Advertisement

Annamalai; ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ?

10:20 PM Jul 02, 2024 | Team Udayavani |

ಚೆನ್ನೈ: ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಒಂದು ಸ್ಥಾನವನ್ನೂ ಗೆಲ್ಲಲು ಬಿಜೆಪಿ ವಿಫ‌ಲವಾದ ಬೆನ್ನಲ್ಲೇ ಒಂದು ತಿಂಗಳ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ಅಣ್ಣಾಮಲೈ ಅವರಿಗೆ ಲಂಡನ್‌ನಲ್ಲಿ ಫೆಲೋಶಿಪ್‌ ದೊರೆತಿದ್ದು, ಅವರು ಸದ್ಯದಲ್ಲೇ ಬ್ರಿಟನ್‌ಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

“ಚೆವೆನಿಂಗ್‌ ಗುರುಕುಲ್‌ ಫೆಲೋಶಿಪ್‌ ಫಾರ್‌ ಲೀಡರ್‌ಶಿಪ್‌ ಆ್ಯಂಡ್‌ ಎಕ್ಸಲೆನ್ಸ್‌’ ಕಾರ್ಯಕ್ರಮಕ್ಕೆ ಅವರು ಆಯ್ಕೆಯಾಗಿದ್ದು ಮೂರು ತಿಂಗಳು ಲಂಡನನಲ್ಲೇ ನೆಲೆಸಲಿದ್ದಾರೆ. ಈ ಬಗ್ಗೆ ಅವರು ಹೈಕಮಾಂಡ್‌ ಜತೆಯೂ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next