ಪ್ರತಿದಿನದ ಅಡುಗೆಯಲ್ಲಿ ಬಳಸಲ್ಪಡುವ ಬೀಟ್‌ರೂಟ್ ಎಂಬ ಕೆಂಪುಗಡ್ಡೆಯಲ್ಲಿ ಅಡಗಿರುವ ಪೋಷಕಾಂಶಗಳು ಸಹಸ್ರಾರು. ಹೆಚ್ಚಿನವರು ಈ ಬೀಟ್ ರೂಟ್‌ನ್ನು ಇಷ್ಟಪಡುವುದಿಲ್ಲ, ಹಾಗಂತ ದ್ವೇಷಿಸುತ್ತಾರೆ ಎಂದಲ್ಲ. ಆಹಾರವಾಗಿ ಉಪಯೋಗಿಸುವವರು ವಿರಳ. ಆದರೆ ಇಲ್ಲಿದೆ ನೋಡಿ ಪ್ರತಿದಿನವೂ ಬೀಟ್‌ರೂಟ್ ನ್ನು ನಿಮ್ಮ ಆಹಾರದಲ್ಲಿ ಉಪಯೋಗಿಸಲು ಹಲವು ಕಾರಣಗಳು. ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ನಿಶ್ಶಕ್ತಿಯಿಂದ ಬಳಲುತ್ತಿರುವವರೇ ಹೆಚ್ಚು. ಜಂಕ್‌ಫುಡ್ ಗಳ ಸೇವನೆಯಿಂದಾಗಿ ರಕ್ತಹೀನತೆ ಕಾಯಿಲೆಯಿಂದ ಬೇಸರಗೊಂಡಿರುವವರಿಗೆ ಈ ಬೀಟ್‌ರೂಟ್ ಸಿದೌœಷಧ ಎಂದರೆ ತಪ್ಪಾಗಲಾರದು.
ಅಪಾರ ಆರೋಗ್ಯ ಗುಣಗಳು ಕೆನೊಪೊಡಿಯೇಶಿಯ ಕುಟುಂಬಕ್ಕೆ ಸೇರಿದ ಬೀಟ್‌ರೂಟ್‌ನ ವೈಜ್ಞಾನಿಕ ಹೆಸರು ಬೆಟಾ ವಲ್ಗಾರಿಸ್‌ಎಲ್. ಬೀಟ್‌ರೂಟ್ ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧ ವಾಗಿದ್ದು, ತಿಂದ ತತ್‌ಕ್ಷಣ ಶಕ್ತಿಯನ್ನು ನೀಡು ತ್ತದೆ. ಇದರಲ್ಲಿರುವ ನೈಟ್ರೇಟ್ ಅಪ ಧಮನಿಯ ಸ್ನಾಯುಗಳನ್ನು ಪ್ರಚೋದಿಸಿ ರಕ್ತ ಸುಗಮವಾಗಿ ಹರಿಯುವಂತೆ ಮಾಡುತ್ತದೆ. ಅದಲ್ಲದೆ ಈ ನೈಟ್ರೇಟ್ ಅಂಶ ಜೀರ್ಣ ಕಾರಿಯಾಗಿರುವುದರಿಂದ ಮಲ ಬದ್ಧತೆ ನಿವಾರಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.
ದೇಹದ ಆಯಾಸ, ಅಶಕ್ತಿಯನ್ನು ನಿವಾರಿಸಲು ಬೀಟ್‌ರೂಟ್ ರಸಕ್ಕೆ ನಿಂಬೆರಸ ಮತ್ತು ಸಕ್ಕರೆ ಬೆರೆಸಿ ಕುಡಿದರೆ ಉತ್ತಮ. ಒಂದು ಕಪ್ ಬೀಟ್‌ರೂಟ್‌ನಲ್ಲಿ 58 ಗ್ರಾಂ ಕ್ಯಾಲೊರಿಗಳಿವೆ. ಆದರೆ ಈ ಕ್ಯಾಲೊರಿ ದೇಹದ ತೂಕ ಹೆಚ್ಚಿಸುವ ಬದಲು ಕೂದಲು ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಜೀಣಕ್ರಿಯೆ ಮತ್ತು ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಯಲ್ಲಿ ಬೆಳ್ಳುಳ್ಳಿಯಷ್ಟೇ ಬೀಟ್‌ರೂಟ್ ಕೂಡ ಪರಿಣಾಮಕಾರಿ.
ತರಕಾರಿಯಾಗಿ ಮಾತ್ರ ವಲ್ಲದೆ ಔಷಧಿಯಾಗಿಯೂ ಬಳಸಲ್ಪಡುವ ಬೀಟ್‌ರೂಟ್ ವ್ಯಾಯಾಮ ಮಾಡುವವರಿಗೆ ಶಕ್ತಿದಾಯಕ. ಗರ್ಭಿಣಿಯರು ನಿತ್ಯಆಹಾರದಲ್ಲಿ ಬೀಟ್‌ರೂಟ್ ಸೇವಿಸುವು ದರಿಂದ ಅವಶ್ಯವಾದ ಫೋಲಿಕ್ ಆಮ್ಲದ ಪೂರೈಕೆಯಾಗುತ್ತದೆ. ಜತೆಗೆ ಶಿಶುವಿನ ಬೆನ್ನುಹುರಿ ಬೆಳವಣಿಗೆಗೆ ನೆರವಾಗುತ್ತದೆ.
ರೋಮನ್ನರು ಇದನ್ನು ಲೈಂಗಿಕ ಶಕ್ತಿ ಯನ್ನು ವೃದ್ಧಿಸಲು ಬಳಸುತ್ತಿದ್ದರಂತೆ. ನಿತ್ಯ ಆಹಾರದಲ್ಲಿ ಬೀಟ್‌ರೂಟ್ ಇದ್ದರೆ ಹೃದಯ ರೋಗಗಳು, ಪಾರ್ಶ್ವವಾಯುಗಳನ್ನು ದೂರವಿಡಲು ಸಹಕಾರಿ. ಮಧುಮೇಹಕ್ಕೆ ಇದು ಸ್ವ ನಿಯಂತ್ರಿತ ಇನ್ಸುಲಿನ್ ಎನ್ನಲಾಗಿದೆ. ನಿದ್ರಾಹೀನತೆಯಿಂದ ಬಳಲುತ್ತಿರುವರಿಗೆ ಉಪಕಾರಿ. ಹಿಮೋ ಗ್ಲೋಬಿನ್ ವೃದ್ಧಿಸುವ ಮೂಲಕ, ರಕ್ತದಲ್ಲಿ ರುವ ಕಲ್ಮಶವನ್ನೂ ತೆಗೆದುಹಾಕುತ್ತದೆ.
ಕ್ಯಾನ್ಸರ್, ರಕ್ತದೊತ್ತಡ ಮತ್ತು ಹುಟ್ಟು ಸಮಸ್ಯೆಗಳನ್ನು ನಿವಾರಿಸಲು ಬೇಕಾದಂತಹ ಪೋಷಕಾಂಶಗಳೊಂದಿಗೆ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಬೀಟ್‌ರೂಟ್ ನಮ್ಮ ದೇಹಕ್ಕೆ ನೀಡುತ್ತದೆ. ಮೂತ್ರ ಸಂಬಂಧಿ ರೋಗಗಳಿರುವವರು ಸೌತೆಕಾಯಿ, ಕ್ಯಾರೆಟ್ ಮತ್ತು ಬೀಟ್ ರೂಟ್ ರಸವನ್ನು ಸಮಪ್ರಮಾಣದಲ್ಲಿ ಬೆರಸಿ ಕುಡಿದರೆ ಒಳ್ಳೆಯದು.
ಮೂತ್ರಕೋಶ ದಲ್ಲಿ ಕಲ್ಲು ಇರುವವರಿಗೆ ಬೀಟ್‌ರೂಟ್ ಹಿತಕರವಲ್ಲ. ಸ್ತನ, ವೃಷಣ ಮತ್ತು ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್ ಬೆಳವಣಿಗೆ ಯನ್ನು ತಡೆಯುವಲ್ಲಿ ಇದರಲ್ಲಿರುವ ಬೀಟಾ ನಿಯಾಸಿನ್ ಸಹಕಾರಿ. ದೇಹದಲ್ಲಾಗುವ ರಾಸಾಯನಿಕ ಕ್ರಿಯೆಗಳನ್ನು ಸರಿ ಯಾದ ಕ್ರಮದಲ್ಲಿ ನಡೆಸಲು ಬೀಟ್‌ರೂಟ್‌ನ ಕೆಂಪು ಬಣ್ಣದಲ್ಲಿರುವ ಬೆಟೈನ್ ನೆರವಾಗುತ್ತದೆ. ಬೀಟ್‌ರೂಟ್ ನಲ್ಲಿರುವ ಪೋಷಕಾಂಶಗಳನ್ನು ಪೂರ್ಣ ಪ್ರಮಾಣದಲ್ಲಿ ಉಳಿಸಿಕೊಳ್ಳುವುದಕ್ಕೆ ಅದನ್ನು ಹಸಿಯಾಗಿ ಅಥವಾ ಹದವಾಗಿ ಬೇಯಿಸಿ ತಿನ್ನುವುದು ಉತ್ತಮ.