ಬೀದರ: ಜಿಲ್ಲೆಯಲ್ಲಿ ಮಳೆಯಾರ್ಭಟದ ಜತೆಗೆ ತೈಲದರ ಹೆಚ್ಚಳದ ಬಿಸಿ ತರಕಾರಿ ಮಾರುಕಟ್ಟೆಗೂ ತಟ್ಟಿದೆ.ಬಹುತೇಕ ತರಕಾರಿ ಬೆಲೆ ಶತಕ ದಾಟಿದ್ದು, ಗ್ರಾಹಕರಜೇಬಿಗೆ ಕತ್ತರಿ ಬೀಳುತ್ತಿದೆ. ಹೀಗಾಗಿ ಬಡ, ಮಧ್ಯಮವರ್ಗದ ಕುಟುಂಬಗಳಿಗೆ ಊಟಕ್ಕೆ ತೀಳಿ ಸಾರೇ ಗತಿ ಎಂಬಂತಾಗಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಆರ್ಥಿಕಸಂಕಷ್ಟ ಎದುರಿಸುತ್ತಿರುವ ಜನ ಸಾಮಾನ್ಯರಿಗೆಈಗ ದುಬಾರಿ ತರಕಾರಿ ಈಗ ಗಾಯದ ಮೇಲೆಬರೆ ಬಿದ್ದಂತಾಗಿದೆ. ಕಳೆದೊಂದು ವಾರದಲ್ಲಿ ಪ್ರತಿತರಕಾರಿಯಲ್ಲಿ 20 ರಿಂದ 50 ರೂ. ಬೆಲೆ (ಚಿಲ್ಲರೆಮಾರುಕಟ್ಟೆ) ಹೆಚ್ಚಳವಾಗಿದೆ.
ಬೆಲೆ ಏರಿಕೆಯಿಂದತರಕಾರಿ ಬೆಳೆದ ರೈತರಿಗೂ ಲಾಭ ಕೈಸೇರುತ್ತಿಲ್ಲ, ಇತ್ತಗ್ರಾಹಕರಿಗೂ ಕಂಗಾಲಾಗಿಸಿದೆ.ಅಕ್ಟೋಬರ್ ಪ್ರಾರಂಭದಲ್ಲಿ ಸರಾಸರಿಗಿಂತ ಅತ್ಯ ಕಮಳೆ ಸುರಿದು ಮುಂಗಾರು ಬೆಳೆ ಹಾನಿಯಾಗಿದ್ದರೆಈಗ ಕಳೆದ ನಾಲ್ಕೈದು ದಿನಗಳಲ್ಲಿ ಬಿದ್ದ ಮಳೆಗೆತರಕಾರಿ ನೀರು ಪಾಲಾಗಿಸಿದೆ.
ಜಿಲ್ಲೆಯ ವಿವಿಧೆಡೆಬೆಳೆದಿದ್ದ ತರಕಾರಿ ನೀರಿನಲ್ಲೇ ಕೊಳೆತು ಹೋಗಿದ್ದು,ಉತ್ತಮವಾಗಿರುವ ಕೆಲವೆಡೆ ಕಟಾವು ಮಾಡಲುಸಾಧ್ಯವಾಗುತ್ತಿಲ್ಲ. ಹಾಗಾಗಿ ಸಧ್ಯ ಗಡಿ ಜಿಲ್ಲೆಗೆಮಹಾರಾಷ್ಟ್ರದ ಸೊಲ್ಲಾಪುರ, ತೆಲಂಗಾಣದಹೈದ್ರಾಬಾದ ಮತ್ತು ಬೆಳಗಾವಿಯಿಂದ ತರಕಾರಿಬರುತ್ತಿದ್ದು, ಪೆಟ್ರೋಲ್-ಡೀಸೆಲ್ ಹೆಚ್ಚಳ ಜತೆಗೆಸರಕು ಸಾಗಣೆ ವಾಹನಗಳ ಬಾಡಿಗೆ ಪರಿಷ್ಕರಣೆಯಿಂದತರಕಾರಿ ದರ ಗಗನಕ್ಕೇರಿದೆ.
ಅಡುಗೆ ರುಚಿ ಹೆಚ್ಚಿಸುವ ಟೊಮ್ಯಾಟೊ ಪ್ರತಿಮನೆಯಲ್ಲಿ ದಿನ ನಿತ್ಯದ ಊಟಕ್ಕೆ ಬೇಕೆ ಬೇಕು.ಆದರೆ, ಮಾರುಕಟ್ಟೆಯಲ್ಲಿ ಟೊಮ್ಯಾಟೊ ದರಕೇಳಿದರೆ ಹೌಹಾರಿಸುತ್ತಿದೆ. ಕೋಲಾರ ಜಿಲ್ಲೆಯಿಂದಆವಕ ಆಗುತ್ತಿರುವ ಟೊಮ್ಯಾಟೊಗೆ ವಾರದಹಿಂದೆ ಕೇವಲ 20 ರೂ. ಇತ್ತು. ಈಗ 50 ರೂ.ಗೆ ಹೆಚ್ಚಳವಾಗಿದೆ. ಇನ್ನೂ ಕೊತ್ತಂಬರಿ ಕೆ.ಜಿಗೆ 100ರೂ.ಯಿಂದ 200 ರೂ.ಗೆ ಜಿಗಿದಿದ್ದು, ತೂಕ ಮಾಡಿಮಾರಾಟ ಮಾಡಲಾಗುತ್ತಿರುವುದು ವಿಶೇಷ.ನಗರದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಮಾತ್ರ40 ರಿಂದ 30 ರೂ. ಇಳಿಕೆಯಾಗಿದ್ದು, ಉಳಿದೆಲ್ಲವೂಹೆಚ್ಚಳ ಆಗಿದೆ.
80 ರೂ. ಇದ್ದ ಮೆಂತೆ ಸೊಪ್ಪು 120ರೂ., 60 ರೂ. ಇದ್ದ ಬಿನಿಸ್ 100 ರೂ., 80 ರೂ.ಇದ್ದ ನುಗ್ಗೆಗಾಯಿ 160 ರೂ. 80 ರೂ. ಇದ್ದ ಬೆಳ್ಳುಳ್ಳಿ100 ರೂ. ಹಾಗೂ 40 ರೂ. ಇದ್ದ ಪಾಲಕ್ 80 ರೂ.ಗಳಿಗೆ ಹೆಚ್ಚಳವಾಗಿದೆ.
ಆಲೂಗಡ್ಡೆ, ಹಿರೇಕಾಯಿ,ಕರಿಬೇವು ಮಾತ್ರ ಸ್ಥಿರವಾಗಿದೆ.ಸದ್ಯ ಇಲ್ಲಿ ಮಳೆ ನಿಂತಿದ್ದರೂ ತೋಟಗಾರಿಕೆಜಮೀನುಗಳಲ್ಲಿ ಮಾತ್ರ ಇನ್ನೂ ತೇವಾಂಶಕಡಿಮೆಯಾಗಿಲ್ಲ. ಮಾರುಕಟ್ಟೆಗೆ ಜಿಲ್ಲೆಯಿಂದಲೇತರಕಾರಿ ಬರಲು ಇನ್ನೊಂದು ವಾರ ಬೇಕು,ಅಲ್ಲಿಯವರೆಗೆ ಬೆಲೆ ಕಡಿಮೆಯಾಗವ ಸಾಧ್ಯತೆ ಇಲ್ಲಎನ್ನುತ್ತಾರೆ ತರಕಾರಿ ಅಂಗಡಿ ಮಾಲೀಕರು.
ಶಶಿಕಾಂತ ಬಂಬುಳಗೆ