Advertisement

ಕನಕದಾಸರ ತತ್ವ ಬದುಕಿಗೆ ದಾರಿದೀಪ

08:36 PM Dec 28, 2021 | Team Udayavani |

ಕಲಬುರಗಿ: ಸಮಾಜದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಸಮಾನತೆಯ ತತ್ವವನ್ನು ಸಾರಿದ ದಾಸಶ್ರೇಷ್ಠ ಭಕ್ತ ಕನಕದಾಸರ ತತ್ವ ಬದುಕಿನಲ್ಲಿ ಅಳವಡಿಕೆ ಮೂಲಕ ಜೀವನದ ಮೌಲ್ಯ ಹೆಚ್ಚಿಸಿಕೊಳ್ಳುವಂತೆ ಶಾಸಕ ಬಸವರಾಜ ಮತ್ತಿಮಡು ಹೇಳಿದರು. ನಗರದ ಹೊರ ವಲಯ ಕುಸನೂರ ಗ್ರಾಮದಲ್ಲಿರುವ ಮಾಳಿಂಗೇಶ್ವರ ಪಾದಕಟ್ಟೆಯಲ್ಲಿ 534ನೇ ಕನಕದಾಸ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸಮಾಜದ ಹಲವಾರು ದೋಷ ಲೋಪಗಳನ್ನು ನಿವಾರಣೆ ಮಾಡಿ ಮಾನವೀಯತೆಗೆ ಮಹಾ ಬೆಳಕು ತೋರಿದವರಾಗಿದ್ದಲ್ಲದೇ ಕನಕದಾಸರು ಮತ್ತು ತ್ರಿಪದಿಗಳ ಸಾಹಿತ್ಯ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ನಾವೆಲ್ಲರೂ ಸಂಕಲ್ಪ ಮಾಡಿಕೊಂಡಾಗ ಮಾತ್ರ ಅವರಿಗೆ ನಾವು ಕೊಡುವ ನಿಜವಾದ ಗೌರವವಾಗಿರುತ್ತದೆ ಎಂದು ಹೇಳಿದರು.

ಕುಸನೂರ ಗವಿಸಿದ್ದೇಶ್ವರ ದೇವಸ್ಥಾನ ಅರ್ಚಕರಾದ ಶಾಂತವೀರಯ್ಯ ಮಠಪತಿ, ಮಾಳಿಂಗರಾಯ ದೇವಸ್ಥಾನದ ಅರ್ಚಕರಾದ ವೀರಪ್ಪ ಪೂಜಾರಿ-ಮಾಳಪ್ಪ ಪೂಜಾರಿ, ಕಾಂಗ್ರೆಸ್‌ ಮುಖಂಡ ವಿಜಯಕುಮಾರ ಜಿ.ಆರ್‌. ಕನಕದಾಸ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶರಣು ಎಂ. ಪೂಜಾರಿ, ಪರಮೇಶ್ವರ ಅಲಗೂಡ, ನಿರ್ಮಲಾ ಎಸ್‌, ಬರಗಾಲಿ, ಹಣಮಂತ ಎಂ. ಬರಗಾಲಿ, ಡಾ| ಓ.ವಿ. ಆಟವೇಶ, ಪಿ.ಎಸ್‌. ಕೋಕಟನೂರ, ಬಸವರಾಜ ಉದನೂರ, ನಿಂಗಣ್ಣ ಪೂಜಾರಿ ಮತ್ತಿಮಡು, ಸಂಗಮ್ಮ ಪಾಟೀಲ, ಪರಮೇಶ್ವರ ಭಟ್ಟರಕಿ, ಅನುರಾಧಾ ವಳಕೇರಿ, ರಮೇಶ ತೆಗ್ಗಿನಮನಿ, ರೇವಣಸಿದ್ದಪ್ಪ ಚೇಂಗಟಿ, ದೇವಿಕಾ ಮಠಪಿತ ನಾಗಿಣಿ ದೊಡ್ಡಮನಿ, ಕುಪೇಂದ ಬರಗಾಲಿ, ರೂಪಾ ಸಾವಳಗಿ, ಮಲ್ಲಿಕಾರ್ಜುನ ಸಂಗಾಣಿ, ಸಂಜುಕುಮಾರ ಬರಗಾಲಿ, ಶರಣಪ್ಪ ತಳವಾರ, ರಾಜು ದೊಡ್ಡಮನಿ ಇದ್ದರು

 

Advertisement

Udayavani is now on Telegram. Click here to join our channel and stay updated with the latest news.

Next