ್‌ ಬಂಜಾರಗ್ರ್ಯಾಂಡ್ ನ‌ ಸಭಾಗೃಹದಲ್ಲಿ ನಡೆಯಿತು.

Advertisement

ಸಮಾರಂಭದ ಅಧ್ಯಕ್ಷತೆಯನ್ನು ವಸಾಯಿ ತಾಲೂಕು ಸೌತ್‌ ಇಂಡಿಯನ್‌ ಫೆಡರೇಶನ್‌ ಅಧ್ಯಕ್ಷ ಡಾ| ವಿರಾರ್‌ ಶಂಕರ ಶೆಟ್ಟಿ ಅವರು ವಹಿಸಿದ್ದು, ಬಹುಜನ ವಿಕಾಸ ಅಘಾಡಿಯಶಾಸಕರಾದ ಹಿತೇಂದ್ರ ಠಾಕೂರ್‌, ಕ್ಷಿತಿಜ್‌ ಠಾಕೂರ್‌, ಪ್ರಥಮ ಮಹಾ ಪೌರರಾದ ಪ್ರವೀಣ್‌ ಶೆಟ್ಟಿ, ನವಘರ್‌ ಮಾಣಿಕ್‌ಪುರ ಮಾಜಿ ಅಧ್ಯಕ್ಷ ರಾಜೇಶ್ವರಿ ನಾರಾಯಣ್‌, ಬೊಯಿಸರ್‌ನ ಉದ್ಯಮಿ ಭುಜಂಗ ಶೆಟ್ಟಿ, ವಸಾಯಿ ತಾಲೂಕು ಸೌತ್‌ ಇಂಡಿಯನ್‌ ಫೆಡರೇಶನ್‌ ಗೌರವ ಅಧ್ಯಕ್ಷ ಪಿ. ವಿ. ಕೆ. ನಂಬಿಯಾರ್‌, ಕಾರ್ಯದರ್ಶಿ ನರೇಂದ್ರ ಪ್ರಭು, ಕೋಶಾಧಿಕಾರಿ ಚಕ್ರಮಣಿ, ಜತೆ ಕೋಶಾಧಿಕಾರಿ ಡಯಾನ್‌ ಡಿಸೋಜಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಹಾಪೌರರಾದ ಪ್ರವೀಣ್‌ ಶೆಟ್ಟಿ ಮಾತನಾಡಿ ಫೆಡರೇಶನ್‌ನ ಪ್ರೋತ್ಸಾಹ ಮತ್ತು ಪ್ರಯತ್ನದಿಂದ ನಮ್ಮ ಮೂವರು ಶಾಸಕರು ಜಯಗಳಿಸಿದ್ದಾರೆ. ಕರ್ಮಭೂಮಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಕಾರ್ಯ ನಿರ್ವಹಿಸುತ್ತಿರುವುದು ಅಭಿನಂದನೀಯ. ಇದರ ಶ್ರೇಯಸ್ಸು ಫೆಡರೇಶನ್‌ನ ಎಲ್ಲ ಪದಾಧಿಕಾರಿಗಳಿಗೆ ಪ್ರಥಮವಾಗಿ ವಿರಾರ್‌ ಶಂಕರ್‌ ಶೆಟ್ಟಿ ಅವರಿಗೆ ಸಲ್ಲುತ್ತದೆ. ನಾವೆಲ್ಲ ಸಂಘ ಸಂಸ್ಥೆಗಳು ಒಗ್ಗೂಡಿ ಕ್ಷೇತ್ರದ ಅಭಿವೃದ್ಧಿ ದುಡಿಯೋಣ ಎಂದು ತಿಳಿಸಿದರು.

ಹಿತೇಂದ್ರ ಠಾಕೂರ್‌ ಮಾತನಾಡಿ, ಫೆಡರೇಶನ್‌ ಮಾಡಿರುವ ಕೆಲಸಕ್ಕೆ ಸಂಸ್ಥೆಯ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ನಮ್ಮ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಯಾವ ಒಳ್ಳೆಯ ಕೆಲಸಗಳಲ್ಲಿ ವಿಳಂಬ ಅಥವಾ ಆಗದೇ ಇದ್ದಲ್ಲಿ ನನ್ನ ಗಮನಕ್ಕೆ ತರಬೇಕು. ನಗರ ಸೇವಕರು ಕೆಲಸಗಳಲ್ಲಿ ವಿಫಲವಾದರೆ ನಮ್ಮಲ್ಲಿ ತಿಳಿಸಿದರೆ ನಾವೂ ಅದನ್ನು ತಿದ್ದುಪಡಿಸಬಹುದು. ಎಲ್ಲರ ಸಹಕಾರ ಅಗತ್ಯವಿದೆ ಎಂದು ನುಡಿದರು.

ನಮ್ಮ ಜಯಕ್ಕೆ ಫೆಡರೇಶನ್‌ನ ಅಧ್ಯಕ್ಷರ ಮುಂದಾಳತ್ವದಲ್ಲಿ ಹಲವು ಸಭೆಗಳನ್ನು ನಡೆಸಿ, ಗೆಲುವಿಗೆ ಶ್ರಮ ಪಟ್ಟ ಎಲ್ಲರಿಗೂ ನಮ್ಮ ಧನ್ಯವಾದಗಳು. ವಸಾಯಿ ತಾಲೂಕು ಅಭಿವೃದ್ಧಿ ಕ್ಷೇತ್ರವೆಂದು ಪರಿಗಣಿಸಲು ನಾವೂ ಸಂಪೂರ್ಣವಾಗಿ ಪ್ರಯತ್ನಿಸುತ್ತೇವೆ. ಅದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದು ನಲಸೋಪರ ವಿಧಾನ ಸಭೆಯ ಶಾಸಕ ಕ್ಷಿತಿಜ್‌ ಠಾಕೂರ್‌ ತಿಳಿಸಿದರು. ಇದೇ ಸಂದರ್ಭದಲ್ಲಿ ಇತ್ತೀಚಿಗೆ ರಾಜ್ಯಪಾಲರಿಂದ ದೊರೆತಿರುವ ಧಾರ್ಮಿಕ ಸಾಮರಸ್ಯ ಮತ್ತು ಶಾಂತಿ ಪುರಸ್ಕಾರ ಪಡೆದಿರುವ ವಿರಾರ್‌ ಶಂಕರ ಶೆಟ್ಟಿ ಅವರನ್ನು ಜಯೇಂದ್ರ ಠಾಕೂರ್‌ ಅವರು ಅತಿಥಿಗಳನ್ನೊಳಗೊಂಡು ಶಾಲು ಹೊದೆಸಿ, ಪೇಟ ತೊಡಿಸಿ, ಸಮ್ಮಾನಿಸಿ ನಿಮ್ಮ ಸಮಾಜ ಸೇವೆ ನಿರಂತರ ನಡೆಯಲಿ, ಅನೇಕ ಗೌರವ ಪುರಸ್ಕಾರಗಳು ನಿಮ್ಮನ್ನು ಅರಸಿಕೊಂಡು ಬರಲಿ. ಜೀವದಾನಿ ಮಾತೆ ಮತ್ತು ಸಾಯಿಬಾಬಾರ ಆಶೀರ್ವಾದ ನಿಮ್ಮೊಡನೆ ಸದಾ ಇರಲಿ ಎಂದು ಶುಭ ಹಾರೈಸಿದರು.

Advertisement

ವಿರಾರ್‌ ಶಂಕರ ಶೆಟ್ಟಿ ಅವರು ಅಧ್ಯಕ್ಷೀಯ ಭಾಷಣಗೈದು ಫೆಡರೇಶನ್‌ನ ಎಲ್ಲರೂ ಒಗ್ಗೂಡಿ ಮೂವರು ಶಾಸಕರನ್ನು ಜಯಭೇರಿಗೊಳಿಸಿದಕ್ಕೆ ಎಲ್ಲರಿಗೂ ಅಂತರಾಳದಿಂದ ಅಭಿನಂದಿಸಿ ಕೃತಜ್ಞತೆ ಸಲ್ಲಿಸುತ್ತೇನೆ. ಇಂದು ನಿಮ್ಮೆಲ್ಲರ

ಪರವಾಗಿ ನೂತನ ಶಾಸಕರನ್ನು ಸಮ್ಮಾನಿಸುತ್ತೇವೆ. ನನ್ನಿಂದ ಒಬ್ಬನಿಗೆ ಸಾಧ್ಯವಿಲ್ಲ, ನಿಮ್ಮೆಲ್ಲರ ವಿಶ್ವಾಸ, ತನು ಮನ ಸಹಕಾರದಿಂದ ಸಾಧ್ಯವಾಗಿದೆ. ನಾವೆಲ್ಲರೂ ಒಗ್ಗಟ್ಟಾದಾಗ ಮಾತ್ರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯ ಎಂದು ನುಡಿದು ಎಲ್ಲರಿಗೂ ಅಭಿವಂದಿಸಿದರು.

ಈ ಸಂದರ್ಭದಲ್ಲಿ ಲಯನ್‌ ಡಾ| ಕೆ. ಟಿ. ಶಂಕರ ಶೆಟ್ಟಿ, ಲಯನ್‌ ಶಶಿಕಾಂತ್‌ ಸುವರ್ಣ, ವಿರಾರ್‌-ನಲಸೋಪರ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಸದಾಶಿವ ಕರ್ಕೇರ, ವಸಾಯಿ-ಡಹಾಣು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದು ಶುಭ ಕೋರಿದರು. ನರೇಂದ್ರ ಪ್ರಭು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next