Advertisement

Parliament ; ಇಂದಿನಿಂದ ಸಂಸತ್‌ ಕಲಾಪದಲ್ಲಿ ಕಾವೇರುವ ಚರ್ಚೆ ಸಾಧ್ಯತೆ!

12:38 AM Jul 01, 2024 | Team Udayavani |

ಹೊಸದಿಲ್ಲಿ: ಕಳೆದ ವಾರ ಆರಂಭವಾಗಿರುವ ಸಂಸತ್‌ ಅಧಿವೇಶನ ಸೋಮವಾರದಿಂದ ಬಿರುಸು ಪಡೆ ಯುವ ಸಾಧ್ಯತೆಗಳು ಇವೆ. ಜೂ.24ರಿಂದ ಜೂ.28ರ ವರೆಗೆ ಪ್ರಮಾಣ ವಚನ ಸ್ವೀಕಾರ, ಸ್ಪೀಕರ್‌ ಆಯ್ಕೆ, ರಾಷ್ಟ್ರಪತಿಗಳ ಭಾಷಣಕ್ಕೆ ಮಾತ್ರ ಸೀಮಿತವಾಗಿತ್ತು. ಜು.1ರಿಂದ ಕೇಂದ್ರ ಸರಕಾರ ಮತ್ತು ವಿಪಕ್ಷಗಳ ನಡುವೆ ನೀಟ್‌ ಪ್ರಶ್ನೆ ಪ್ರತಿಕೆಗಳ ಸೋರಿಕೆ, ಹಣದುಬ್ಬರ ಏರಿಕೆ, ನಿರುದ್ಯೋಗ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆ ಇದೆ. ಇದರ ಜತೆಗೆ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಬಗ್ಗೆ ಚರ್ಚೆಯೂ ಶುರುವಾಗಲಿದೆ.

Advertisement

ಲೋಕಸಭೆಯಲ್ಲಿ ಮಾಜಿ ಸಚಿವ ಅನುರಾಗ್‌ ಠಾಕೂರ್‌ ಸರಕಾರದ ಪರವಾಗಿ ಚರ್ಚೆ ಆರಂಭಿಸಲಿದ್ದಾರೆ. ಆ ಬಳಿಕ ವಿವಿಧ ವಿಚಾರಗಳ ಬಗ್ಗೆ ಚರ್ಚೆ ಆರಂಭವಾಗಲಿದೆ. ಲೋಕಸಭೆಯಲ್ಲಿ ವಂದನಾ ನಿರ್ಣಯ ಕುರಿತಾದ ಚರ್ಚೆಗೆ 16 ಗಂಟೆಗಳನ್ನು ಮೀಸಲಿರಿಸಲಾಗಿದ್ದು, ಮಂಗಳವಾರ ಪ್ರಧಾನಿ ಮೋದಿ ಅವರು ಚರ್ಚೆ ಸಂಬಂಧಿಸಿದ ಪ್ರಶ್ನೆಗೆಳಿಗೆ ಉತ್ತರ ನೀಡುವ ಮೂಲಕ ಚರ್ಚೆ ಕೊನೆಗೊಳ್ಳಲಿದೆ. ರಾಜ್ಯಸಭೆಯಲ್ಲಿ ಚರ್ಚೆಗಾಗಿ 21 ಗಂಟೆ ಮೀಸಲಿರಿಸಲಾಗಿದ್ದು, ಪ್ರಧಾನಿ ಮೋದಿ ಬುಧವಾರ ರಾಜ್ಯಸಭೆಗೆ ಉತ್ತರಿಸುವ ಸಾಧ್ಯತೆಗಳಿದೆ.

ಶುಕ್ರವಾರ ವಂದನಾ ನಿರ್ಣಯದ ಬಳಿಕ ಚರ್ಚೆ ಆರಂಭಿಸಲು ಆಡಳಿತ ಪಕ್ಷ ಮುಂದಾದಾಗ ನೀಟ್‌ ಕುರಿತಂತೆಯೇ ಮೊದಲು ಚರ್ಚೆ ಆರಂಭವಾಗಬೇಕು ಎಂದು ವಿಪಕ್ಷಗಳು ಗದ್ದಲ ಎಬ್ಬಿಸಿದ ಹಿನ್ನೆಲೆಯಲ್ಲಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು.

ಹಿಂದಿನ 2 ಅವಧಿಯಲ್ಲಿ ವಿಪಕ್ಷಗಳು ದುರ್ಬಲವಾಗಿದ್ದವು. ಈ ಬಾರಿ ಕಾಂಗ್ರೆಸ್‌ ಅಧಿಕೃತ ವಿಪಕ್ಷವಾಗಿದ್ದು, ರಾಹುಲ್‌ ಗಾಂಧಿ ಲೋಕಸಭೆಯ ವಿಪಕ್ಷ ನಾಯಕರಾಗಿದ್ದಾರೆ. ಹೀಗಾಗಿ ಈ ಬಾರಿ ಚರ್ಚೆಗಳು ತೀವ್ರವಾಗುವ ನಿರೀಕ್ಷೆಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next