Advertisement

ಸಮಾಜಕ್ಕಾಗಿ ದುಡಿಯುವವರಿಗೆ ಭಗವಂತನ ಸಾನ್ನಿಧ್ಯ

12:32 AM Jan 18, 2022 | Team Udayavani |

ಉಡುಪಿ: ಸ್ವಂತ ಇಚ್ಛೆ ಇಲ್ಲದೆ ಸಮಾಜಕ್ಕಾಗಿ ಕೆಲಸ ಮಾಡುವವರು, ದ್ವೇಷ ಸಾಧನೆ ಬಿಟ್ಟು ಸಮಸ್ಥಿತಿಯ ಚಿಂತನೆ ಹೊಂದಿರುವವರು ಭಗವಂತನ ಸಾನ್ನಿಧ್ಯ ಸೇರುತ್ತಾರೆ ಎಂದು ಪರ್ಯಾಯ ನಿರ್ಗಮಿತ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.

Advertisement

ನಗರ ಸಭೆ ಹಾಗೂ ಶ್ರೀ ಕೃಷ್ಣಾಪುರ ಪರ್ಯಾಯೋತ್ಸವ ಸಮಿತಿಯಿಂದ ರಾಜಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಗರಿಕ ಸಮ್ಮಾನ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

ಉಪಕಾರ ಮಾಡಲು ಸಾಧ್ಯವಾಗದೇ ಇದ್ದರೂ ತೊಂದರೆ ಮಾಡಬಾರದು. ಈ ರೀತಿಯ ಚಿಂತನೆಯಲ್ಲಿ ಬದುಕುವ ಪ್ರಯತ್ನ ಎಲ್ಲರೂ ಮಾಡಬೇಕು. ಶ್ರೀ ವಿಶ್ವಪ್ರಿಯತೀರ್ಥರು ತಾವು ಮಾಡಬೇಕಾದ ಪರ್ಯಾಯ ಪೂಜಾ ಕೈಂಕರ್ಯವನ್ನು ಶಿಷ್ಯನಿಗೆ ನೀಡಿದರು. ನಾವು ಚಾಲಕನ ಸೀಟಿನಲ್ಲಿ ಕುಳಿ ತಿದ್ದು ಮಾತ್ರ. ಉಳಿದೆಲ್ಲ ಸಾಧನೆಗೆ ಶ್ರೀ ವಿಶ್ವಪ್ರಿಯತೀರ್ಥರ ಭಕ್ತ ವೃಂದ, ಶ್ರೀಮಠದ ಸಿಬಂದಿ ವರ್ಗ ಕಾರಣ. ಹಿರಿಯರ ಮಾತು ಫ‌ಲಕಾರಿ ಯಾಗಲಿದೆ ಎನ್ನುವುದಕ್ಕೆ ನಾನೇ ಸಾಕ್ಷಿ. ಪೂರ್ವಾಶ್ರಮದಲ್ಲಿದ್ದಾಗ ಕೃಷ್ಣಮಠಕ್ಕೆ ಬಂದಿದ್ದ ಸಂದರ್ಭದಲ್ಲಿ ಶ್ರೀಗಳು ದೇವರಲ್ಲಿ ಪ್ರಾರ್ಥನೆ ಮಾಡು, ದೇವರು ಅನುಗ್ರಹ ಮಾಡುತ್ತಾನೆ ಎಂದಿದ್ದರು. ಅದು ಸಾಕಾರವಾಗಿದೆ ಎಂದರು.

ಅಷ್ಟಮಠಾಧೀಶರ ಸಹಕಾರದ ಜತೆಗೆ ಶ್ರೀ ವಿಶ್ವಪ್ರಿಯತೀರ್ಥರ ದೊಡ್ಡ ಮಟ್ಟದ ಸಹಕಾರದೊಂದಿಗೆ ದೇವರ ಪೂಜೆ ಚೆನ್ನಾಗಿ ಆಗಿದೆ. ಆನೆಗಳ ಗುಂಪಿನಲ್ಲಿ ಮರಿಯಾನೆ ಇದ್ದಾಗ ಎಲ್ಲ ಆನೆಗಳು ಮರಿಯಾನೆಯನ್ನು ಹೇಗೆ ರಕ್ಷಣೆ ಮಾಡುತ್ತವೋ ಆ ರೀತಿಯಲ್ಲಿ ಅಷ್ಟಮಠದ ಯತಿಗಳು ನಮ್ಮನ್ನು ರಕ್ಷಣೆ ಮಾಡಿದ್ದಾರೆ. ಪರ್ಯಾಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಅಭಿವಂದನೆಗಳು ಎಂದು ತಿಳಿಸಿದರು.

ಭಾವೀ ಪರ್ಯಾಯ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಲೋಕಕ್ಕೆ ಕೊರೊನಾ ಬಾಧೆ ಬಂದಿದ್ದರೂ ಪ್ರಥಮ ಬಾರಿಗೆ ಪರ್ಯಾಯದ ಹೊಣೆಗಾರಿಕೆ ವಹಿಸಿಕೊಂಡ ಅದಮಾರು ಶ್ರೀಗಳು ಇದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಎಲ್ಲವನ್ನು ಸಕಾರಾತ್ಮಕ ವಾಗಿ ಸ್ವೀಕರಿಸಿ ತಮ್ಮ ಕಾರ್ಯವನ್ನು ಮುನ್ನಡೆಸಿದ್ದಾರೆ. ಶ್ರೀಕೃಷ್ಣ ಪೂಜೆಗೆ ಸ್ವಲ್ಪವೂ ಚ್ಯುತಿ ಬರದಂತೆ ನೋಡಿ ಕೊಂಡಿದ್ದಾರೆ ಮತ್ತು ಮಾಡಿ ತೋರಿಸಿ ದ್ದಾರೆ. ಗುರುಗಳು, ವಿದ್ಯಾಗುರುಗಳು, ನಾಗರಿಕರು, ಸಮಿತಿಯ ಸಹಕಾರ ದಿಂದ ಸಂಪ್ರದಾಯಕ್ಕೆ ಚ್ಯುತಿಯಾಗ ದಂತೆ ಕೊರೊನಾ ಉಪಟಳದ ನಡುವೆಯೂ ಎಲ್ಲವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಎರಡು ವರ್ಷ ಕೊರೊನಾದಿಂದ ಅಷ್ಟಮಠದ ಯತಿ ಗಳು ಉಡುಪಿಯಲ್ಲೇ ಇದ್ದಿದ್ದರು. ಎಲ್ಲರಿಗೂ ದೇವರ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

Advertisement

ದೇಶಿ ಪ್ರಜ್ಞೆಕೊರೊನಾ ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ದೇಶಿಪ್ರಜ್ಞೆ ಯನ್ನು ಬೆಳೆಸುವ ಪ್ರಯತ್ನ ಶ್ರೀಗಳು ಮಾಡಿದ್ದಾರೆ. ಪಾಶ್ಚಿಮಾತ್ಯದ ಪ್ರಭಾವ ದಿಂದ ನಾವು ನಮ್ಮ ತನವನ್ನು ಕಳೆದು ಕೊಳ್ಳುತ್ತಿದ್ದೇವೆ. ದೇವರು, ದೇಶ ಹಾಗೂ ದೇಶದ ಜನರ ಮೇಲೆ ಪ್ರೀತಿ ಇದೆ ಎಂಬುದನ್ನು ತಮ್ಮ ಪರ್ಯಾಯ ಅವಧಿಯಲ್ಲಿ ಶ್ರೀಗಳು ತೋರಿಸಿಕೊಟ್ಟಿದ್ದಾರೆ. ಅವರ ಈ ಕ್ರಮ ಅನುಕರಣೀಯ. ದೇಶೀಯ ಪ್ರಜ್ಞೆ ಎಲ್ಲ ರಂಗದಲ್ಲೂ ಬರಬೇಕು. ಸರಕಾರಗಳು ಈ ವಿಷಯವಾಗಿ ಕೆಲವೊಂದು ನಿರ್ಧಾರ ತೆಗೆದುಕೊಂಡಿವೆ. ಶ್ರೀಗಳು ಅದನ್ನು ಕೊರೊನಾ ಸಂಕಷ್ಟದ ನಡುವೆ ಮಾಡಿ ತೋರಿಸಿದ್ದಾರೆ ಎಂದರು.

ಆಪತ್ತು ಬಂದಾಗ ಅದನ್ನು ಹೇಗೆ ಎದುರಿಸಿ ಮುನ್ನಡೆಯಬೇಕು ಎಂಬು ದನ್ನು ಶ್ರೀಗಳು ತೋರಿಸಿಕೊಟ್ಟಿದ್ದಾರೆ. ಅದಮಾರು ಮಠದ ನಿಧಿಯನ್ನು ಬಳಸಿ, ಸಂಕಷ್ಟವನ್ನು ಸಮರ್ಥವಾಗಿ ಎದುರಿಸಿದ್ದಾರೆ. ಕಷ್ಟಬಂದಾಗ ಮಠವನ್ನು ಹೇಗೆ ನಡೆಸಬಹುದು ಎಂಬುದನ್ನು ಚೆನ್ನಾಗಿ ಆಚರಣೆ ಮಾಡಿ ತೋರಿಸಿದ್ದಾರೆ. ಅವರ ಧೈರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದು ಹೇಳಿದರು.

ವಿದ್ವಾಂಸರಾದ ಕೃಷ್ಣರಾಜ ಕುತ್ಪಾಡಿ ಅವರು ಅಭಿವಂದನಾ ಭಾಷಣ ಮಾಡಿದರು. ಪರ್ಯಾಯೋತ್ಸವ ಸಮಿ ತಿಯ ಕಾರ್ಯಾಧ್ಯಕ್ಷ, ಶಾಸಕ ಕೆ. ರಘುಪತಿ ಭಟ್‌ ಸ್ವಾಗತಿಸಿದರು. ನಗರ ಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌ ಅಭಿನಂದನ ಪತ್ರ ಓದಿದರು. ಪರ್ಯಾಯ ಸ್ವಾಗತ ಸಮಿತಿಯ ಕೆ. ಸೂರ್ಯನಾರಾಯಣ ಉಪಾಧ್ಯ ಉಪಸ್ಥಿತರಿದ್ದರು.

ಹೆರ್ಗ ಹರಿಪ್ರಸಾದ್‌ ಭಟ್‌ ನಿರೂ ಪಿಸಿದರು. ಸಮಿತಿಯ ಪ್ರಧಾನ ಕಾರ್ಯ ದರ್ಶಿ ವಿಷ್ಣುಪ್ರಸಾದ್‌ ಪಾಡಿಗಾರ್‌ ಧನ್ಯವಾದ ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next