Advertisement
ಈ ರಸ್ತೆಯ ಮಧ್ಯ ಭಾಗದಲ್ಲಿ ಶಾಸಕರ ಆನುದಾನದಲ್ಲಿ 130 ಮೀ . ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಅಲ್ಲದೇ 100 ಮೀ.ಉದ್ದಕ್ಕೆ ಜಿ.ಪಂ.ನಿಧಿಯಿಂದ ಕಾಂಕ್ರೀಟ್ ಹಾಕಲಾಗಿದೆ ಬಿಟ್ಟರೆ ಉಳಿದೆಡೆಯಲ್ಲಿ ಹೊಂಡ ಗುಂಡಿಗಳು ಸರ್ವೇ ಸಾಮಾನ್ಯವಾಗಿವೆ. ಇದರಿಂದಾಗಿ ಸಂಚಾರ ವ್ಯವಸ್ಥೆಯ ಮೇಲೆ ಪರಿಣಾಮಗಳಾಗುತ್ತಿದೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎನ್ನುವ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಬಸ್ರೂರು -ಮಾರ್ಗೋಳಿಯ ತೆಂಕಬಾಗಿಲು ರಸ್ತೆಗೆ ಶಾಶ್ವತ ಪರಿಹಾರಕ್ಕಾಗಿ ಶಾಸಕರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.ಅಂತೆಯೇ ಸಂಸದರಿಗೂ ಈ ಬಗ್ಗೆ ಮನವಿ ನೀಡಲಾಗಿದ್ದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತಿಗೂ ಕಾಂಕ್ರೀಟ್ ಹಾಕುವಂತೆ ಮನವಿ ಮಾಡಲಾಗಿದ್ದು ಶ್ರೀಘ್ರವಾಗಿ ಕಾಮಗಾರಿ ಆರಂಭವಾಗಲಿದೆ
-ರಾಮ್‌ಕಿಶನ್ ಹೆಗ್ಡೆ ,
ಉಪಾಧ್ಯಕ್ಷರು ತಾ.ಪಂ.ಕುಂದಾಪುರ