ಬೆಂಗಳೂರು: ಏಳು ದಿನ… 20ಕ್ಕೂ ಹೆಚ್ಚು ಸರಗಳವು… ಪೊಲೀಸ್ ರಿವಾಲ್ವರ್‌ನಿಂದ ಹೊರಬಿದ್ದ ನಾಲ್ಕು ಬುಲೆಟ್‌ಗಳು… ಗಾಯಗೊಂಡು ಆಸ್ಪತ್ರೆ ಸೇರಿದ ಇಬ್ಬರು ಕುಖ್ಯಾತ ಸರಗಳ್ಳರು…
ಗುಂಡೇಟು ತಿಂದಿರುವ ಸುರೇಂದ್ರ ಸಿಂಗ್ ಹಾಗೂ ಕರಣ್ ಗುಪ್ತಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಆರೋಪಿಗಳು, ನಗರದ ವಿವಿಧ ಭಾಗಗಳಲ್ಲಿ ಏಳು ದಿನಗಳಲ್ಲಿ 20ಕ್ಕೂ ಹೆಚ್ಚು ಸರಗಳ್ಳತನ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.
ಸರಗಳವು ಪ್ರಕರಣಗಳ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನಕ್ಕೆ ರಚಿಸಿದ್ದ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಆರೋಪಿಗಳ ಬಗ್ಗೆ ಸುಳಿವು ದೊರೆತಿತ್ತು. ಭಾನುವಾರ ಬೆಳಗ್ಗೆ 5.30ರ ಸುಮಾರಿಗೆ ರಾಮಯ್ಯ ಲೇಔಟ್‌ನಲ್ಲಿ ಮಹಿಳೆಯೊಬ್ಬರ ಸರ ಕಿತ್ತ ಬಗ್ಗೆ ಮಾಹಿತಿ ಆಧರಿಸಿ ಬಾಗಲಕುಂಟೆ ಠಾಣೆ ಇನ್ಸ್‌ಪೆಕ್ಟರ್ ಶಿವಸ್ವಾಮಿ ಹಾಗೂ ನಂದಿನಿ ಲೇಔಟ್ ಠಾಣೆ ಇನ್ಸ್‌ಪೆಕ್ಟರ್ ಲೋಹಿತ್ ನೇತೃತ್ವದ ತಂಡಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದವು.
ಸೋಮವಾರ ಮುಂಜಾನೆ 6 ಗಂಟೆ ಸುಮಾರಿಗೆ ಆರೋಪಿಗಳಿಬ್ಬರು ಕುದುರೆ ಕ್ರಾಸ್‌ನಲ್ಲಿ ಪೊಲೀಸರ ಕಣ್ತಪ್ಪಿಸಿ ಸಾಸರಘಟ್ಟ ಗ್ರಾಮದ ಮಣ್ಣಿನ ರಸ್ತೆ ತಲುಪಿ ದ್ದರು. ಈ ವೇಳೆ ಸುರೇಂದ್ರಸಿಂಗ್‌ನನ್ನು ಹಿಡಿಯಲು ಬಾಗಲಗುಂಟೆ ಠಾಣೆಯ ಪ್ರೊಬೆಷನರಿ ಪಿಎಸ್‌ಐ ಪ್ರಭು ಹಾಗೂ ಪೊಲೀಸ್ ಪೇದೆ ಪ್ರಕಾಶ್ ಕಿಲಾರಿ ಅವರು ಮುಂದಾದಾಗ, ಆರೋಪಿ ಅವರ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಕೂಡಲೇ ಇನ್‌ಸ್ಪೆಕ್ಟರ್ ಶಿವಸ್ವಾಮಿ, ರಿವಾಲ್ವರ್‌ನಿಂದ ಒಂದು ಸುತ್ತು ಗುಂಡು ಹಾರಿಸಿ, ಸುರೇಂದ್ರನಿಗೆ ಶರಣಾಗುವಂತೆ ಸೂಚಿಸಿದರೂ ಒಪ್ಪದೆ ಹಲ್ಲೆ ಮುಂದುವರಿಸಿದ್ದ ಹೀಗಾಗಿ ಆತ್ಮರಕ್ಷಣೆ ಸಲುವಾಗಿ ಸುರೇಂದ್ರ ಸಿಂಗ್‌ನ ಎರಡೂ ಕಾಲಿಗೆ ಒಂದೊಂದು ಗುಂಡು ಹೊಡೆದಿದ್ದಾರೆ.
Advertisement
ಪಲ್ಸರ್ ಬೈಕ್‌ನಲ್ಲಿ ಸುತ್ತಾಡಿ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗಿ ಸಾರ್ವಜನಿಕರಿಗೆ ತಲೆ ನೋವಾಗಿದ್ದ ಇಬ್ಬರು ನವದೆಹಲಿ ಮೂಲದ ಸರ ಗಳ್ಳರಿಗೆ ಉತ್ತರ ವಿಭಾಗದ ಪೊಲೀಸರು ಸೋಮವಾರ ಬೆಳಗ್ಗೆ ಗುಂಡೇಟಿನ ರುಚಿ ತೋರಿಸಿದ್ದಾರೆ.
Related Articles
Advertisement
ಮತ್ತೂಂದೆಡೆ ಸ್ವಲ್ಪವೇ ದೂರದಲ್ಲಿ ಮತ್ತೂಂದು ತಂಡ ಕರಣ್ ಗುಪ್ತಾನನ್ನು ಬಂಧನಕ್ಕೆ ತೆರಳಿತ್ತು. ಈ ವೇಳೆ ನಂದಿನಿ ಲೇಔಟ್ ಠಾಣೆಯ ಪ್ರೊಬೆಷನರಿ ಪಿಎಸ್‌ಐ ರಾಜಾಸಾಬ್ ಹಾಗೂ ಪೇದೆ ಗಣೇಶ್ ವಿರುದ್ಧ ತಿರುಗಿಬಿದ್ದ ಆರೋಪಿ ಕರಣ್, ಚಾಕುವಿನಿಂದ ಇಬ್ಬರಿಗೂ ಇರಿಯಲು ಯತ್ನಿಸಿದ್ದಾನೆ. ಆಗ ಸ್ಥಳದಲ್ಲೇ ಇದ್ದ ಇನ್‌ಸ್ಪೆಕ್ಟರ್ ಲೋಹಿತ್, ಆತ್ಮರಕ್ಷಣೆಗಾಗಿ ಕರಣ್ ಗುಪ್ತಾನ ಎರಡೂ ಕಾಲಿಗೆ ಗುಂಡು ಹೊಡೆದಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ಇಬ್ಬರೂ ಆರೋಪಿಗಳನ್ನು ಬಂಧಿಸಿ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಾರ್ಯಾಚರಣೆ ವೇಳೆ ಆರೋಪಿಗಳ ಹಲ್ಲೆಯಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿಗೂ ಚಿಕಿತ್ಸೆ ಕೊಡಿಸಲಾಗಿದೆ ಎಂದು ಹಿರಿಯ ಅಧಿಕಾರಿ ವಿವರಿಸಿದರು.
5 ನಿಮಿಷ; 2 ಸರಗಳವು: ಆರೋಪಿಗಳಿಬ್ಬರೂ ನೆಲಮಂಗಲ, ಬಾಗಲಕುಂಟೆ, ಸೋಲದೇವನಹಳ್ಳಿ, ಮಾದನಾಯಕನಹಳ್ಳಿ ಸೇರಿ ಹಲವೆಡೆ ಸರಕಳ್ಳತನ ಕೃತ್ಯಗಳನ್ನು ಎಸಗಿ ಪರಾರಿಯಾಗಿದ್ದರು.
ಪಲ್ಸರ್ ಬೈಕ್ ಹತ್ತಿ ಮುಂಜಾನೆ ಅಥವಾ ಸಂಜೆ ವೇಳೆ ಕೃತ್ಯಕ್ಕೆ ಅಣಿಯಾಗುತ್ತಿದ್ದ ಆರೋಪಿಗಳು, ಒಮ್ಮೆ ರಸ್ತೆಗೆ ಇಳಿದರೆ ಕನಿಷ್ಠ ಮೂರು ಸರಗಳವು ಮಾಡುತ್ತಿದ್ದರು. ಐದು ಅಥವಾ ಹತ್ತು ನಿಮಿಷಗಳ ಅಂತರದಲ್ಲಿ ಇಬ್ಬರು ಮಹಿಳೆಯರ ಸರ ಕೀಳುತ್ತಿದ್ದರು. ಮೇ 12ರಂದು ಮಧ್ಯಾಹ್ನ ನೆಲಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇವಲ ಐದು ನಿಮಿಷಗಳ ಅಂತರದಲ್ಲಿ ಎರಡು ಸರ ಕದ್ದಿದ್ದರು. ಮಾರನೇ ದಿನ ಬಾಗಲಕುಂಟೆಯಲ್ಲೂ ಎರಡು ಸರಗಳವು ಮಾಡಿದ್ದರು ಎಂದು ಹಿರಿಯ ಅಧಿಕಾರಿ ತಿಳಿಸಿದರು.
ಚಾಟ್ಸ್ ಅಂಗಡಿ ಮಾಲೀಕರು: ದೆಹಲಿಯಲ್ಲಿ ಚಾಟ್ಸ್ ಅಂಗಡಿ ನಡೆಸುವ ಆರೋಪಿಗಳು, ಸರಗಳ್ಳತನ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ದೆಹಲಿ ಪೊಲೀಸರಿಂದ ಬಂಧಿತರಾಗಿದ್ದ ಮಾಹಿತಿಯಿದೆ. ವಿಮಾನದ ಮೂಲಕ ನಗರಕ್ಕೆ ಆಗಮಿಸಿದ್ದ ಆರೋಪಿಗಳು, ಬ್ಯಾಡರಹಳ್ಳಿಯಲ್ಲಿ ವಾಸವಿದ್ದರು. ಸಂಬಂಧಿಕರೊಬ್ಬರ ಹೆಸರಿನಲ್ಲಿ ಪಲ್ಸರ್ ಬೈಕ್ ಖರೀದಿಸಿ ಸರಗಳವು ಮಾಡಿ ಐಶಾರಾಮಿ ಜೀವನ ನಡೆಸುತ್ತಿದ್ದರು ಎಂದು ಅಧಿಕಾರಿ ಹೇಳಿದರು.
ಮಹಿಳೆಯರ ಮುಖ, ತಲೆಗೆ ಪೆಟ್ಟು
ಆರೋಪಿಗಳು ಸರ ಕಿತ್ತುಕೊಳ್ಳುವ ಭರದಲ್ಲಿ ಮಹಿಳೆಯೊಬ್ಬರನ್ನು ಬಲವಾಗಿ ತಳ್ಳಿದ್ದು ಅವರ ಮುಖಕ್ಕೆ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮತ್ತಿಬ್ಬರು ಮಹಿಳೆಯರಿಗೆ ತಲೆಗೆ ಹಾಗೂ ಕತ್ತಿನ ಭಾಗದಲ್ಲಿ ಗಾಯಗಳಾಗಿವೆ ಎಂದು ಅಧಿಕಾರಿ ಮಾಹಿತಿ ನೀಡಿದರು.ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಬಂದಿದ್ದರಿಂದ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್‌ಗಳು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಆರೋಪಿಗಳು 20ಕ್ಕೂ ಹೆಚ್ಚು ಸರಗಳವು ಮಾಡಿದ್ದು, ಚಿಕಿತ್ಸೆ ಬಳಿಕ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು.
● ಎನ್. ಶಶಿಕುಮಾರ್, ಉತ್ತರ ವಿಭಾಗದ ಡಿಸಿಪಿ
● ಎನ್. ಶಶಿಕುಮಾರ್, ಉತ್ತರ ವಿಭಾಗದ ಡಿಸಿಪಿ