Advertisement

4ಜಿ-5ಜಿ ಯುಗದಲ್ಲೂ ಸದ್ದು ಮಾಡುತ್ತಿದೆ ಅಂಚೆ ಇಲಾಖೆ

01:20 PM Oct 11, 2019 | sudhir |

ದೂರವಾಣಿ ಮತ್ತು ಮೊಬೈಲ್‌ ಇಲ್ಲದ ಆ ಕಾಲದಲ್ಲಿ, ಸುದ್ದಿಯನ್ನೂ, ಭಾವನೆಯನ್ನೂ ಹೊತ್ತು ಸಾಗುತ್ತಿದ್ದ ಪ್ರಮುಖ ಸಂಪರ್ಕ ಸಾಧನವೆಂದ್ರೆ ಪತ್ರಗಳು. ಈ ಪತ್ರಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವುದಕ್ಕಾಗಿ ಅಂದು ಇಂದು ಶ್ರಮಿಸುತ್ತಿರುವುದು ಅಂಚೆ ಇಲಾಖೆ. 4ಜಿ-5ಜಿ ಯುಗದಲ್ಲಿಯೂ ಪತ್ರಗಳು ಸದ್ದು ಮಾಡುತ್ತಿವೆ ಎಂದರೆ ಅದರ ಮಹತ್ವದ ಎಷ್ಟಿದೆ ಎಂಬುದು ತಿಳಿಯುತ್ತದೆ.

Advertisement

ಇನ್ನು ಈ ದಿನವನ್ನು ವಿಶ್ವದದ್ಯಾಂತ ಅಂಚೆ ದಿನಾಚರಣೆಯನ್ನು ಆಚರಣೆ ಮಾಡಿದ್ದು, ಪೋಸ್ಟ್‌ ಮಾಸ್ಟರ್‌ಗಳ ಸೇವೆಯನ್ನು ನೆನಪಿಸಿಕೊಳ್ಳುವ ದಿನವಾಗಿದೆ. ಹಾಗಾದರೆ ಈ ಅಂಚೆ ದಿನಾಚರಣೆ ಪ್ರಾರಂಭವಾಗಿದ್ದು ಹೇಗೆ ? ಆಚರಣೆಯ ಮಹತ್ವ ಏನು ಎಂಬಿತ್ಯಾದಿ ವಿಷಯಗಳ ಮಾಹಿತಿ ಇಲ್ಲಿದೆ.

ಅಕ್ಟೋಬರ್‌ 9 ಅಂಚೆ ದಿನ
ಅಕ್ಟೋಬರ್‌ 9 ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ. 1874ರಲ್ಲಿ ‘ವಿಶ್ವ ಅಂಚೆ ಒಕ್ಕೂಟ’ ವಿಶ್ವ ಅಂಚೆ ದಿನವನ್ನು ಹುಟ್ಟುಹಾಕಿತ್ತು. 95 ವರ್ಷಗಳ ನಂತರ ಅಂದ್ರೆ, 1969ರಲ್ಲಿ, ಜಪಾನ್‌ನ ಟೋಕಿಯೋದಲ್ಲಿರೋ ‘ವಿಶ್ವ ಅಂಚೆ ಒಕ್ಕೂಟ’ ಅಂತರಾಷ್ಟ್ರೀಯ ಅಂಚೆ ದಿನವನ್ನು ಘೋಷಿಸಿತು. ಅದಕ್ಕೆ ಯುನೆಸ್ಕೋ ಕೂಡ ಸಾಥ್‌ ನೀಡಿದ್ದು, ವಿಶ್ವದ ಸುಮಾರು 150 ರಾಷ್ಟ್ರಗಳಲ್ಲಿ ಪ್ರತಿ ವರ್ಷವೂ ವಿಶ್ವ ಅಂಚೆ ದಿನ ಆಚರಿಸಲಾಗುತ್ತದೆ.

ಅಂಚೆ ಪದ್ಧತಿ
ಅನಾದಿ ಕಾಲದಿಂದ ಜನರು ಸಂಪರ್ಕ ಸಾಧನವನ್ನಾಗಿ ಪತ್ರವನ್ನು ಅವಲಂಬಿಸಿದರು. 4 ಸಾವಿರ ವರ್ಷಗಳ ಹಿಂದೆ ಬ್ಯಾಬಿಲೋನಿಯಾದಲ್ಲಿ ಅಕ್ಷರಗಳನ್ನು ಅಚ್ಚುಮಾಡುವ ಮಣ್ಣಿನ ಫ‌ಲಕಗಳನ್ನು ಸಂಪರ್ಕಕ್ಕಾಗಿ ಬಳಸಲು ಪ್ರಾರಂಭಿಸಿದರು. ಈಜಿಪ್ಟಿಯನ್ನರು ದೂತರ ಮೂಲಕ ಸುದ್ದಿ ಕಳಿಸುವ ವ್ಯವಸ್ಥೆ ತಂದರು. ಅಲ್ಲಲ್ಲಿ ಪಾರಿವಾಳಗಳು ಹಾಗೂ ಅಶ್ವಾರೋಹಿಗಳ ಮೂಲಕ ಪತ್ರ ಕಳಿಸುವ ಪದ್ಧತಿ ಶುರುವಾಯಿತು. ಆದರೆ ಈ ಮಾರ್ಗಗಳಿಗಿಂತ ಪತ್ರವ್ಯವಹಾರಕ್ಕೆ ಒಂದು ನಿರ್ದಿಷ್ಟ ರೂಪ ನೀಡಿದ್ದು ಮಾತ್ರ ಅಂಚೆ ವ್ಯವಸ್ಥೆ.

ಇತಿಹಾಸ
1688ರಲ್ಲಿ ಇಂಗ್ಲೆಂಡ್‌ನ‌ಲ್ಲಿ ಪೆನ್ನಿ ಪೋಸ್ಟ್‌ ವ್ಯವಸ್ಥೆ ಜಾರಿಗೆ ಬಂತು. ಮುಂದಿನ ದಿನಗಳಲ್ಲಿ ಅಂದರೆ 1837ರ ವರ್ಷದಲ್ಲಿ ಸಾರ್ವಜನಿಕ ಅಂಚೆ ಪದ್ಧತಿ ಅಧಿಕೃತವಾಗಿ ಇಂಗ್ಲೆಂಡ್‌ ದೇಶದಲ್ಲಿ ಜಾರಿಯಾಯಿತು. ತದನಂತರ ಬ್ರಿಟಿಷರ ಮೂಲಕ 1766ರಲ್ಲಿ ಭಾರತಕ್ಕೆ ಅಂಚೆ ವ್ಯವಸ್ಥೆಯನ್ನು ಪರಿಚಯಿಸಲಾಯಿತು. ಆದರೆ ಅಂಚೆ ಪದ್ಧತಿ ಜನಸಾಮಾನ್ಯರಿಗೆ ತಲುಪಲು ಪ್ರಾರಂಭವಾಗಿದ್ದು ಮಾತ್ರ 1837ರಿಂದ. ಹೀಗೆ ಹಂತ ಹಂತವಾಗಿ ಬೆಳೆಯುತ್ತಾ ಸಾಗಿದ ಅಂಚೆ ಪದ್ಧತಿ, ಮಾನವನ ಅಭಿವೃದ್ಧಿಗೆ ಸ್ಪಂದಿಸುತ್ತಾ ದೇಶದ ಮೂಲೆ ಮೂಲೆಯಲ್ಲಿಯೂ ಅಂಚೆ ಕಚೇರಿಗಳು ತೆರೆದವು.

Advertisement

ವಿಭಿನ್ನ ರೀತಿಯಲ್ಲಿ ಆಚರಣೆ
ವಿಶ್ವ ಅಂಚೆ ದಿನದಂದು ಕೆಲವು ರಾಷ್ಟ್ರಗಳು ಸರಕಾರಿ ರಜೆಯನ್ನು ಘೋಷಿಸಿದ್ದರೆ, ಮತ್ತೆ ಹಲವು ದೇಶಗಳು ಈ ದಿನದಂದು ಹೊಸ ಹೊಸ ಅಂಚೆ ಯೋಜನೆಯನ್ನು ಪರಿಚಯಿಸುತ್ತವೆ. ಜತೆಗೆ ಪ್ರತಿ ವರ್ಷವಿಶ್ವ ಮಟ್ಟದಲ್ಲಿ ವಿಶ್ವ ಅಂಚೆ ಒಕ್ಕೂಟ ಮತ್ತು ಯುನೆಸ್ಕೋ ಸಹಯೋಗದಲ್ಲಿ ಪತ್ರ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಈ ಮೂಲಕ ಪತ್ರ ಬರೆಯುವ ಹವ್ಯಾಸವನ್ನು ಜನರು ರೂಢಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next