ಮುಂಬಯಿ : ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅನುಕ್ರಮವಾಗಿ ಲೀಟರ್‌ಗೆ 5 ಮತ್ತು ಲೀಟರ್‌ಗೆ 3 ರೂಪಾಯಿ ಇಳಿಕೆ ಮಾಡುವುದಾಗಿ ಸಿಎಂ ಏಕನಾಥ್ ಶಿಂಧೆ ಗುರುವಾರ ಘೋಷಿಸಿದ್ದಾರೆ.
ಹೊಸ ಸರ್ಕಾರದ ಎರಡನೇ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ 6,000 ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದು ಮಂತ್ರಾಲಯದಲ್ಲಿ ನಡೆದ ಸಂಪುಟ ಸಭೆಯ ನಂತರ ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.
ಬೆಲೆ ಇಳಿಕೆಯ ನಂತರ, ಮುಂಬೈನಲ್ಲಿ ಈಗ ಪ್ರತಿ ಲೀಟರ್‌ಗೆ 111.35 ರೂ. ಇರುವ ಪೆಟ್ರೋಲ್ ಬೆಲೆ ಲೀಟರ್‌ಗೆ 106.35 ರೂ.ಗೆ ಇಳಿಯಲಿದೆ, ಅದೇ ರೀತಿ ಡೀಸೆಲ್ ಬೆಲೆ ಈಗಿರುವ ಲೀಟರ್‌ಗೆ 97.28 ರೂ.ನಿಂದ 94.28 ರೂ.ಗೆ ಇಳಿಕೆಯಾಗಲಿದೆ.
ಪಿಂಚಣಿ ಯೋಜನೆ
1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲಿಗೆ ಹೋಗಿ ಬಂದವರಿಗೆಲ್ಲ ಮಹಾರಾಷ್ಟ್ರ ಸರ್ಕಾರ ಪಿಂಚಣಿ ನೀಡಲಿದೆ. ಈ ನಿರ್ಧಾರವನ್ನು 2018 ರಲ್ಲಿ ತೆಗೆದುಕೊಳ್ಳಲಾಗಿತ್ತು, ಆದರೆ ಹಿಂದಿನ ಸರ್ಕಾರ ಅದನ್ನು ಮುಚ್ಚಿ ಹಾಕಿತು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ರಾಜ್ಯದಲ್ಲಿ ಮುಂಬೈ-ಅಹಮದಾಬಾದ್ ಬುಲೆಟ್ ರೈಲಿಗೆ ಎಲ್ಲಾ ಅನುಮತಿ ನೀಡಲಾಗಿದೆ ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.