Advertisement
ಗ್ರಾಮಲೆಕ್ಕಾಧಿಕಾರಿ ಹುದ್ದೆಗಳು ಖಾಲಿ ಉಳಿದಿರುವ ಹಿನ್ನೆಲೆಯಲ್ಲಿ ಹಾಲಿ ಇರುವ ಗ್ರಾಮಲೆಕ್ಕಾಧಿ ಕಾರಿ ಗಳಿಗೆ ಹೆಚ್ಚಿನ ಹೊರೆ ಬಿದ್ದಿದ್ದು, ಪ್ರಭಾರದ ಭಾರ ದಿಂದಾಗಿ ಗ್ರಾಮಲೆಕ್ಕಾಧಿಕಾರಿಗಳು ರೈತರಿಗೆ ಸರಿಯಾದ ಸೇವೆ ಒದಗಿಸಲಾಗದೆ ಪರದಾಡುತ್ತಿದ್ದಾರೆ. ರೈತರಿಗೆ ಸರ್ಕಾರದ ಯೋಜನೆಯನ್ನು ಸಮರ್ಪಕವಾಗಿ ತಲು ಪಿಸುವಲ್ಲಿ ಗ್ರಾಮಲೆಕ್ಕಾಧಿಕಾರಿಗಳ ಕೊರತೆ ಬಹುದೊಡ್ಡ ತೊಡಕಾಗಿ ಪರಿಣಮಿಸಿದೆ.
Related Articles
Advertisement
ಪ್ರಭಾರ ಭಾರಕ್ಕೆ ನಲುಗಿದ ವಿಎಗಳು: 92 ಮಂದಿ ಗ್ರಾಮಲೆಕ್ಕಾಧಿಕಾರಿಗಳ ಹುದ್ದೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಖಾಲಿ ಇರುವ ಗ್ರಾಮಲೆಕ್ಕಾಧಿಕಾರಿ ವೃತ್ತಗಳನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮಲೆಕ್ಕಾಧಿಕಾರಿಗಳಿಗೆ ಹೆಚ್ಚುವರಿಯಾಗಿ ಪ್ರಭಾರ ವಹಿಸಲಾಗಿದೆ. ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮಲೆಕ್ಕಾಧಿಕಾರಿಗಳು 2ರಿಂದ 4 ವೃತ್ತಗಳಿಗೆ ಪ್ರಭಾರ ವಿದ್ದು, ಹೆಚ್ಚುವರಿ ಕೆಲಸದ ಒತ್ತಡದಿಂದಾಗಿ ಗ್ರಾಮ ಲೆಕ್ಕಾಧಿಕಾರಿಗಳು ಸಕಾಲದಲ್ಲಿ ರೈತರಿಗೆ ಇಲಾಖೆಯ ಸೇವೆಗಳನ್ನು ತಲುಪಿಸಲು ಪರದಾಡುವಂತಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ ರೈತರ ವಿವರಗಳನ್ನು ಫ್ರೂಟ್ ಐಡಿಯಲ್ಲಿ ನೋಂದಣಿ ಮಾಡಬೇಕಿದ್ದು, ಬರಪರಿ ಹಾರ ರೈತರಿಗೆ ತಲುಪಬೇಕಾಗಿದ್ದರೆ ಅದಕ್ಕೆ ಎಫ್ ಐಡಿಯಲ್ಲಿ ನೋಂದಣಿ ಮಾಡಬೇಕಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮರು ಸರ್ವೆ ಕಾರ್ಯ, ಪೋಡಿ ಮುಕ್ತ ಅಭಿಯಾನ ಹೀಗೆ ಹಲವು ಕಂದಾಯ ಇಲಾಖೆ ಕಾರ್ಯಕ್ರಮಗಳು ನಡೆಯುತ್ತಿರುವ ಕಾರಣ ಹೆಚ್ಚು ವೃತ್ತಗಳ ಪ್ರಭಾರದಲ್ಲಿರುವ ಗ್ರಾಮಲೆಕ್ಕಾಧಿಕಾರಿಗಳು ಒತ್ತಡಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಸಕಾಲಕ್ಕೆ ರೈತರ ಕೆಲಸ ಕಾರ್ಯಗಳು ನಡೆಯದಾಗಿದೆ.
ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಸಾಕಷ್ಟು ಪ್ರಾಮು ಖ್ಯತೆ ಪಡೆದಿದೆ. ಒಬ್ಬ ಗ್ರಾಮಲೆಕ್ಕಾಧಿಕಾರಿಗೆ ಎರಡು ಮೂರು ವೃತ್ತದ ಜವಾಬ್ದಾರಿ ವಹಿಸಿ ರುವುದರಿಂದ ರೈತರಿಗೆ ತೊಂದರೆಯಾ ಗುತ್ತಿದೆ. ಕೂಡಲೇ ಜಿಲ್ಲಾಡಳಿತ ಖಾಲಿ ಹುದ್ದೆ ಭರ್ತಿ ಮಾಡ ಬೇಕು. ಹಾಗೂ ಗ್ರಾಮ ಲೆಕ್ಕಾಧಿ ಕಾರಿಗಳು ಪ್ರತಿದಿನ ತಮಗೆ ಕರ್ತವ್ಯ ನಿರ್ವಹಣೆಗೆ ಸೂಚಿಸಿರುವ ವೃತ್ತದಲ್ಲೇ ರೈತರಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕು. ● ಎಚ್.ಕೃಷ್ಣಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ, ರಾಜ್ಯ ರೈತಸಂಘ ರಾಮನಗರ
ಜಿಲ್ಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕೊರತೆಯಿಂದ ನಾವು ಒತ್ತಡಕ್ಕೆ ಸಿಲುಕಿರುವ ಬಗ್ಗೆ, ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅನ್ಯ ಇಲಾಖೆ ಕೆಲಸದ ಒತ್ತಡವನ್ನು ತಪ್ಪಿಸುವಂತೆ ಜಿಲ್ಲಾಧಿಕಾರಿಗಳನ್ನು ಕೋರಲಾಗಿದೆ. ● ಎನ್.ರಮೇಶ್,ಗೌರವಾಧ್ಯಕ್ಷ, ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘ
-ಸು.ನಾ.ನಂದಕುಮಾರ್