Advertisement

ಯುವತಿಯ ಖಾಸಗಿ ದೃಶ್ಯ ಸೆರೆಹಿಡಿದು ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ

12:08 PM Aug 06, 2023 | Team Udayavani |

ಬೆಂಗಳೂರು: ಇನ್‌ಸ್ಟಾ ಗ್ರಾಂನಲ್ಲಿ ವಿದ್ಯಾರ್ಥಿನಿಯನ್ನು ಪರಿಚಯಿಸಿಕೊಂಡು ಆಕೆಯ ಜತೆಗೆ ಕಳೆದ ಖಾಸಗಿ ದೃಶ್ಯ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿರುವ ಪಂಜಾಬ್‌ ಮೂಲದ ಆರೋಪಿಯ ವಿರುದ್ಧ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.

Advertisement

ಮಹದೇವಪುರದ ನಿವಾಸಿ 20 ವರ್ಷದ ವಿದ್ಯಾರ್ಥಿನಿಗೆ ಇನ್‌ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಬುಲ್‌ಬುಲ್‌ ಕುಮಾರ್‌ ದಾಸ್‌ ಪರಿಚಯವಾಗಿತ್ತು. ಆತನ ಮಾತಿನ  ಮೋಡಿಗೆ ಮರುಳಾದ ವಿದ್ಯಾರ್ಥಿನಿ ಆತನನ್ನು ಪಂಜಾಬ್‌ನಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಳು. ಆತ ವಿದ್ಯಾರ್ಥಿನಿ ಜತೆಗೆ ಕಳೆದ ಕೆಲ ಖಾಸಗಿ ದೃಶ್ಯಗಳನ್ನು ಸೆರೆಹಿಡಿದಿದ್ದ. ಇತ್ತೀಚೆಗೆ ವಿದ್ಯಾರ್ಥಿನಿ ಆತನ ಜೊತೆಗೆ ಮಾತನಾಡಲು ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿಯು ವಿದ್ಯಾರ್ಥಿನಿಯ ಹೆಸರಿನಲ್ಲಿ ನಕಲಿ ಇನ್‌ಸ್ಟಾ ಗ್ರಾಂ ಖಾತೆ ತೆರೆದು ಆಕೆಯೊಂದಿಗೆ ಕಳೆದ ಖಾಸಗಿ ದೃಶ್ಯಗಳನ್ನು ಅಪ್‌ಲೋಡ್‌ ಮಾಡಿದ್ದ. ಇದು ವಿದ್ಯಾರ್ಥಿನಿ ಗಮನಕ್ಕೆ ಬಂದಿದ್ದು, ಆಕೆ ಆತನ ವಿರುದ್ಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next