Advertisement

10 ವರ್ಷಗಳಲ್ಲಿ ಭಾರತದಲ್ಲಿ ಇಳಿದಿದೆ ಬಡತನ ಪ್ರಮಾಣ

08:09 AM Jul 18, 2020 | mahesh |

ಹೊಸದಿಲ್ಲಿ: 2005-06 ಮತ್ತು 2015-16ರ ನಡುವೆ ಸುಮಾರು 27.3 ಕೋಟಿ (273 ಮಿಲಿಯನ್‌) ಭಾರತೀಯರು ಬಡತನದಿಂದ ಹೊರ ಬಂದಿದ್ದಾರೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬಡತನದ ಇಳಿಕೆ ಪ್ರಮಾಣ ಹೆಚ್ಚಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

Advertisement

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಆಕ್ಸ್‌ಫ‌ರ್ಡ್‌ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮಗಳು ಜಂಟಿ ಯಾಗಿ ಬಿಡುಗಡೆ ಮಾಡಿದ ವರದಿಯಲ್ಲಿ ಈ ಸಂಗತಿ ಬಯಲಾಗಿದೆ. ಈ ಕುರಿತು ಅಧ್ಯಯನ ನಡೆಸಿದ 75 ರಾಷ್ಟ್ರಗಳ ಪೈಕಿ 65 ರಾಷ್ಟ್ರಗಳಲ್ಲಿ 2000-2019ರ ಅವಧಿಯಲ್ಲಿ ಬಡತನದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ. ಭಾರತದಲ್ಲಿ 2005-06 ಮತ್ತು 2015-16ರ ನಡುವೆ, ಕೇವಲ 10 ವರ್ಷಗಳ ಅವಧಿಯಲ್ಲಿ ಸುಮಾರು 27.3 ಕೋಟಿ ಭಾರತೀಯರು ಬಹು ಆಯಾಮದ ಬಡತನದಿಂದ ಹೊರ ಬಂದಿದ್ದಾರೆ. ಅನಾರೋಗ್ಯ ಪರಿಸ್ಥಿತಿ ಹಾಗೂ ಶಿಕ್ಷಣದ ಕೊರತೆ, ಕಳಪೆ ಗುಣಮಟ್ಟದ ಜೀವನ ನಿರ್ವಹಣೆ, ಹಿಂಸಾಚಾರದ ಬೆದರಿಕೆ, ಪರಿಸರಕ್ಕೆ ಅಪಾಯಕಾರಿಯಾದ ಪ್ರದೇಶದಲ್ಲಿನ ಬದುಕು…ಇವೆಲ್ಲವನ್ನೂ ಬಹು ಆಯಾಮದ ಬಡತನದ ಸೂಚ್ಯಂಕವಾಗಿ ಪರಿಗಣಿಸಲಾಗಿದೆ.

ಭಾರೀ ಜನಸಂಖ್ಯೆ ಹಾಗೂ ಬಡತನದ ವಿಭಿನ್ನ ಗುಣಮಟ್ಟದ ನಡುವೆಯೂ ಭಾರತ ಈ ಸಾಧನೆ ಮಾಡಿದೆ. ಇತರ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿನ ಬಡತನದ ಇಳಿಕೆ ಪ್ರಮಾಣ ಈ ಅವಧಿಯಲ್ಲಿ ಹೆಚ್ಚಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next