Advertisement

ಮಹಾವೀರರ ತತ್ವ ಅಳವಡಿಸಿಕೊಳ್ಳಿ

03:34 PM Apr 10, 2017 | Team Udayavani |

ಜೇವರ್ಗಿ: ಪ್ರತಿಯೊಬ್ಬರು ಭಗವಾನ ಮಹಾವೀರರ ಅಹಿಂಸಾ ತತ್ವಗಳನ್ನು ಬದುಕಿನಲ್ಲಿ ಆಳವಡಿಸಿಕೊಂಡು ಸತ್ಯವನ್ನು ನುಡಿಯುತ್ತ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಜೆಡಿಎಸ್‌ ಮುಖಂಡ ಚನ್ನಮಲ್ಲಯ್ಯ ಹಿರೇಮಠ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ರವಿವಾರ ಆಯೋಜಿಸಲಾಗಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

Advertisement

ಜೀವನದ ವೈರಾಗ್ಯ, ಜೀವನದ ಸಂದೇಶಗಳನ್ನು ತಿಳಿಸಿದ ಮಹಾವೀರರ ತತ್ವಗಳು ಸರ್ವಕಾಲಿಕವಾಗಿವೆ. ಕ್ರಿ.ಪೂ. 6ನೇ ಶತಮಾನದಲ್ಲಿ ಜನಿಸಿದ ಮಹಾವೀರ ಜೀವನದಲ್ಲಿ ಎಲ್ಲ ಐಶ್ವರ್ಯ ಪಡೆದುಕೊಂಡಿದ್ದ. ಹೆಂಡತಿ, ಮಕ್ಕಳು ಇದ್ದರೂ ಜೀವನದ ಜಂಜಾಟ ತೊರೆದು ಜಗತ್ತಿಗೆ ಉತ್ತಮ ಸಂದೇಶ ನೀಡಿದರು.

ಅಲ್ಲದೆ ಜೇವರ್ಗಿ ಪಟ್ಟಣ, ತಾಲೂಕಿನ ಇಜೇರಿ, ಹಂಗರಗಾ ಸೇರಿದಂತೆ ಅನೇಕ ಕಡೆ ಜೈನ ಧರ್ಮದ ಕುರುಹುಗಳಿವೆ. ಸಮಾಜದವರು ಮತ್ತು ಸರಕಾರಗಳು ಅಂತಹ ಸ್ಮಾರಕಗಳನ್ನು ರಕ್ಷಿಸುವ ಕೆಲಸ ಮಾಡಬೇಕು. 24ನೇ ತೀರ್ಥಂಕರನಾದ ಮಹಾವೀರ ಜಗತ್ತಿಗೆ ಅಹಿಂಸಾ ತತ್ವ ನೀಡಿ ಶಾಂತಿ ಸಂದೇಶ ನೀಡಿದ್ದಾರೆ. 

ಅವರ ತತ್ವಗಳು ನಮಗೆ ದಾರಿ ದೀಪವಾಗಬೇಕು ಎಂದು ಹೇಳಿದರು. ತಹಶೀಲ್ದಾರ ಯಲ್ಲಪ್ಪ ಸುಬೇದಾರ, ಶಿರಸ್ತೇದಾರ ಗುರುರಾಜ ಸಂಗಾವಿ, ಆಹಾರ ನಿರೀಕ್ಷಕ ಡಿ.ಬಿ. ಪಾಟೀಲ, ಸಾಯಬಣ್ಣ, ಜೈನ್‌ ಸಮಾಜದ ತಾಲೂಕು ಅಧ್ಯಕ್ಷ ಅಂಬಣ್ಣ ಜೈನ, 

ಅಶೋಕ ಪಾಟೀಲ ಕಲ್ಲಹಂಗರಗಾ, ದೇವಿಂದ್ರ ಜೈನ್‌, ಪ್ರದೀಪ ಪಂಡಿತ, ಧನರಾಜ ಸಾಹು ಇಜೇರಿ, ನಾರಾಯಣ ಇಜೇರಿ, ಬ್ರಹ್ಮಶುರ ಪಂಡಿತ, ಭರಮಣ್ಣ ಇಜೇರಿ, ಶಾಂತಿನಾಥ ಪಾಟೀಲ ಕಲ್ಲಹಂಗರಗಾ, ರಾಮಪ್ಪ, ಶಾಂತಪ್ಪ ಪಾಟೀಲ, ಉಸ್ಮಾನ ಸಿಪಾಯಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next