Advertisement

ಜನಪರ ಯೋಜನೆ ಜಾರಿಗೆ ತಂದ ಪ್ರಧಾನಿ

05:32 PM Jun 15, 2020 | Suhan S |

ಕುಂದಗೋಳ: ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮುಟ್ಟಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಎಂ.ಆರ್‌. ಪಾಟೀಲ ಹೇಳಿದರು.

Advertisement

ಪಟ್ಟಣದಲ್ಲಿ ರವಿವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದ ಇಡೀ ವಿಶ್ವವೇ ತತ್ತರಿಸಿರುವಾಗ ಪ್ರಧಾನಿಗಳು ಜನರಿಗೆ ಆರ್ಥಿಕ ನೆರವು ಸಮರ್ಪಕವಾಗಿ ನೀಡುವುದರ ಮೂಲಕ ಸಹಕಾರಿಯಾಗಿದ್ದಾರೆ.30ಕ್ಕೂ ಹೆಚ್ಚು ದೇಶಗಳಲ್ಲಿನ ಭಾರತೀಯ ನಿವಾಸಿಗಳನ್ನು ವಂದೇ ಮಾತರಂ ಹಾಗೂ ಸಮುದ್ರ ಸೇತು ಯೋಜನೆ ಮೂಲಕ ತಾಯ್ನಾಡಿಗೆ ಕರೆ ತಂದಿದ್ದಾರೆ.

ಕೋವಿಡ್ ಸಿಬ್ಬಂದಿಗೆ ಆರೋಗ್ಯ ಭದ್ರತೆಗೆ ಆದ್ಯತೆ ನೀಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಧಾನ ಮಂತ್ರಿಯವರು ರಾಮಮಂದಿರ ನಿರ್ಮಾಣ, ತ್ರಿವಳಿ ತಲಾಕ್‌ ಹೀಗೆ ಜನಪರ ನಿರ್ಣಯಗಳನ್ನು ಸಮರ್ಥವಾಗಿ ಮಂಡಿಸಿ ಐತಿಹಾಸಿಕ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಈ ಭಾಗದ ಸಂಸದ ಹಾಗೂ ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿಯವರು ಕೋವಿಡ್  ನಿಯಂತ್ರಣ, ಹೊರರಾಜ್ಯದಲ್ಲಿರುವ ನಮ್ಮ ಕ್ಷೇತ್ರದ ಜನರನ್ನು ಕರೆ ತರಲು ಹಾಗೂ ಕೋವಿಡ್  ವಾರಿಯರ್ಸ್‌ ಅವರಿಗೆ ಆತ್ಮ ಬಲ ತುಂಬಲು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆಂದರು.ದರು.

ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಪ್ರಧಾನ ಕಾರ್ಯದರ್ಶಿ ಮಾಲತೇಶ ಶ್ಯಾಗೋಟಿ, ತಾಲೂಕು ಅಧ್ಯಕ್ಷ ರವಿ ಪಾಟೀಲ, ಮುಖಂಡರಾದ ಪೃಥ್ವಿರಾಜ ಕಾಳೆ, ಟಿ.ಜಿ. ಬಾಲಣ್ಣವರ, ಪಂಕಜಾ ಕೋರಿ,ಭರಮಗೌಡ ದ್ಯಾವನಗೌಡ್ರ, ಡಿ.ವೈ.ಲಕ್ಕನಗೌಡ್ರ,ಸಿ. ಎಂ. ಕಾಳೆ, ಪ್ರಕಾಶ ಕುಬಿಹಾಳ, ವಾಗೇಶ ಮಣಕಟ್ಟಿಮಠ, ಬಿಟಿ ಗಂಗಾಯಿ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next