ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡಮಿಯ ವಿ| ದೀಪಕ್‌ಕುಮಾರ್ ಅವರ ಶಿಷ್ಯೆ ಕು| ಪ್ರಾರ್ಥನಾ ಅವರ ನೃತ್ಯಾಂತರಂಗದಲ್ಲಿದ್ದ ವಿಶೇಷತೆ ಏನೆಂದರೆ “ಶಂಕರಂ’ (ಶುಭಪ್ರಧ) ಶಂ ಎಂದರೆ ಒಳ್ಳೆಯದನ್ನು, ಕರ ಎಂದರೆ ಮಾಡುವವನು ಎಂಬ ವಿಷಯವನ್ನು ಆಯ್ಕೆ ಮಾಡಿ ನಾಲ್ಕು ನೃತ್ಯಬಂಧಗಳನ್ನು ಮನೋಹರವಾಗಿ ನರ್ತಿಸಿದ್ದಾರೆ. ಹಣೆಯಲ್ಲಿ ಭಸ್ಮದ ತಿಲಕ, ಕೆಂಪು ಬೊಟ್ಟು, ಮುದ್ದು ಮುಖದಲ್ಲಿ ಬರುವ ನವರಸಗಳು, ಪುಟ್ಟ ಕೈಗಳು ಆದರೆ ಶುದ್ಧವಾದ ಮುದ್ರೆ, ಪುಟಾಣಿ ಕಾಲು, ಪಾದಗಳ ಹೆಜ್ಜೆಗಳು ಕ್ಷಣ ಮಾತ್ರದಲ್ಲಿ ಇನ್ನೊಂದು ಭಂಗಿಗೆ ಜಿಗಿಯುತ್ತಿದ್ದವು. ಪುಷ್ಪಾಂಜಲಿ ಈ ನೃತ್ಯಬಂಧ ಗಂಭೀರನಾಟ ರಾಗ ತಿಶ್ರ ನಡೆ ಆದಿತಾಳದಲ್ಲಿ ಇದ್ದು ಸಾಹಿತ್ಯ ಇಲ್ಲದ ಶೊಲ್ ಕಟ್ಟುಗಳಿಂದ ಕೂಡಿದ ಎಲ್ಲಾ ಶಕ್ತಿಗಳಾದ ರಂಗಾದಿ ದೇವತೆ ಗಳಿಗೆ, ನಟರಾಜನಿಗೆ, ಹಿಮ್ಮೇಳದವರಿಗೆ, ಅಷ್ಟದಿಕಾ³ಲಕರಿಗೆ, ಸಭಿಕರಿಗೆ ವಂದಿಸಿ ಅಡವಿನಿಂದ ರಂಜಿಸಿದ್ದು ಮುಂದೆ ಕಾಶಿ ವಿಶ್ವನಾಥನ ಅಷ್ಟಕ ಇದರಲ್ಲಿ ನಾಲ್ಕು ಚರಣಗಳನ್ನು ಆಯ್ದು ಶಂಕರನೇ ನೀನೇ ಎಲ್ಲ, ನಿನ್ನದೇ ಎಲ್ಲ, ಭಕ್ತಿಯೇ ಎಲ್ಲ ಎಂಬುದನ್ನ ತೋರಿಸಿದರು.
ಎರಡನೇ ಆಯ್ಕೆ ಲತಾಂಗಿ ರಾಗ ಆದಿತಾಳದ ಪದವರ್ಣ ಮದುರೈ ಮುರಳೀಧರರ ರಚನೆ. ಝುಲಕ್‌ನಿಂದ ಈ ನೃತ್ಯವನ್ನು ಮಾಡಿದಾರೆ.
ಹೌದೇನೇ ಉಮಾ ಜಿ.ಎಸ್ ರುದ್ರಪ್ಪ ಅವರ ರಚನೆ. ಶುದ್ಧ ವಿನ್ಯಾಸ ಆದಿತಾಳದಲ್ಲಿದೆ. ಕೊನೆಗೆ ತಿಲ್ಲಾನ ಶಂಕರನಿಗೆ ಪ್ರಿಯವಾದ ಶಂಕರಾಭರಣ ರಾಗದಲ್ಲಿದೆ, ಪಂಚನಡೆ ಐದು ಜಾತಿಗಳು ಬರುವಂತಹ ಶೊಲ್ ಕಟ್ಟುಗಳ ಕೋರೆ ಇದ್ದು, ತಿಶ್ರ ನಡೆ ಆದಿತಾಳದಲ್ಲಿ ಇದ್ದು, ತಂಜಾವೂರಿನ ಗೃಹದೀಶ್ವರರನ್ನು ಸ್ತುತಿಸುವ ಸಾಹಿತ್ಯ ಇದೆ. ಈ ಕಾರ್ಯಕ್ರಮಕ್ಕೆ ಹಾಡಿನ ಮೂಲಕ ವಿ| ಪ್ರೀತಿಕಲಾ ಇವರು ಸಹಕರಿಸಿದ್ದಾರೆ ಹಾಗೂ ಮೃದಂಗದಲ್ಲಿ ವಿ| ಜಿ.ಗುರುಮೂರ್ತಿ ಬೆಂಗಳೂರು, ಕೊಳಲಿನಲ್ಲಿ ವಿ| ರಾಜಗೋಪಲನ್ ಕಾಞಂಗಾಡ್ ಇವರು ಸಹಕರಿಸಿದ್ದಾರೆ.
ಕೃಷ್ಣವೇಣಿ ಪ್ರಸಾದ್ ಮುಳಿಯ