Advertisement

ಬಿಜೆಪಿಯದ್ದು ಒಡೆದು ಆಳುವ ನೀತಿ

12:30 PM Jul 20, 2017 | Team Udayavani |

ಕೊಪ್ಪ: ಕಾಂಗ್ರೆಸ್‌ ಸಮಾಜದ ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿ ಗಮನದಲ್ಲಿಟ್ಟು ಕೊಂಡು ರಚನಾತ್ಮಕ ಕಾರ್ಯಕ್ರಮ ಅನುಷ್ಠಾನಕ್ಕೆ ತಂದರೆ ಅಳವಡಿಸಿಕೊಂಡು ಬಂದರೆ, ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಸಮಾಜ ಒಡೆದು ತನ್ನ ಬೇಳೆ
ಬೇಯಿಸಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ದೂರಿದರು.

Advertisement

ಅವರು ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಪಟ್ಟಣದ ಹೊರವಲಯದ ರಾಘವೇಂದ್ರನಗರದ ಶ್ರೀ ವರಮಹಾಲಕ್ಷ್ಮೀ 
ಸಮುದಾಯಭವನದಲ್ಲಿ ಏರ್ಪಡಿಸಿದ್ದ ರಾಜೀವ್‌ ಗಾಂಧಿ  ಪಂಚಾಯತ್‌ ರಾಜ್‌ ಸಂಘಟನೆಯ ಗ್ರಾಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್‌ನ ದೂರದೃಷ್ಟಿಯ ರಾಜಕೀಯ ಚಿಂತನೆಯಿಂದ ಪಂಚಾಯತ್‌ರಾಜ್‌  ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಎಸ್‌ಸಿ, ಎಸ್‌ಟಿ, ಮಹಿಳೆಯರು, ಶೋಷಿತ ವರ್ಗದವರು ಅಧಿಕಾರ ಹಿಡಿಯುವಂತಾಯಿತು. 3 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ತಿಳಿಸಿದ್ದ ನರೇಂದ್ರ ಮೋದಿ ಕಳೆದ ಮೂರು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಗೆ ಯಾವುದೇ ಕಾರ್ಯಕ್ರಮ ಹಾಕಿಕೊಂಡಿಲ್ಲ. ಕಾಂಗ್ರೆಸ್‌ನ ಕಾರ್ಯಕ್ರಮಗಳನ್ನೇ ಹೊಸ ಹೆಸರಿನಲ್ಲಿ ಜಾರಿಗೊಳಿಸುತ್ತಿದೆ ಎಂದು ವ್ಯಂಗ್ಯವಾಡಿದರು. ಎನ್‌ಆರ್‌ಇಜಿ ಎಂಬ ಕ್ರಾಂತಿಕಾರಿ ಯೋಜನೆಯನ್ನು ಉದ್ಯೋಗ ಸೃಷ್ಟಿಗೆ ಜಾರಿ ಮಾಡಿದ್ದು ಕಾಂಗ್ರೆಸ್‌. ಇದರಿಂದ ಕಾರ್ಮಿಕ ವರ್ಗದ ಬದುಕು ಹಸನಾಗಿದೆ. ಯುವ ಜನತೆಗೆ ಉದ್ಯೋಗ ನೀಡಲು ರಾಜ್ಯ ಸರ್ಕಾರ ಕೌಶಲ್ಯ ಅಭಿವೃದ್ಧಿ ಇಲಾಖೆಯನ್ನೇ ಸೃಷ್ಟಿಸಿದೆ ಎಂದರು.

ಎಐಸಿಸಿ ಕಾರ್ಯದರ್ಶಿ ಪಿ.ಸಿ.ವಿಷ್ಣುನಾಥನ್‌ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ರಾಜೀವ್‌ ಗಾಂಧಿ  ಪ್ರಧಾನಿಯಾಗಿದ್ದಾಗ ಜಾರಿಗೆ ತಂದಿದ್ದು, ಪಿ.ವಿ. ನರಸಿಂಹರಾವ್‌ ಪ್ರಧಾನಿಯಾಗಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದರು. ವಿಕೇಂದ್ರೀಕರಣ ನೀತಿಯಿಂದ ದೇಶದ ಆಡಳಿತ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ.

ದಲಿತರು, ಶೋಷಿತರು, ಕೆಳವರ್ಗದವರು ಒಳಗೊಂಡಂತೆ ಸಮಾಜದ ಎಲ್ಲಾ ಸ್ತರದವರು ಮುಖ್ಯವಾಹಿನಿಗೆ ಬರುವಂತಾಯಿತು ಎಂದು ತಿಳಿಸಿದರು. ಕಾಂಗ್ರೆಸ್‌ ವಿಕೇಂದ್ರೀಕರಣದಿಂದ ದೇಶದಲ್ಲಿ ಬದಲಾವಣೆ ತರಲು ಶ್ರಮಿಸಿದ್ದರೆ ಬಿಜಿಪಿ ಒಬ್ಬ ವ್ಯಕ್ತಿಯಿಂದ ಬದಲಾವಣೆ ಎನ್ನುತ್ತಿದೆ. ರಾಜ್ಯದಲ್ಲಿ ಸಿದ್ಧರಾಮಯ್ಯ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ವಿದ್ಯಾಸಿರಿ, ಸಾಲಮನ್ನಾ
ಮುಂತಾದ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು. ಜಿಪಂ ಮಾಜಿ
ಅಧ್ಯಕ್ಷ ಎಚ್‌.ಎಂ.ಸತೀಶ್‌, ಡಿ.ಎಸ್‌. ವಿಶ್ವನಾಥ ಶೆಟ್ಟಿ, ಗೋಪಾಲ್‌ ಭಂಡಾರಿ, ದೇವರಾಜ್‌, ಹೊನಗಾರ್‌ ಶಿವಪ್ಪನವರು
ಮಾತನಾಡಿದರು. ಕಾರ್ಯಕ್ರಮದಲ್ಲಿ ಪಕ್ಷದ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳನ್ನು ಅಭಿನಂದಿಸಲಾಯಿತು.

ಪಂಚಾಯತ್‌ ರಾಜ್‌ ಸಂಘಟನೆಯ ರಾಜ್ಯ ಸಂಚಾಲಕ ಬಿ.ಎಂ. ಸಂದೀಪ್‌, ಜಿಲ್ಲಾ ಸಂಚಾಲಕ ನವೀನ್‌ ಮಾವಿನಕಟ್ಟೆ, ಪಕ್ಷದ ಜಿಲ್ಲಾಧ್ಯಕ್ಷ ಡಾ| ಡಿ.ಎಲ್‌. ವಿಜಯಕುಮಾರ್‌ ಮುಖಂಡರಾದ ಬಿ.ಸಿ.ಗೀತಾ, ಟಿ.ಡಿ. ರಾಜೇಗೌಡ, ಸಚಿನ್‌ ಮೀಗಾ ಎಂ.ಎಚ್‌. ಸು ಧೀರ್‌ ಕುಮಾರ್‌ ಮುರೊಳ್ಳಿ, ಸೀತಾಲಕ್ಷ್ಮೀ, ಅನ್ನಪೂರ್ಣ ನರೇಶ್‌, ಚಂದ್ರೇಗೌಡ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next