Advertisement

ಕಣ್ಣಿಗೆ ಕಾಣಿಸುವ ಶಕ್ತಿ ಕಡಿಮೆ, ಕಾಣಿಸದ ಶಕ್ತಿ ಹೆಚ್ಚು

10:43 PM Jun 02, 2019 | sudhir |

ಉಡುಪಿ: ನಮ್ಮ ಕಣ್ಣಿಗೆ ಕಾಣಿಸುವ ಶಕ್ತಿ (ಇಲೆಕ್ಟ್ರೋ ಮ್ಯಾಗ್ನೆಟಿಕ್‌ ಸ್ಪೆಕ್ಟ್ರಮ್‌) ಕಡಿಮೆ, ಕಣ್ಣಿಗೆ ಕಾಣಿಸದೆ ಇರುವ ಶಕ್ತಿಗಳು ಅಧಿಕ. ಇವುಗಳ ಬಗೆಗೂ ಸಂಶೋಧನೆಗಳು ನಡೆಯುತ್ತಿವೆ ಎಂದು ಇಸ್ರೊ ಭೂಪರ್ಯವೀಕ್ಷಣ ವಿಭಾಗದ ನಿರ್ದೇಶಕ ಡಾ| ದಿವಾಕರ್‌ ಹೇಳಿದರು.

Advertisement

ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ರವಿವಾರ ನಡೆದ “ಜ್ಞಾನ-ವಿಜ್ಞಾನ ಗೋಪುರಂ’ ಗೊಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸುತ್ತಲೂ ಶಕ್ತಿ ಇವೆ. ಆದರೆ ಕೆಲವು ಮಾತ್ರ ಗೋಚರಿಸುತ್ತವೆ. ಶಕ್ತಿಗಳು ಅಲೆಗಳ ಮೂಲಕ ಚಲಿಸುತ್ತವೆ. ಬೆಳಕಿನಷ್ಟೇ ವೇಗ ಶಕ್ತಿಗೂ ಇವೆ. ಇಲೆಕ್ಟ್ರೊ ಮ್ಯಾಗ್ನೆಟಿಕ್‌ ಸ್ಪೆಕ್ಟ್ರಮ್‌ ಪ್ರಕೃತಿಯಲ್ಲಿದೆ. ಇದಕ್ಕೂ ಮೀರಿದ ಶಕ್ತಿಯನ್ನು ದೇವರು ಎನ್ನುವುದು ಎಂದರು.

60 ಮಿಲಿಯ ಬಣ್ಣಗಳಿವೆ
ಬಣ್ಣಗಳಲ್ಲಿ ನೀಲಿ, ಹಸಿರು, ಕೆಂಪು ಬಣ್ಣಗಳು ತೋರುತ್ತವೆ. ನಮ್ಮ ಕಣ್ಣಿಗೆ ಹೆಚ್ಚೆಂದರೆ 15-20 ಬಣ್ಣಗಳು ಕಾಣಬಹುದು. ಸುಮಾರು 60 ಮಿಲಿಯ ಬಣ್ಣಗಳಿವೆ. ಇವುಗಳು ತೋರುವುದಿಲ್ಲ ಎಂದರು.

ಓಝೋನ್‌ ಪದರ ಇರುವುದು ಭೂ ಗ್ರಹಕ್ಕೆ ಮಾತ್ರ. ಚಂದ್ರ, ಮಂಗಳ ಇನ್ನಾವುದೇ ಗ್ರಹಗಳಿಗೆ ಮನುಷ್ಯ ಹೋದರೂ ಈ ಪದರ ಇಲ್ಲವಾದರೆ ಅಲ್ಲಿ ಬದುಕಲು ಆಗುವುದಿಲ್ಲ ಎಂದರು.

ಬಂಟಕಲ್ಲು ಎಂಜಿನಿಯರಿಂಗ್‌ ಕಾಲೇಜಿನ ಡಾ| ಪಿ.ಎಸ್‌. ವಾಸುದೇವ ರಾವ್‌, ಮುಂಬಯಿ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ವಿ| ವಿದ್ಯಾಸಿಂಹಾಚಾರ್ಯ ಮಾಹುಲಿ, ವಾಸ್ತುತಜ್ಞ ವಿ| ಸುಬ್ರಹ್ಮಣ್ಯ ಭಟ್‌ ಅವರು ವಿಷಯ ಮಂಡಿಸಿದರು. ಅಧ್ಯಕ್ಷತೆಯನ್ನು ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ವಹಿಸಿದ್ದರು.

Advertisement

ಕೊರ್ಲಹಳ್ಳಿ ವೆಂಕಟೇಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಹೆಚ್ಚಾಗದಿರಲಿ ಎಕ್ಸ್‌ರೇ
ಗಾಮಾ ರೇಸ್‌, ಅಲ್ಟ್ರಾ ವಯಲೆಟ್‌ ಎಕ್ಸ್‌ರೇ, ಇಲೆಕ್ಟ್ರೋ ಮ್ಯಾಗ್ನಟಿಕ್‌ ರೇಸ್‌ಗಳಲ್ಲಿ ಅಲ್ಟ್ರಾ ವಯಲೆಟ್‌ ಕಿರಣಗಳು ಭೂಮಿಗೆ ಬರುವುದೇ ಇಲ್ಲ ಮತ್ತು ಇವು ಮೂರೂ ಕಾಣಿಸುವುದಿಲ್ಲ. ಇವುಗಳು ಮನುಷ್ಯರಿಗೆ ತಾಗಿದರೆ ಬದುಕುವುದು ಕಷ್ಟ. ಅದಕ್ಕಾಗಿಯೇ ಎಕ್ಸ್‌ರೇ ಹೆಚ್ಚು ಮಾಡಬಾರದು ಎನ್ನುವುದು. ಟಿವಿ, ಮೊಬೈಲ್‌, ಮೈಕ್ರೋ ವೇವ್‌ ಓವನ್‌ಗಳೆಲ್ಲ ಈ ಶಕ್ತಿಗಳು ಎಂದು ಡಾ| ದಿವಾಕರ್‌ ಹೇಳಿದರು.

ಭಾವನೆಗಳೇ ಬದುಕಿನ ಜೀವಾಳ
ಬೆಂಗಳೂರು ಭಾರತೀಯ ವಿಜ್ಞಾನ ಮಂದಿರದ ಹಿರಿಯ ವಿಜ್ಞಾನಿ ಡಾ|ಎಸ್‌.ಎನ್‌.ಓಂಕಾರ್‌ ಅವರು ಮಾತನಾಡಿ, ಹಿಂದೆ ನ್ಯೂಟಾನಿಯನ್‌ ಭೌತಶಾಸ್ತ್ರವಿತ್ತು. ಈಗ ಕ್ವಾಂಟಂ ಭೌತಶಾಸ್ತ್ರದಲ್ಲಿದ್ದೇವೆ. ನ್ಯೂಟಾನಿಯನ್‌ ಭೌತಶಾಸ್ತ್ರ ಪ್ರಕಾರ ಶಕ್ತಿಯ ಅಲೆಗಳು ಸ್ಪಂದಿಸಿದಾಗ ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಮೂರು ಅಕ್ಕಿಯ ಬಾಟಲಿಗಳಿಗೆ ಒಳ್ಳೆಯ ಭಾವನೆ, ಕೆಟ್ಟ ಭಾವನೆ, ತಟಸ್ಥ ಭಾವನೆಯನ್ನು ತೋರ್ಪಡಿಸಿದಾಗ ಒಳ್ಳೆಯ ಭಾವನೆ ತೋರಿದ ಅಕ್ಕಿ ಕೆಟ್ಟಿರುವುದಿಲ್ಲ, ಕೆಟ್ಟ ಭಾವನೆಯದ್ದು ಕೆಟ್ಟಿರುತ್ತದೆ, ತಟಸ್ಥ ಭಾವನೆಯ ಅಕ್ಕಿ ಕಡಿಮೆ ಕೆಟ್ಟಿರುವುದನ್ನು ಜಪಾನ್‌ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಭಾವನೆಗಳೇ ಬದುಕಿನ ಜೀವಾಳ ಎಂಬುದು ವೈಜ್ಞಾನಿಕವಾಗಿ ಸಿದ್ಧಗೊಂಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next