Advertisement
ನ್ಯಾಶನಲ್ ಫೌಂಡೇಶನ್ ಆಫ್ ಇಂಡಿಯಾ ಹಾಗೂ ಭಾರತ ಸರಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಮಂತ್ರಾಲಯ ಹೊಸದಿಲ್ಲಿಯಲ್ಲಿ ಜಂಟಿಯಾಗಿ ಆಯೋಜಿಸಿದ್ದ ಫೆಸ್ಟಿವಲ್ ಆಫ್ ಇನ್ನೋವೇಶನ್ ಕಾರ್ಯಕ್ರಮದಲ್ಲಿ ರಾಕೇಶ್ ಕೃಷ್ಣ ತನ್ನ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿ ರಾಷ್ಟ್ರಪತಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತನ್ನ ಸಹೋದರಿ ರಶ್ಮಿಪಾರ್ವತಿ ಮಾರ್ಗದರ್ಶನದಲ್ಲಿ ಸೀಡೋಗ್ರಾಫರ್: ಎ ನಾವೆಲ್ ಸೀಡರ್ ಫಾರ್ ಸಿಸ್ಟಮ್ಯಾಟಿಕ್ ಕಲ್ಟಿವೇಶನ್ ಎಂಬ ವಿಜ್ಞಾನ ಮಾದರಿಯನ್ನು ರಾಕೇಶ್ ಕೃಷ್ಣ ರೂಪುಗೊಳಿಸಿದ್ದರು. ಈ ಸಂಶೋಧಿತ ಯಂತ್ರ ಬೀಜ ಬಿತ್ತನೆಗೆ ಬಳಸುವಂಥದ್ದು, ಎಲ್ಲ ತರದ ಪ್ರದೇಶಗಳಲ್ಲೂ ಇದನ್ನು ಬಳಸಬಹುದಾಗಿದೆ. ಯಂತ್ರದಲ್ಲಿ ಬೀಜದ ಗಾತ್ರಕ್ಕೆ ತಕ್ಕಂತೆ ತೂತುಗಳನ್ನು ಬದಲಾಯಿಸಲು ಅವಕಾಶವಿದೆ. ಹಲವು ಪ್ರಯೋಗಗಳಲ್ಲಿ ವೈಜ್ಞಾನಿಕವಾಗಿ ಈ ಯಂತ್ರ ಕಾರ್ಯಸಾಧು ವೆನಿಸಿದೆ. ಇವರು ವಿವೇಕಾನಂದ ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥೆ ಡಾ| ದುರ್ಗಾರತ್ನ ಹಾಗೂ ರವಿಶಂಕರ ನೆಕ್ಕಿಲ ದಂಪತಿ ಪುತ್ರ.