ಬೀದರ್: ಅಯೋಧ್ಯೆಯಲ್ಲಿ ನಿರ್ಮಾಣ ಗೊಳ್ಳುತ್ತಿರುವ ರಾಮ ಮಂದಿರಕ್ಕಾಗಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದು ಪರಿಷತ್‌ನಿಂದ ಹಮ್ಮಿಕೊಂಡಿರುವ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಶನಿವಾರ ನಗರದ ಶ್ರೀ ಸಿದ್ಧಾರೂಢ ಮಠದಲ್ಲಿ ಚಾಲನೆನೀಡಲಾಯಿತು.
ಮಠದ ಡಾ| ಶಿವಕುಮಾರ ಸ್ವಾಮಿಗಳು ಅಭಿಯಾನಕ್ಕೆ ಚಾಲನೆ ನೀಡಿ, ದೇವರ ಬಳಿ ನಮ್ಮ ಸುಖ-ದುಃ ಖಗಳನ್ನು ಹಂಚಿಕೊಳ್ಳುತ್ತೇವೆ. ಹಾಗಾಗಿ ಯಾವ ಗ್ರಾಮದಲ್ಲಿ ಮಠ-ಮಂದಿರ ಇರುವುದಿಲ್ಲವೋ ಆ ಊರಿನಲ್ಲಿ ಜನರು ವಾಸಿಸಲಾರರು. ಶ್ರೀರಾಮ ಎಲ್ಲರ ದೃಷ್ಟಿಯಲ್ಲಿ ಆದರ್ಶ ಪುರುಷ, ಮರ್ಯಾದೆ ಪುರುಷೋತ್ತಮ ಆಗಿದ್ದಾರೆ. ರಾಮ ಮಂದಿರ ಭಾರತದ ಶಕ್ತಿಯ ದ್ಯೋತ್ಯಕವಾಗಿ ನಿಲ್ಲಲಿದೆ ಎಂದು ಹೇಳಿ ಮಂದಿರ ನಿರ್ಮಾಣ ಕಾರ್ಯಕ್ಕೆ 1 ಲಕ್ಷ ರೂ. ದೇಣಿಗೆಯ ಚೆಕ್‌ನ್ನು ನೀಡಿದರು.
ಇದನ್ನೂ ಓದಿ:ಮಮತೆಯ ಮಡಿಲು ಅನ್ನದಾಸೋಹದಲ್ಲಿ ಊಟ ವಿತರಿಸಿದ ಶಾಸಕ ಶ್ರೀನಿವಾಸ್
ರಾಮಕೃಷ್ಣ ಆಶ್ರಯಮದ ಸ್ವಾಮಿ ಜ್ಯೋತಿರ್ಮಯಾನಂದ ಮಾತನಾಡಿ, ರಾಮ ಮಂದಿರ ಶತ ಶತಮಾನಗಳ ಭಾರತೀಯರ ಶ್ರದ್ಧಾ ಕೇಂದ್ರ. ರಾಮ ಮಂದಿರ ಜಾತಿ, ಪಂಥದ ಕೇಂದ್ರಲ್ಲ, ಬದಲಾಗಿ ರಾಷ್ಟ್ರ ಮಂದಿರ. ಮರ್ಯಾದೆ ಪುರುಷೋತ್ತಮ ರಾಮನನ್ನು ಭಾರತದ ಆತ್ಮ ಎಂದು ಕರೆಯುತ್ತೇವೆ. ಧರ್ಮದ ಮೂಲಕವೇ ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಲು ಸಾಧ್ಯ ಎಂಬುದನ್ನು ವಿವೇಕಾನಂದರು ಹೇಳಿದ್ದರು. ಮಂದಿರ ನಿರ್ಮಾಣದಲ್ಲಿ ಪ್ರತಿಯೊಬ್ಬ ಭಾರತೀಯರ ಪಾಲ್ಗೊಳ್ಳುವಿಕೆ ಮುಖ್ಯ ಎಂದು ಹೇಳಿದರು.
ಎಂಎಲ್‌ಸಿ ರಘುನಾಥರಾವ್ ಮಲ್ಕಾಪುರೆ, ಪ್ರಮುಖರಾದ ಬಸವರಾಜಜಿ. ಪಾಟೀಲ, ಬಿ.ಜಿ ಶೆಟಕಾರ ಮತ್ತಿತರರು ಇದ್ದರು