Advertisement

ಜ್ಯೋತಿಷಿ ಸೋಗಿನಲ್ಲಿ ಅತ್ಯಾಚಾರವೆಸಗಿ ನಗದು ದೋಚಿದ್ದಾತನ ಸೆರೆ

12:34 PM May 23, 2017 | Team Udayavani |

ಬೆಂಗಳೂರು: ಮಗನ ಮೂರ್ಛೆ ರೋಗ ಸರಿಪಡಿಸುವಂತೆ ನೆರವು ಕೇಳಿದ್ದ ಮಹಿಳೆಯ ಅಸಹಾ ಯಕತೆಯನ್ನೆ ದುರುಪಯೋಗಪಡಿ ಸಿಕೊಂಡು ಆಕೆಯೊಂದಿಗೆ ಹತ್ತಾರು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಲ್ಲದೇ, 20.7 ಲಕ್ಷ ರೂ. ನಗದು ಮತ್ತು 300 ಗ್ರಾಂ ಚಿನ್ನಾಭರಣ ದೋಚಿ ಪರಾರಿ ಯಾಗಿದ್ದ ಆರೋಪಿಯನ್ನು ವಿಜಯ ನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಪ್ರಸನ್ನಕುಮಾರ್‌ (31) ಬಂಧಿತ ಆರೋಪಿ. ಘಟನೆ ಸಂಬಂಧ ಸಂತ್ರಸ್ತೆ ಮೇ 15ರಂದು ವಿಜಯನಗರ ಠಾಣೆಗೆ ದೂರು ನೀಡಿದ್ದರು. ಅಂಧರ ಸಂಸ್ಥೆಯೊಂದರ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಲು ಅಗರಬತ್ತಿ ಮಾರಾಟ ಮಾಡುವ ನೆಪದಲ್ಲಿ ಮಹಿಳೆಯನ್ನು ಪರಿಚಯಿಸಿಕೊಂಡ ಆರೋಪಿ, ಬಳಿಕ ಆಕೆಯ ಮಗನ ರೋಗದ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದು ಕೃತ್ಯವೆಸಗಿದ್ದಾನೆ.

ಆರೋಪಿಯ ಮೊಬೈಲ್‌ ಕರೆಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳಲ್ಲಿದ್ದ ದೃಶ್ಯಾವಳಿಗಳನ್ನು ಸಂಗ್ರಹಿಸಿ ಆತನನ್ನು ಬಂಧಿಸಲಾಗಿದ್ದು, ಈತನಿಂದ 14 ಲಕ್ಷ ನಗದು ಮತ್ತು 300 ಗ್ರಾಂ ಚಿನ್ನಾಭರಣ, ಬೈಕ್‌ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

2016 ಡಿಸೆಂಬರ್‌ ನಲ್ಲಿ ಸಂತ್ರಸ್ತೆಯ ಮನೆಗೂ ಹೋಗಿ, ಅಂಧರ ಸಂಸ್ಥೆ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿದ್ದಾನೆ.  ಬಳಿಕ ಸ್ಥಳೀಯರಿಂದ ಸಂತ್ರಸ್ತೆಯ ಎಲ್ಲ ಮಾಹಿತಿಯನ್ನು ಪಡೆದುಕೊಂಡಿ ದ್ದಾನೆ. ಹೀಗೆ ಒಂದು ದಿನ ಮನೆಗೆ ಬಂದ ಆರೋಪಿ, ನಾನು ಭವಿಷ್ಯ ಹೇಳುತ್ತೇನೆ. ನಿಮ್ಮ ಮನೆಯಲ್ಲಿ ಸಮಸ್ಯೆಯಿದೆ. ನೀವು ಒಪ್ಪಿದರೆ ಬಗೆಹರಿಸುತ್ತೇನೆ ಎಂದು ನಂಬಿಸಿದ್ದ.

ನಿಮ್ಮ ಮಗುವಿನ ಮೂರ್ಛೆ ರೋಗ ಗುಣಪಡಿಸುತ್ತೇನೆಂದು ಹೇಳಿದ್ದ ಪ್ರಸನ್ನ, ತನ್ನ ಮೈಮೇಲೆ ದೇವಿ ಬರುತ್ತಾಳೆ. ಈ ಸಿಗರೇಟ್‌ ಸೇದಿದರೆ ಬರುವ ಹೊಗೆಯಲ್ಲಿ ನಿನ್ನ ಮಗುವಿನ ರೋಗದ ಬಗ್ಗೆ ತಿಳಿಯುತ್ತದೆ ಎಂದು ಹೇಳಿ, ಗಾಂಜಾ ತುಂಬಿದ ಸಿಗರೇಟ್‌ ಸೇದಿಸಿದ್ದಾನೆ. ವಿಪರೀತ ಹೊಗೆಯಿಂದ ಕುಸಿದ ಬಿದ್ದ ಸಂತ್ರಸ್ತೆಯನ್ನು ಮೇಲಕ್ಕೆ ಎತ್ತಿ, ಬಟ್ಟೆ ಕಳಚಲು ಹೇಳಿದ್ದಾನೆ.

Advertisement

ಬಳಿಕ ಮೊಬೈಲ್‌ನಲ್ಲಿ ನಗ್ನ ದೇಹದ ಫೋಟೋಗಳನ್ನು ತೆಗೆದುಕೊಂಡು, ನಿನ್ನ ದೇಹದಲ್ಲಿ ಸಮಸ್ಯೆಯಿದೆ. ನನ್ನೊಂದಿಗೆ ಸಂಭೋಗ ನಡೆಸಿದರೆ, ನಿನ್ನ ಮಗನ ರೋಗ, ನಿನ್ನ ಪತಿಯ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿ ಸಂಭೋಗ ನಡೆಸಿದ್ದಾನೆ.

ಎರಡು ದಿನಗಳ ಬಳಿಕ ಮತ್ತೆ ಬಂದ ಆರೋಪಿ, ನಿನ್ನ ನಗ್ನ ದೇಹದ ಫೋಟೋಗಳನ್ನು ಲ್ಯಾಪ್‌ಟಾಪ್‌ನಲ್ಲಿ ಹಾಕಿಕೊಂಡು ನೋಡಿದೆ. ನಿನ್ನ ದೇಹದಲ್ಲಿ ದೋಷವಿದೆ. ಏಳು ಬಾರಿ ನನ್ನೊಂದಿಗೆ ಸಂಭೋಗ ನಡೆಸಿದರೆ ಎಲ್ಲವೂ ಪರಿಹಾರ ಆಗುತ್ತದೆ ಎಂದು ಹೇಳಿ ಅಷ್ಟು ಬಾರಿಯೂ ಸಂಭೋಗ ನಡೆಸಿದ್ದಲ್ಲದೇ, ನಗದು, ಚಿನ್ನಾಭರಣ ಕೂಡ ದೋಚಿದ್ದಾನೆ.

ಜತೆಗೆ ಅನೈತಿಕ ಸಂಬಂಧದ ಬಗ್ಗೆ ಪತಿಗೆ ಹೇಳುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಪತಿಯ ಡೆಬಿಟ್‌ ಕಾರ್ಡ್‌ನಿಂದ 75 ಸಾವಿರ, ಚೆಕ್‌ಗಳ ಮೂಲಕ 9 ಲಕ್ಷ, ನಗದು ರೂಪದಲ್ಲಿ 11 ಲಕ್ಷ ಹಣ ಮತ್ತು ಚಿನ್ನಾಭರಣ ಪಡೆದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

ಅಂಧರ ಸಂಸ್ಥೆಯೇ ಇಲ್ಲ
ಮಲ್ಲೇಶ್ವರದಲ್ಲಿರುವ ಅಂಧರ ಸಂಸ್ಥೆಯ ಸೇವಕ ಎಂದು ಪರಿಚ ಯಿಸಿಕೊಂಡಿದ್ದ ಪ್ರಸನ್ನ, ಕರ್ಟಸಿ ಫೌಂಡೇಷನ್‌ ಹೆಸರಿನಲ್ಲಿ ರಸೀದಿ ಕೊಡುತ್ತಿದ್ದ. ಆದರೆ, ಆ ಹೆಸರಿನ ಯಾವುದೇ ಅಂಧ ಸಂಸ್ಥೆ ಇಲ್ಲ. ಆದರೆ, ಮಹಿಳೆಯಿಂದ ದೋಚಿದ್ದ ಹಣದ ಪೈಕಿ 9 ಲಕ್ಷವನ್ನು ಕಾಂತ ರಾಜ್‌, 5 ಲಕ್ಷವನ್ನು ಶಿವರಾಜ್‌ ಎಂಬುವರಿಗೆ ತಿಂಗಳ ಬಡ್ಡಿ ಲೆಕ್ಕದಲ್ಲಿ ಸಾಲವಾಗಿ ಕೊಟ್ಟಿದ್ದ. ಇನ್ನು ಚಿನ್ನಾಭರಣಗಳನ್ನು, ತನ್ನ ಸ್ನೇಹಿತ ನದ್ದು ಎಂದು ತಾಯಿಗೆ ಸುಳ್ಳು ಹೇಳಿ ಅವರಿಂದಲೇ ಗಿರವಿ ಇಡಿಸಿದ್ದ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next