Advertisement

Gold Rate; ದಿಲ್ಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 1,100 ರೂ. ಇಳಿಕೆ

09:19 PM Aug 06, 2024 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಮಂಗಳವಾರ 10 ಗ್ರಾಂ ಚಿನ್ನದ ಬೆಲೆ 1,100 ರೂ.ಗಳಷ್ಟು ಇಳಿಕೆಯಾಗುವ ಮೂಲಕ 71,700 ರೂ.ಗಳಿಗೆ ಇಳಿದಿದೆ.

Advertisement

ಬೆಳ್ಳಿ ಬೆಲೆ ಕೂಡ ಸತತ 4ನೇ ದಿನವೂ ಇಳಿಕೆಯಾಗಿದ್ದು, ಸೋಮವಾರ 84,200 ರೂ.ಗಳಿದ್ದ ಒಂದು ಕೆಜಿ ಬೆಳ್ಳಿಯ ದರ ಮಂಗಳವಾರ 2.200 ರೂ.ಗಳ ಕಡಿತದೊಂದಿಗೆ 82,000 ರೂ.ಗಳಿಗೆ ಇಳಿಕೆಯಾಗಿದೆ. ಇದರೊಂದಿಗೆ ಆ. 2ರಿಂದ ಬೆಳ್ಳಿಯ ಬೆಲೆ ಕೆಜಿಗೆ ಒಟ್ಟು 4,200 ರೂ.ಗಳಷ್ಟು ಇಳಿಕೆಯಾದಂತಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಮಂಗಳವಾರ 800 ರೂ.ಗಳ ಇಳಿಕೆಯೊಂದಿಗೆ 64,700 ರೂ.ಗಳಿಂದ 63,900 ರೂ.ಗಳಿಗೆ ಕಡಿಮೆಯಾಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಮೌಲ್ಯವೂ 870 ರೂ. ಇಳಿಕೆಯೊಂದಿಗೆ 69,710 ರೂ.ಗಳಿಗೆ ತಲುಪಿದೆ. 1 ಕೆಜಿ ಬೆಳ್ಳಿ ಬೆಲೆ 1,500 ರೂ.ಗಳ ಇಳಿಕೆಯೊಂದಿಗೆ 83,500 ರೂ.ಗಳಿಗೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next