Advertisement
ಸನಾತನ ಸಂಸ್ಕೃತಿಯನ್ನು ಮರೆತರೆ ಜೀವನವು ಸರಿಯಾದ ಪಥದಲ್ಲಿ ಸಾಗಲು ಸಾಧ್ಯವಿಲ್ಲ. ಆದ್ದರಿಂದ ಜೀವನ ಧರ್ಮ ಎಂಬ ತತ್ವವನ್ನು ನಾವೆಲ್ಲರೂ ಬದುಕಲ್ಲಿ ಅಳವಡಿಸಿಕೊಳ್ಳಬೇಕು. ಮನುಷ್ಯ ಸಂಘ ಜೀವಿ. ಪರೋಪಕಾರ ಧರ್ಮದೊಂದಿಗೆ ಸಮೂಹವಾಗಿ ಭಾಗಿಗಳಾಗಿ ಸೇರಿದಾಗ ಸಂಘಟನೆ ರೂಪುಗೊಳ್ಳುತ್ತದೆ. ಯುವ ಜನತೆಯ ಕಾರ್ಯ ಯೋಜನೆಗಳೊಂದಿಗೆ ಹೊಂದಾಣಿಕೆಯ ಬದುಕು ನಮ್ಮದಾ ಗಬೇಕು. ಅನುಭವ ಎಂಬುದು ಗಮ್ಯವಾಗಿ ಬರುತ್ತದೆ. ಈ ಅನುಭವವನ್ನು ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ನಮ್ಮ ನಿತ್ಯದ ದಿನಚರಿಯಲ್ಲಿ ಮನಸ್ಸು ಮುಖ್ಯವಾದುದು.
Related Articles
Advertisement
ಪಾದಪೂಜೆಯ ಅನಂತರ ಭಜನೆ ಕಾರ್ಯಕ್ರಮವು ಶ್ರೀಗಳು ಹಾಗೂ ಸಾಧ್ವಿ ಮಾತಾನಂದಮಯಿ ಅವರ ಜೊತೆಯಲ್ಲಿ ನಡೆಯಿತು. ನಂತರ ಶ್ರೀಗಳು ಮಂತ್ರಾಕ್ಷತೆ ನೀಡಿ ಹರಸಿದರು. ಪ್ರಸಾದ ವಿತರಣೆಯ ನಂತರ ಅನ್ನ
ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಪುಣೆ ಶ್ರೀ ಗುರುದೇವ ಸೇವಾ ಬಳಗದ ನಿಕಟಪೂರ್ವ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಮತ್ತು ಇಂದಿರಾ ಶೆಟ್ಟಿ ದಂಪತಿ, ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಜಯ ಶೆಟ್ಟಿ ಮಿಯ್ನಾರು, ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮೀ ಪಿ. ಶೆಟ್ಟಿ, ಪುಣೆ ಬಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷರಾದ ಆನಂದ್ ಶೆಟ್ಟಿ ಮಿಯ್ನಾರು, ಬಳಗದ ಉಪಾಧ್ಯಕ್ಷರಾದ ಪ್ರಭಾಕರ ಶೆಟ್ಟಿ, ರಂಜಿತ್ ಶೆಟ್ಟಿ, ಗೌರವ ಕಾರ್ಯದರ್ಶಿ ರೋಹಿತ್ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಉಪಾಧ್ಯಕ್ಷೆ ಸುಮನಾ ಎಸ್. ಹೆಗ್ಡೆ, ಕಾರ್ಯದರ್ಶಿ ವೀಣಾ ಪಿ. ಶೆಟ್ಟಿ, ಬಂಟ್ಸ್ ಅಸೋಸಿಯೇಶನ್‌ನ ಕಾರ್ಯದರ್ಶಿ ಅರವಿಂದ್ ರೈ, ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದ ಅಧ್ಯಕ್ಷೆ ದೀಪಾ ಎ. ರೈ, ಕಾರ್ಯದರ್ಶಿ ಉಷಾ ಯು. ಶೆಟ್ಟಿ ಹಾಗೂ ಪುಣೆ ಶ್ರೀ ಗುರುದೇವ ಸೇವಾ ಬಳಗ ಮತ್ತು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯರು ಬಂಟ್ಸ್ ಅಸೋಸಿಯೇಶನ್‌ನ ಪದಾಧಿಕಾರಿಗಳು ಅಪಾರ, ಸಂಖ್ಯೆಯ ಭಕ್ತರು, ಭಕ್ತಾಭಿಮಾನಿ ಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಬಳಗದ ಕಾರ್ಯ ದರ್ಶಿ ಎನ್. ರೋಹಿತ್ ಡಿ. ಶೆಟ್ಟಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ-ವರದಿ : ಹರೀಶ್ ಮೂಡಬಿದ್ರೆ ಪುಣೆ