Advertisement

ಶಿರೋಮಣಿ ರೋಹಿದಾಸರ ತತ್ವಗಳು ಅನುಕರಣೀಯ

06:14 PM Feb 17, 2022 | Team Udayavani |

ಸಂಬರಗಿ: ಜನ್ಮದಿಂದ ಯಾರೂ ಮಹಾನ್‌ ವ್ಯಕ್ತಿಗಳಾಗುವುದಿಲ್ಲ. ತಮ್ಮ ತಮ್ಮ ಕರ್ಮ, ಸತ್ಕಾರ್ಯಗಳಿಂದ ಮಹಾನ್‌ ವ್ಯಕ್ತಿಗಳಾಗಲು ಸಾಧ್ಯ. ಸತ್ಕಾರ್ಯಗಳಿಂದ ದೊಡ್ಡವರಾದವರು ಮತ್ತು ತಮ್ಮ ಮಹಾನ್‌ ಕಾರ್ಯಗಳಿಂದ ಇಂದಿಗೂ ಜನಾನುರಾಗಿ ಉಳಿದುಕೊಂಡವರು ಶ್ರೀ ಸಂತ ಶಿರೋಮಣಿ ರೋಹಿದಾಸರು ಎಂದು ಕಾಗವಾಡ ಬಿಜೆಪಿ ಮುಖಂಡರು ಹಾಗೂ ಅಥಣಿ ಶುಗರ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ ಹೇಳಿದರು.

Advertisement

ಮದಭಾವಿ ಗ್ರಾಮದಲ್ಲಿ ಹರಳಯ್ಯ ಸಮಾಜ ಆಯೋಜಿಸಿದ್ದ ಶ್ರೀ ಸಂತ ಶಿರೋಮಣಿ ರೋಹಿದಾಸ ಮಹಾರಾಜರ ಜಯಂತಿ ಹಾಗೂ ರೋಹಿದಾಸರ ಮೂರ್ತಿ ಪ್ರತಿಷ್ಠಾನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವರ್ಗ, ನರಕ ಬೇರೆ ಯಾವ ಲೋಕದಲ್ಲಿಯೂ ಇಲ್ಲ. ಇವೆರಡು ಕೂಡ ನಮ್ಮೊಳಗೆ ನಮ್ಮ ಮನಸ್ಸಿನಲ್ಲಿವೆ. ಮತ್ತೂಬ್ಬರಿಗೆ ಒಳ್ಳೆಯದನ್ನು ಬಯಸುವ ಮನಸ್ಸಿನಲ್ಲಿ ಸ್ವರ್ಗ ಇದ್ದರೆ ಕೆಡುಕ ಬಯಸುವ ಮನಸ್ಸಿನಲ್ಲಿ ನರಕ ಇದೆ ಎಂದರು.

ಮನಸ್ಸು ನಿರ್ಮಲವಾಗಿದ್ದರೆ ಚರ್ಮಕಾರರಾದ ನಾವು ಉಪಯೋಗಿಸುವ ನೀರಿನಲ್ಲಿಯೂ ಕೂಡ ಗಂಗೆಯ ಸ್ವರೂಪ ಇದೆ ಎಂದು ಶ್ರೀ ಸಂತ ಶಿರೋಮಣಿ ರೋಹಿದಾಸರು ಹೇಳಿದ್ದಾರೆ. ಸಂತ ಶಿರೋಮಣಿ ರೋಹಿದಾಸರ ಪುತ್ಥಳಿ ಅಥಣಿ ತಾಲೂಕಿನ ಸಣ್ಣ ಗ್ರಾಮ ಮದಭಾವಿಯಲ್ಲಿ ಸ್ಥಾಪಿಸಿ ಅವರ ಸಂದೇಶಗಳನ್ನು ಸಾರುತ್ತಿರುವ ಹರಳಯ್ಯ ಸಮಾಜ ಬಂಧುಗಳ ಕಾರ್ಯ ಅನುಕರಣೀಯ ಎಂದರು.

ಗಚ್ಚಿಮನ ಮಠದ ಶ್ರೀ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಹರಳಯ್ಯ ಸಮಾಜ ಬಾಂಧವರು ಇಂದು ಒಂದೇ ವೇದಿಕೆಯಡಿ ಸಮಾವೇಶಗೊಂಡು ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ಸಂತ ಶಿರೋಮಣಿ ರೋಹಿದಾಸರ ಪುತ್ಥಳಿ ಅನಾವರಣಗೊಳಿಸಿರುವುದು ಮಾದರಿ ಕಾರ್ಯ ಎಂದರು.

ಗ್ರಾಪಂ ಅಧ್ಯಕ್ಷೆ ಸರಿತಾ ಅಪ್ಪಾಸಾಹೇಬ ಚೌಗಲಾ, ಮುರಗ್ಯಾಪ್ಪಾ ಮಗದುಮ್‌, ಉಪಾಧ್ಯಕ್ಷ ಬಾಳಪ್ಪ ಮಗದುಮ್‌, ಸದಸ್ಯರಾದ ಸಂಜಯ ಅದಾಟೆ, ಕೃಷ್ಣಾ ಶಿಂಧೆ, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಮಹಾದೇವ ಕೋರೆ, ಆರ್‌.ಎಂ. ಪಾಟೀಲ, ಈಶ್ವರ ಕುಂಬಾರೆ, ವಿನಾಯಕ ಬಾಗಡಿ, ಬಾಪು ಅಭ್ಯಂಕರ, ನಾಯ್ಕೋಬಾ ಶಿಂಧೆ, ಭೈಯ್ನಾಜಿ ಬೋರಾಡೆ, ಕೇಶವ ಭಂಡಾರೆ, ರಾವಸಾಹೇಬ್‌ ಕಾರೆಣ್ಣವರ, ಜ್ಞಾನೇಶ್ವರ ಭಂಡಾರೆ, ಸತೀಶ ಭಂಡಾರೆ, ಶಿದರಾಯ ಭಂಡಾರೆ, ಸುಖದೇವ ಭಂಡಾರೆ, ರಮೇಶ ಸಿಂದಗಿ, ದಿಲೀಪ ಕಾಂಬಳೆ, ಅನಿಲ ಮೋರೆ ಸೇರಿದಂತೆ ಹರಳಯ್ಯ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next